ವಿವೇಕರ ಚಿಂತನೆ ಅಳವಡಿಸಿಕೊಳ್ಳಿ
ವಿಕ ಸುದ್ದಿಲೋಕ ವಿಜಯಪುರ
ಕವಲಗಿಯ ಸಂಗನಬಸವ ವಸತಿ ಪಿಯು ಕಾಲೇಜ್ ನಲ್ಲಿಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಹಯೋಗದಲ್ಲಿಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ರಾಷ್ಟ್ರೀಯ ಯುವ ದಿನ ಆಚರಿಸಲಾಯಿತು.
ಎಬಿವಿಪಿ ಜಿಲ್ಲಾಸಂಚಾಲಕ ಸಂದೀಪ್ ಅರಳಗುಂಡಿ ಮಾತನಾಡಿ, ‘‘ಎಬಿವಿಪಿ ವಿದ್ಯಾರ್ಥಿಗಳ ಪರ ಶೈಕ್ಷಣಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿ ನಿರಂತರವಾಗಿ ಹೋರಾಡುವ ಕೆಲಸ ಮಾಡುತ್ತಿದೆ,’’ ಎಂದರು.
ಪ್ರಾಚಾರ್ಯ ಹೇಮಂತ ಕೃಷ್ಣ ಮಾತನಾಡಿ, ‘‘ಬಲಿಷ್ಠ ರಾಷ್ಟ್ರ ನಿರ್ಮಾಣದ ಕನಸು ಕಂಡ ಸರಳ ಸಂತ, ಮಹಾನ್ ಯೋಗಿ ಸ್ವಾಮಿ ವಿವೇಕಾನಂದರು ಸದಾ ಸ್ಮರಣೀಯರು. ವಿದ್ಯಾರ್ಥಿಗಳು ಶಿಕ್ಷಣ, ಶಿಸ್ತು, ಸೇವೆ ಮತ್ತು ರಾಷ್ಟ್ರಭಕ್ತಿ ಎಂಬ ಮೌಲ್ಯಗಳನ್ನು ಜೀವನದಲ್ಲಿಅಳವಡಿಸಿಕೊಳ್ಳಬೇಕು,’’ ಎಂದರು.
ಎಬಿವಿಪಿ ಕರ್ನಾಟಕ ಉತ್ತರಪ್ರಾಂತದ ಉಪಾಧ್ಯಕ್ಷ ಡಾ.ಸುಮಾ ಬೋಳರೆಡ್ಡಿ ಮಾತನಾಡಿದರು. ಉಪನ್ಯಾಸಕ ಪ್ರಶಾಂತ ಪಾಟೀಲ, ಕಾಲೇಜ್ ನ ಎಲ್ಲಾಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಇದ್ದರು.
ಎಬಿವಿಪಿ-ಬಿಜೆಪಿ13
ಕವಲಗಿಯ ಸಂಗನಬಸವ ವಸತಿ ಪಿಯು ಕಾಲೇಜ್ ನಲ್ಲಿಎಬಿವಿಪಿಯಿಂದ ರಾಷ್ಟ್ರೀಯ ಯುವ ದಿನ ಆಚರಿಸಲಾಯಿತು.

