ಮುಂಬಯಿಯಲ್ಲಿ್ಙ30 ಸಾವಿರಕ್ಕೆ ಪೌರತ್ವ!

Contributed byvijay.cheelange@timesgroup.com|Vijaya Karnataka

ಮುಂಬಯಿಯಲ್ಲಿ ಅಕ್ರಮ ವಲಸಿಗರಿಗೆ 30 ಸಾವಿರ ರೂ.ಗೆ ಪೌರತ್ವ ಸಿಗುತ್ತಿದೆ. ರಾಷ್ಟ್ರೀಯ ಸುದ್ದಿವಾಹಿನಿಯ ಕುಟುಕು ಕಾರ್ಯಾಚರಣೆಯಲ್ಲಿ ಇದು ಬಯಲಾಗಿದೆ. 61 ಪ್ರದೇಶಗಳಲ್ಲಿ 3,014 ಬಾಂಗ್ಲಾದೇಶಿ ಮತ್ತು ಮ್ಯಾನ್ಮಾರ್‌ನ ಮುಸ್ಲಿಮರು ನೆಲೆಸಿದ್ದಾರೆ. ಏಜೆಂಟರು 7,000 ರೂ.ಗಳಿಂದ 30,000 ರೂ.ಗಳಿಗೆ ಗುರುತಿನ ಚೀಟಿಗಳನ್ನು ಒದಗಿಸುತ್ತಿದ್ದಾರೆ. 7,000ಕ್ಕೂ ಹೆಚ್ಚು ಜನರನ್ನು ಸಂದರ್ಶಿಸಲಾಗಿದ್ದು, 3,014 ಮಂದಿ ಅಕ್ರಮ ವಲಸಿಗರು ಎಂದು ದೃಢಪಟ್ಟಿದೆ.

citizenship in mumbai for 30000 illicit immigration cases exposed

ಮುಂಬಯಿ: ಅಸ್ಸಾಂ, ತ್ರಿಪುರಾ, ಪಶ್ಚಿಮ ಬಂಗಾಳಕ್ಕೆ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಿಂದ ಬೃಹತ್ ಸಂಖ್ಯೆಯ ಅಕ್ರಮ ವಲಸಿಗರು ನುಸುಳುತ್ತಿರುವುದನ್ನು ರಾಷ್ಟ್ರೀಯ ಸುದ್ದಿವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆ ಬಹಿರಂಗಪಡಿಸಿದೆ. ನಗರದಾದ್ಯಂತ 61 ಪ್ರದೇಶಗಳಲ್ಲಿ3,014 ಬಾಂಗ್ಲಾದೇಶಿಗರು ಮತ್ತು ಮ್ಯಾನ್ಮಾರ್ ನ ಮುಸ್ಲಿಮರು ನೆಲೆಸಿರುವುದು ಕಾರ್ಯಾಚರಣೆಯಲ್ಲಿಬಯಲಾಗಿದೆ. ಹೆಚ್ಚಿನ ಮಂದಿ ಸೂಕ್ತ ವೀಸಾಗಳಿಲ್ಲದೆಯೇ ಭಾರತವನ್ನು ಪ್ರವೇಶಿಸಿದ್ದಾರೆ ಮತ್ತು ಮತದಾರರ ಗುರುತಿನ ಚೀಟಿಗಳು ಸೇರಿದಂತೆ ಇತರ ಗುರುತಿನ ದಾಖಲೆಗಳನ್ನು ಹೊಂದಿದ್ದಾರೆ ಎಂಬ ಸ್ಫೋಟಕ ಮಾಹಿತಿ ಕಾರ್ಯಾಚರಣೆಯಲ್ಲಿಹೊರಬಿದ್ದಿದೆ. ನಗರದ ವಿವಿಧ ಸ್ಥಳಗಳಲ್ಲಿಏಜೆಂಟರು 7,000 ರೂ. ಗಳಿಂದ 30,000 ರೂ. ಗಳವರೆಗಿನ ಶುಲ್ಕಕ್ಕೆ ಸಂಪೂರ್ಣ ಗುರುತಿನ ಚೀಟಿಗಳನ್ನು ಒದಗಿಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ7,000 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಸಂದರ್ಶಿಸಲಾಗಿದ್ದು, ಆ ಪೈಕಿ 3,014 ಜನರು ಅಕ್ರಮ ನುಸುಳುಕೋರರು ಎಂದು ಅವರು ಪ್ರದರ್ಶಿಸಿದ ನಕಲಿ ದಾಖಲೆಗಳಿಂದ ದೃಢಪಟ್ಟಿದೆ. ಇವರ ಪೈಕಿ ಶೇ.96ರಷ್ಟು ಜನರು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನ ಮುಸ್ಲಿಮರು ಎನ್ನುವುದು ಗಮನಾರ್ಹ. ‘‘ಯಾವುದೇ ಅಕ್ರಮ ವಲಸಿಗರು ಬಂದರೂ ಸ್ಥಳೀಯ ಏಜೆಂಟರ ಬಳಿ ಹೋಗುತ್ತಾರೆ. ಏಜೆಂಟ್ ಗಳು ಅವರಿಗೆ ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಆಧಾರ್ ಮತ್ತು ಪ್ಯಾನ್ ಕಾರ್ಡ್ ಗಳು ಸೇರಿದಂತೆ ಎಲ್ಲವನ್ನೂ ಒದಗಿಸುತ್ತಾರೆ,’’ ಸ್ಥಳೀಯ ನಿವಾಸಿ ಮೊಂಡಲ್ ಹೇಳಿದ್ದಾರೆ.