ಹಬ್ಬದೂಟದಲ್ಲಿಸೂಪರ್ ಫುಡ್
ಲವಲವಿಕೆ ಸುದ್ದಿಲೋಕ
ಮಕರ ಸಂಕ್ರಾಂತಿ ದೇಶದೆಲ್ಲಡೆ ವಿಭಿನ್ನವಾಗಿ ಆಚರಿಸಲ್ಪಡುತ್ತದೆ. ಪ್ರದೇಶ, ಹವಾಮಾನಕ್ಕೆ ಅನುಗುಣವಾಗಿ ಹಬ್ಬದ ಅಡುಗೆಯ ತಯಾರಿಯೂ ನಡೆಯುತ್ತದೆ. ಬೆಂಗಳೂರಿನ ಸುತ್ತಮುತ್ತಲಿನ ಊರುಗಳಲ್ಲಿಈ ಹಬ್ಬದಲ್ಲಿ ಪೊಂಗಲ್ ಅಗತ್ಯದ ತಿನಿಸು. ಕಡಲೆ ಬೀಜ, ಎಲ್ಚಿ ಹಣ್ಣು, ಅವರೆ ಕಾಳು, ಕಬ್ಬು, ಗೆಣಸು ಮತ್ತಿತರ ಪದಾರ್ಥಗಳನ್ನು ನಾನಾ ರೀತಿ ಬಳಸುವುದು ಸಂಪ್ರದಾಯ. ಇವೆಲ್ಲವೂ ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಈ ಹಬ್ಬದಲ್ಲಿಸೇವಿಸುವ ಆಹಾರ ಪದಾರ್ಥಗಳ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿವೆ.
ಎಳ್ಳು ಮತ್ತು ಬೆಲ್ಲ
ಸಂಕ್ರಾಂತಿಯ ಪ್ರಮುಖ ಆಕರ್ಷಣೆ ಎಳ್ಳು-ಬೆಲ್ಲ. ಎಳ್ಳು ದೇಹಕ್ಕೆ ಅಗತ್ಯವಾದ ಉಷ್ಣತೆಯನ್ನು ನೀಡುತ್ತದೆ. ಇದು ದೇಹವನ್ನು ಬೆಚ್ಚಗಿಡಲು ಸಹಕಾರಿ. ಎಳ್ಳಿನಲ್ಲಿಕ್ಯಾಲ್ಷಿಯಂ, ಸತು ಮತ್ತು ಆರೋಗ್ಯಕರ ಕೊಬ್ಬುಗಳಿವೆ. ಬೆಲ್ಲವು ಕಬ್ಬಿಣದ ಅಂಶದ ಗಣಿಯಾಗಿದ್ದು, ರಕ್ತಹೀನತೆಯನ್ನು ತಡೆಯುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಪೊಂಗಲ್
ಹೆಸರುಬೇಳೆ ಮತ್ತು ಅಕ್ಕಿಯ ಮಿಶ್ರಣವು ಸುಲಭವಾಗಿ ಜೀರ್ಣವಾಗುತ್ತದೆ. ಇದರಲ್ಲಿರುವ ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಗಳು ದಿನವಿಡೀ ಕೆಲಸ ಮಾಡಲು ಶಕ್ತಿಯನ್ನು ನೀಡುತ್ತವೆ. ಸಕ್ಕರೆ ಪೊಂಗಲ್ ಅನ್ನು ಹೊಸ ಅಕ್ಕಿ, ಬೆಲ್ಲಮತ್ತು ಹಾಲಿನಿಂದ ತಯಾರಿಸಲಾಗುತ್ತದೆ. ಇದು ತಕ್ಷಣದ ಶಕ್ತಿಯನ್ನು ನೀಡುತ್ತದೆ. ಗೋಡಂಬಿ ಮತ್ತು ದ್ರಾಕ್ಷಿಗಳು ಆ್ಯಂಟಿ-ಆಕ್ಸಿಡೆಂಟ್ ಗಳನ್ನು ಒದಗಿಸುತ್ತವೆ.
ಕಬ್ಬು
ಕಬ್ಬು ತಿನ್ನುವುದರಿಂದ ಹಲ್ಲುಮತ್ತು ಒಸಡುಗಳು ಬಲಗೊಳ್ಳುತ್ತವೆ. ಕಬ್ಬಿನ ಹಾಲು ಯಕೃತ್ತಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ಹೈಡ್ರೇಟ್ ಆಗಿಡುತ್ತದೆ.
ಗೆಣಸು
ಚಳಿಗಾಲದ ಸೂಪರ್ ಫುಡ್ ಇದು. ಇದರಲ್ಲಿರುವ ವಿಟಮಿನ್ ಗಳು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ. ನಾರಿನಂಶ ಕರುಳಿನ ಆರೋಗ್ಯ ವೃದ್ಧಿಸುತ್ತದೆ. ತ್ವಚೆಯ ಆರೋಗ್ಯಕ್ಕೂ ಪೂರಕ.
ಅವರೆ ಕಾಳು
ಇದರಲ್ಲಿವಿಟಮಿನ್ , ಮಿನರಲ್ಸ್ , ಪ್ರೊಟೀನ್ ಗಳು ಹೇರಳವಾಗಿವೆ. ಹೃದಯದ ಆರೋಗ್ಯ, ಶ್ವಾಸಕೋಶದ ಆರೋಗ್ಯ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪೂರಕ.

