ಸೂರ್ಯಪ್ರೇರಿತ ಒಡವೆ ಸೊಬಗು
ಭಾಗ್ಯ ನಂಜುಂಡಸ್ವಾಮಿ
ಇಂಟ್ರೊ: ಸಂಕ್ರಾಂತಿ ಸಡಗರಕ್ಕೆ ಸೂರ್ಯನ ಚಿತ್ತಾರದ ಒಡವೆಗಳ ಸಿಂಗಾರ.
ಸ್ಲಗ್ ; ಒಡವೆ ಒನಪು
ಸೂರ್ಯನ ಪಥ ಬದಲಾಗುವ ಮಕರ ಸಂಕ್ರಾಂತಿ ಹಬ್ಬದ ಸೊಬಗು ಹೆಚ್ಚಿಸಲು ಸೂರ್ಯ ಸೂಚಕ ಆಭರಣಗಳು ಸದ್ಯ ಟ್ರೆಂಡಿಂಗ್ ನಲ್ಲಿವೆ.
ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಸಂಕ್ರಾಂತಿಗೆ ಸೂರ್ಯ ಮತ್ತು ಪ್ರಕೃತಿ ಪ್ರೇರಿತ ಆಭರಣಗಳು ಗಮನ ಸೆಳೆಯುತ್ತಿದ್ದು, ಸೂರ್ಯನ ಕಿರಣ, ಹೂವಿನ ವಿನ್ಯಾಸ, ಗಾಳಿಪಟಗಳ ಆಕಾರಗಳಲ್ಲಿವಿಭಿನ್ನವಾಗಿ ಸೆಳೆಯುತ್ತವೆ.
ದೇಸಿ ಲುಕ್ ನೀಡುವ ಆಭರಣ
ಸೂರ್ಯ ಕಿರಣ ವಿನ್ಯಾಸ, ಹೂವು, ಎಲೆ, ನವಿಲು, ಚಿಟ್ಟೆ ಮೊದಲಾದ ಶುಭಕರ ಹಾಗೂ ಪ್ರಕೃತಿಗೆ ಸಂಬಂಧಿಸಿದ ವಿನ್ಯಾಸಗಳು ಬಹಳ ಜನಪ್ರಿಯ. ದೇಸಿ ಲುಕ್ ನೀಡಲು ವಿಭಿನ್ನ ಶೈಲಿಯ ಜುಮುಕಿಗಳು ಹಬ್ಬದ ಆಕರ್ಷಣೆ ಹೆಚ್ಚಿಸಿಕೊಂಡಿವೆ. ಮುತ್ತಿನ ಚೋಕರ್ ಗಳು, ಕುಂದನ್ ಸೆಟ್ ಗಳು, ರೂಬಿ, ಎಮರಾಲ್ಡ… ಅಥವಾ ಡೈಮಂಡ್ ಆಭರಣಗಳು ವೈಭವ ಮತ್ತು ಮೆರುಗು ಹೆಚ್ಚಿಸುತ್ತವೆ. ಆಕ್ಸಿಡೈಸ್ ಬೆಳ್ಳಿಯ ಚೋಕರ್ , ಕಿವಿಯೋಲೆ, ಮುಗೂತಿ, ಉಂಗುರಗಳಲ್ಲಿಸೂರ್ಯನ ಕಿರಣಗಳ ಚಿತ್ತಾರ ಹೆಚ್ಚಾಗಿ ಕಾಣಿಸುತ್ತವೆ. ಟೆರ್ರೊಕೋಟ ಆಭರಣಗಳಲ್ಲಿಸೂರ್ಯ, ಪ್ರಕೃತಿ, ಗಾಳಿಪಟದ ಆಕಾರಗಳು ಗಣನೀಯವಾಗಿ ಕಂಡು ಬರುತ್ತವೆ.
ಬಣ್ಣದ ಸೆಳೆತ
ಸೂರ್ಯ ಮತ್ತು ಸಮೃದ್ಧಿಯ ಸಂಕೇತವಾದ ಹಳದಿ, ಕಿತ್ತಳೆ, ಕೆಂಪು, ಎಮರಾಲ್ಡ… ಹಸಿರು ಮತ್ತು ನೀಲಿ ರತ್ನಗಳು ಉತ್ಸಾಹ ಮತ್ತು ಚೈತನ್ಯವನ್ನು ತರುತ್ತವೆ. ಈ ಬಣ್ಣಗಳ ಒಡವೆಗಳ ಮೂಲಕ ಹಬ್ಬದ ಸೊಬಗು ಹೆಚ್ಚಿಸಬಹುದು.
ಯಾರಿಗೆ ಯಾವ ಆಭರಣ ಸೂಕ್ತ
ಆಭರಣದ ಮೊದಲ ಸೂತ್ರ ಎಂದರೆ ಆಭರಣವು ಕೇವಲ ಅಲಂಕಾರವಲ್ಲ. ಅದು ವ್ಯಕ್ತಿತ್ವದ ಪ್ರತಿಬಿಂಬ. ಮೃದುವಾದ, ಶಾಂತ ಸ್ವಭಾವದವರಿಗೆ ಸೂಕ್ತ ಆಭರಣವೆಂದರೆ ಮುತ್ತಿನ ಆಭರಣ, ಸಣ್ಣ ಚಿನ್ನದ ಚೈನ್ , ಮಿನಿಮಲ್ ಸ್ಟಡ್ ಕಿವಿಯೋಲೆ. ಏಕೆಂದರೆ ಮುತ್ತಿನ ಶಾಂತ ಕಿರಣಗಳು ಅವರ ಒಳಗಿನ ಸೌಮ್ಯತೆಯನ್ನು ಪ್ರತಿಬಿಂಬಿಸುತ್ತವೆ.
ಆತ್ಮವಿಶ್ವಾಸಿ, ಉತ್ಸಾಹಿ ವ್ಯಕ್ತಿತ್ವದವರಿಗೆ ದೊಡ್ಡ ಚಂದ್ರಾಕಾರದ ಅಥವಾ ಸೂರ್ಯಾಕಾರದ ಕಿವಿಯೋಲೆ, ಸ್ಟೇಟ್ಮೆಂಟ್ ನೆಕ್ಲೆಸ್ , ಕೆಂಪು, ಕಿತ್ತಳೆ ರತ್ನಗಳ ಆಭರಣ. ಇಂತಹವರು ಗಮನ ಸೆಳೆಯುವ ಆಭರಣಗಳಿಗೆ ಸೂಕ್ತರು.
ಪ್ರೀತಿಯ ವ್ಯಕ್ತಿಗೆ ಕೊಡುವ ಆಭರಣ ನೀಡುವಾಗ ಭಾವನೆ ಮುಖ್ಯ. ಪತ್ನಿ ಅಥವಾ ಪ್ರೇಯಸಿಗೆ ಸೂಕ್ತ ಆಭರಣವೆಂದರೆ ಹೃದಯಾಕಾರದ ಲಾಕೆಟ್ . ಸೂರ್ಯಕಿರಣ ವಿನ್ಯಾಸದ ಚಿನ್ನದ ಹಾರ ಸೂಕ್ತ. ಏಕೆಂದರೆ ಇದು ಜೀವನದ ಬೆಳಕು ಎಂಬ ಸಂದೇಶ ಸಾರುತ್ತದೆ. ಮಗಳಿಗೆ ಸಣ್ಣ ಸೂರ್ಯಾಕಾರದ ಪೆಂಡೆಂಟ್ ಅಥವಾ ಕಲರ್ ಸ್ಟೋನ್ ಬಳಸಿ ತಯಾರಿಸಿದ ಬ್ರೇಸ್ ಲೆಟ್ ನೀಡಬಹುದು. ಏಕೆಂದರೆ ಅವಳ ಭವಿಷ್ಯ ಬೆಳಗಲಿ ಎಂಬ ಆಶಯದಿಂದ ಆಭರಣಗಳನ್ನು ಉಡುಗೊರೆಯಾಗಿ ನೀಡಬಹುದು.

