ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಿ
ವಿಕ ಸುದ್ದಿಲೋಕ ಬಸವನಬಾಗೇವಾಡಿ
‘‘ಮಕ್ಕಳಿಗೆ ವಿದೇಶಿ ಸಂಸ್ಕೃತಿ ಕಲಿಸದೇ ದೇಶಿಯ ಸಂಸ್ಕೃತಿ, ಸಂಸ್ಕಾರ ಕಲಿಸಿ,’’ ಎಂದು ಶಿವಪ್ರಕಾಶ ಶಿವಾಚಾರ್ಯರು ಹೇಳಿದರು.
ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಬಸವೇಶ್ವರ ದೇವಾಲಯ ಅಂತಾರಾಷ್ಟ್ರೀಯ ಶಾಲೆ ಆವರಣದಲ್ಲಿನಡೆದ ರುಚಿ ಉತ್ಸವ ಹಾಗೂ ಮ್ಯಾರಥಾನ್ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬರ್ತು ಅಗರವಾಲ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ರೋಹಿಣಿ ರೋಣದ, ಎಸ್ .ಎಸ್ .ಝಳಕಿ, ಮಹಾಂತೇಶ ಆದಿಗೊಂಡ, ಸುರೇಶ ಪಾಟೀಲ, ಲಕ್ಷಿತ್ರ್ಮ ಮಾಲಗಾರ, ಬಿ.ಬಿ.ಗಣಾಚಾರಿ, ರಾಯಗೊಂಡ, ಲಕ್ಷಿತ್ರ್ಮ ಹಿಟ್ನಳ್ಳಿ ಇದ್ದರು.
ಮಕ್ಕಳೇ ತಯಾರಿಸಿದ ಆಹಾರ ಪದಾರ್ಥವನ್ನು ಪಾಲಕರು ಖರೀದಿಸಿ ಸೇವಿಸಿದರು. ನೂರಾರು ವಿದ್ಯಾರ್ಥಿಗಳಿಂದ ಮ್ಯಾರಥಾನ್ ನಡೆಯಿತು. ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು.
13ಬಿಬಿಡಿ2 ಫೋಟೊ (ಸಿಬಿಎಸ್ ಇ)
ಬಸವನಬಾಗೇವಾಡಿ ಸಿಬಿಎಸ್ ಎ ಶಾಲೆಯಲ್ಲಿನಡೆದ ಮ್ಯಾರಥಾನ್ , ರುಚಿ ಉತ್ಸವ ಕಾರ್ಯಕ್ರಮದಲ್ಲಿಶಿವಪ್ರಕಾಶ ಶಿವಾಚಾರ್ಯರು ಮಾತನಾಡಿದರು.

