ವಿಕ ಫೋಕಸ್ ( ಲೋಕಲ್ ಲೀಡ್ )
ಗ್ರಾಮಾಂತರದಲ್ಲಿ240 ಏಕೋಪಾಧ್ಯಾಯ ಶಾಲೆಗಳು !
ಮಕ್ಕಳ ಕಲಿಕಾ ಮಟ್ಟ ಉತ್ತಮ ಪಡಿಸುವುದೇ ಸವಾಲು | ಶಿಕ್ಷಕರ ಪೂರೈಕೆಗೆ ಬೇಕಿದೆ ಸಿಎಸ್ ಆರ್ ನೆರವು | ಖಾಸಗಿ ಶಾಲೆಗಳತ್ತ ಪೋಷಕರ ಒಲವು
ಆದರ್ಶ ಕೋಡಿ, ಬೆಂಗಳೂರು ಗ್ರಾಮಾಂತರ
ada್ಟshkಟdಜಿ15ಃಜಞaಜ್ಝಿ.್ಚಟಞ
ಸರಕಾರಿ ಶಾಲೆಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ಎಂಬ ಕೂಗು ಜೋರಾಗಿಯೇ ಕೇಳಿಬರುತ್ತಿದೆ. ಆದರೆ, ಸರಕಾರಿ ಶಾಲೆಗಳಲ್ಲಿಸೌಲಭ್ಯಗಳು ಮಾತ್ರ ಬಹುತೇಕ ಕಡೆಗಳಲ್ಲಿಮರಿಚೀಕೆ ಎಂಬಂತಿವೆ. ಅದರಲ್ಲೂ
ಜಿಲ್ಲೆಯಲ್ಲಿ240 ಶಾಲೆಗಳಲ್ಲಿಕೇವಲ ಒಬ್ಬರೆ ಶಿಕ್ಷಕರಿದ್ದೂ, ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ600ಕ್ಕೂ ಹೆಚ್ಚು ಕಿರಿಯ ಹಾಗೂ 500ಕ್ಕೂ ಹೆಚ್ಚು ಹಿರಿಯ ಪ್ರಾಥಮಿಕ ಶಾಲೆಗಳಿವೆ. ಇದರ ಪೈಕಿ 240 ಶಾಲೆಗಳಲ್ಲಿಒಬ್ಬರೆ ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಿರಿಯ ಪ್ರಾಥಮಿಕ ಶಾಲೆಯ ಹಂತದಲ್ಲಿನ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಬಿಸಿಯೂಟ ಸೇರಿದಂತೆ ಇನ್ನಿತರೆ ಕೆಲಸಗಳನ್ನು ನೋಡಿಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯವಾಗಲಿದೆ. ಒಂದೇ ಅವಧಿಯಲ್ಲಿಎಲ್ಲತರಗತಿಯ ಮಕ್ಕಳಿಗೆ ಬೋಧಿಸುವುದು ಹೇಗೆ ? ಒಂದೊಮ್ಮೆ ಪ್ರತ್ಯೇಕವಾಗಿ ಬೋಧಿಸುವುದಾದರೆ ಅಂತಹ ಸಮಯದಲ್ಲಿಉಳಿದ ಮಕ್ಕಳಿಗೆ ಯಾವುದೇ ತರಗತಿಗಳು ಕೂಡ ನಡೆಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿಕಲಿಕೆ ಆರಂಭದ ಹಂತದಲ್ಲಿಮಕ್ಕಳಿಗೆ ಶಿಕ್ಷಣದ ಭದ್ರಬುನಾದಿ ಹಾಕಲು ಹೇಗೆ ಸಾಧ್ಯವಾಗಲಿದೆ ಎಂಬ ಪ್ರಶ್ನೆಗಳು ಮೂಡುತ್ತವೆ. ಇಲಾಖೆ ಹೇಳುವಂತೆ ದಾಖಲಾತಿ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಆದರೆ, ದಾಖಲಾತಿಯಲ್ಲಿರುವ ಮಕ್ಕಳು ಒಂದೇ ತರಗತಿಯಲ್ಲಿವ್ಯಾಸಂಗ ಮಾಡುವುದಿಲ್ಲ. ಇದರಿಂದ ತರಗತಿಗಳ ಅನುಸಾರವಾಗಿ ಶಿಕ್ಷಕರ ನೇಮಕ ಮಾಡಿದರೆ ಮಕ್ಕಳ ಕಲಿಕೆಗೆ ಅನುಕೂಲವಾಗಲಿದೆ.
204 ಕಿರಿಯ ಪ್ರಾಥಮಿಕ ಶಾಲೆಗಳು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಒಟ್ಟು 240 ಶಾಲೆಗಳಲ್ಲಿಒಬ್ಬರೇ ಶಿಕ್ಷಕರಿದ್ದು ಅದರಲ್ಲಿ204 ಕಿರಿಯ ಪ್ರಾಥಮಿಕ ಶಾಲೆ ಹಾಗೂ 36 ಹಿರಿಯ ಪ್ರಾಥಮಿಕ ಶಾಲೆಗಳನ್ನು ಒಳಗೊಂಡಿದೆ. ಜಿಲ್ಲೆಯ ದೇವನಹಳ್ಳಿ ತಾಲೂಕಿನ 51, ದೊಡ್ಡಬಳ್ಳಾಪುರದಲ್ಲಿ77, ಹೊಸಕೋಟೆಯಲ್ಲಿ55, ನೆಲಮಂಗಲ 57 ಶಾಲೆಗಳಲ್ಲಿಇದೇ ಪರಿಸ್ಥಿತಿಯಿದೆ. ಈ ಶಾಲೆಗಳಲ್ಲಿದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿಇಲಾಖೆ ಕೆಲಸ ಮಾಡಬೇಕಿದೆ.
ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವೇ?: 11ಮಕ್ಕಳಿಗಿಂತ ಕಡಿಮೆ ಇರುವ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿಒಬ್ಬರೇ ಶಿಕ್ಷಕರು ಇರುತ್ತಾರೆ. ಈ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಇದ್ದಾರೆ ಎಂದು ಇಲಾಖೆ ಹೇಳುತ್ತದೆ. ಆದರೆ, 1 ರಿಂದ 3ರ ವರೆಗೂ ಒಂದೇ ವಿಭಾಗದಂತೆ ಕಲಿಕೆಗಳು ನಡೆದರೂ ಕೂಡ 4 ಮತ್ತು 5ನೇ ತರಗತಿಗಳಿಗೆ ಮಾತ್ರ ಪ್ರತ್ಯೇಕವಾಗಿ ಪಠ್ಯ ಬೋಧಿಸಬೇಕಾಗಿದೆ. ಇನ್ನೂ ಕಚೇರಿಯ ಕೆಲಸಗಳು ಕೂಡ ಇದೆ. ಒಬ್ಬರೇ ಶಿಕ್ಷಕರು ಹೇಗೆ ಈ ಎಲ್ಲತರಗತಿಗಳನ್ನು ಮಾಡುತ್ತಾರೆ ಎಂಬುದೇ ಪ್ರಶ್ನೆಯಾಗಿದೆ. ಇಂತಹ ಸ್ಥಿತಿಯಲ್ಲಿಪಾಠ ಮಾಡಿದರೂ ಕೂಡ ಗುಣಮಟ್ಟ ಕಾಯ್ದುಕೊಳ್ಳುವುದು ಎಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂಬ ಅನುಮಾನವಿದೆ. ಕಿರಿಯ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಶಿಕ್ಷಣ ದೊರೆಯದಿದ್ದರೆ ಅವರ ಮುಂದಿನ ಕಲಿಕೆಗೂ ಕೂಡ ಸಮಸ್ಯೆಯಾಗಲಿದೆ.
ಮಲ್ಟಿ ಟಾಸ್ಕ್ ಅನಿವಾರ್ಯ: ಏಕೋಪಾಧ್ಯಾಯ ಶಾಲೆಗಳಲ್ಲಿ1-5ನೇ ತರಗತಿಗೆ ಒಬ್ಬರೇ ಶಿಕ್ಷಕರು ಬೋಧಿಸಬೇಕು. ದಾಖಲಾತಿ, ಬಿಸಿಯೂಟ ಹಾಗೂ ಇನ್ನಿತರ ಸರಕಾರಿ ಯೋಜನೆಗಳ ನಿರ್ವಹಣೆಯನ್ನು ಅವರೇ ಮಾಡಬೇಕು. ಕೆಲವೊಂದು ಬಾರಿ ಕೆಲಸದ ನಿಮಿತ್ತ ರಜೆ ಹಾಕಿದರೂ ಶಾಲೆಗಳಿಗೆ ರಜೆ ನೀಡಬೇಕಾದ ಅನಿವಾರ್ಯತೆ
ಸೃಷ್ಟಿಯಾಗುತ್ತದೆ. ಇಲಾಖೆ ತರಬೇತಿಗಳಿದ್ದರೂ ಹೋಗಲು ಸಮಸ್ಯೆ, ಆರೋಗ್ಯ ಸಮಸ್ಯೆಯಾದರೂ ಕೂಡ ವೈಯಕ್ತಿಕ ಸಮಸ್ಯೆ ಜತೆಗೆ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುತ್ತದೆ. ಇಂತಹ ಸಮಸ್ಯೆಗಳ ನಡುವೆ ದಾಖಲಾತಿ ಹೆಚ್ಚಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯಗಳಲ್ಲಿಕೇಳಿಬರುತ್ತಿದೆ.
ಸಿಎಸ್ ಆರ್ ನೆರವು ಸಿಗಲಿ: ಶಿಕ್ಷಣ ಕ್ಷೇತ್ರಕ್ಕೆ ಜಿಲ್ಲೆಯ ಕೈಗಾರಿಕಾ ವಲಯಗಳಲ್ಲಿನ ಅನೇಕ ಕೈಗಾರಿಕೆಗಳು ಸಿಎಸ್ ಆರ್ ಅನುದಾನ ಬಳಕೆ ಮಾಡುತ್ತಿವೆ. ಹಲವು ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರಿಗಾಗಿ ನಾನಾ ಕಂಪನಿಗಳಿಂದ ಶಿಕ್ಷಕರಿಗೆ ವೇತನ ನೀಡುವ ಮೂಲಕ ಕಲಿಕೆಗೆ ಅನುಕೂಲ ಮಾಡಿಕೊಡುತ್ತಿದೆ. ಇದರಂತೆ ಜಿಲ್ಲೆಯಲ್ಲಿಏಕೋಪಾಧ್ಯಾಯ ಶಾಲೆಗಳಿಗೂ ಹೆಚ್ಚುವರಿಯಾಗಿ ಶಿಕ್ಷಕರು ಸಿಎಸ್ ಆರ್ ಅನುದಾನದಲ್ಲಿನೀಡಿದರೆ, ಈ ಶಾಲೆಗಳ ಅಭಿವೃದ್ಧಿ ಜತೆಗೆ ದಾಖಲಾತಿ ಹೆಚ್ಚಾಗಲು ಅನುಕೂಲವಾಗಲಿದೆ. ಈಗಾಗಲೇ ಹಲವು ಪೋಷಕರು ಖಾಸಗಿ ಶಾಲೆಗಳತ್ತ ಒಲವು ತೋರುತ್ತಿದ್ದು, ಸರಕಾರಿ ವಲಯದಲ್ಲಿಹೆಚ್ಚಿನ ಸೌಕರ್ಯ ನೀಡಲು ಕ್ರಮವಹಿಸಬೇಕಿದೆ.
ಕೋಟ್ ,
11ಕ್ಕಿಂತ ಕಡಿಮೆ ಸಂಖ್ಯೆಯಲ್ಲಿಮಕ್ಕಳ ದಾಖಲಾತಿ ಇರುವ ಶಾಲೆಗಳಲ್ಲಿಒಬ್ಬರೇ ಶಿಕ್ಷಕರಿಗೆ ಅವಕಾಶವಿರಲಿದೆ.
ಅಲ್ಲಿನ ಶಿಕ್ಷಕರಿಗೆ ಬೋಧನೆ ವಿಷಯದಲ್ಲಿಅಗತ್ಯ ತರಬೇತಿ ನೀಡಲಾಗಿದೆ.
-ಬೈಲಾಂಜಿನಪ್ಪ | ಡಿಡಿಪಿಐ, ಬೆಂಗಳೂರು ಗ್ರಾಮಾಂತರ.
ಫೋಟೋ: 1401ವಿಕೆ1: ಒಬ್ಬರೆ ಶಿಕ್ಚಕರು ಕಾರ್ಯ ನಿರ್ವಹಿಸುತ್ತಿರುವ ಹೊನ್ನಾಘಟ್ಟ ಶಾಲೆ.

