ವಿಕ ಸುದ್ದಿಲೋಕ ಭಾಲ್ಕಿ ಮಾಜಿ ಸಚಿವರು, ಶತಾಯುಷಿ ಡಾ.ಭೀಮಣ್ಣ ಖಂಡ್ರೆ(102) ಅವರ ಆರೋಗ್ಯದಲ್ಲಿಮಂಗಳವಾರ ಸ್ವಲ್ಪ ಮಟ್ಟಿನ ಚೇತರಿಕೆ ಕಂಡು ಬಂದಿದೆ. ಪಟ್ಟಣದ ಮನೆ ಯಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗುತ್ತಿದ್ದು, ಕಳೆದ ಎರಡ್ಮೂರು ದಿನಗಳಿಗೆ ಹೋಲಿಸಿದರೆ ಡಾ.ಭೀಮಣ್ಣ ಖಂಡ್ರೆ ಅವರ ಆರೋಗ್ಯದಲ್ಲಿಚೇತರಿಕೆ ಕಂಡು ಬಂದಿದೆ. ಉಸಿರಾಟದ ಮಟ್ಟ ಏರಿಕೆಯಾಗಿದೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ನಾನಾ ಶ್ರೀಗಳು ಭೇಟಿ : ನಾನಾ ಮಠಾಧೀಶರು, ಗಣ್ಯರು ಖಂಡ್ರೆ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಗದಗ ಜಿಲ್ಲೆಯ ಬಾಳೆ ಹೊಸೂರ ಮಠದ ದಿಂಗಾಲೇಶ್ವರ ಸ್ವಾಮೀಜಿ, ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು, ಮುಗುಳಖೋಡ ಶ್ರೀಗಳು, ಹುಡುಗಿ ಶ್ರೀಗಳು, ಹಣೆನಾಗಾಂವ ಶ್ರೀಗಳು ಸೇರಿ, ಹಿರಿಯ ಮುಖಂಡ ಗುರುನಾಥ ಕೊಳ್ಳುರು, ಡಿ.ಕೆ.ಸಿದ್ರಾಮ ಸೇರಿ ಹಲವರು ಭೇಟಿ ನೀಡಿ ಡಾ.ಭೀಮಣ್ಣ ಖಂಡ್ರೆ ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖ ಹೊಂದಲಿ ಎಂದು ಪ್ರಾರ್ಥಿಸಿದರು.

