ಚಾಲಕ, ಸೆಕ್ಯೂರಿಟಿ ಹುದ್ದೆ
ಕಾಸರಗೋಡು: ಕುಂಬ್ಡಾಜೆ ಗ್ರಾಮ ಪಂಚಾಯಿತಿ ಮತ್ತು ಬಡ್ಸ್ ಶಾಲೆಯಲ್ಲಿಖಾಲಿ ಇರುವ ಚಾಲಕ ಹುದ್ದೆ ಮತ್ತು ಖಾಲಿ ಇರುವ ಸೆಕ್ಯೂರಿಟಿ ಹುದ್ದೆಗೆ ಸಿಬ್ಬಂದಿಗಳನ್ನು ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ. ಚಾಲಕ ಹುದ್ದೆಗೆ ಸಂದರ್ಶನವು ಜ. 21 ರಂದು ಬೆಳಗ್ಗೆ ಹಾಗೂ ಮಧಿಧ್ಯಾಹ್ನ ಸೆಕ್ಯೂರಿಟಿ ಹುದ್ದೆಗೆ ನಡೆಯಲಿದೆ. ಅರ್ಜಿದಾರರು ತಮ್ಮ ಬಯೋಡೇಟಾದ ಪ್ರತಿ ಮತ್ತು ಶೈಕ್ಷಣಿಕ ಅರ್ಹತೆಯನ್ನು ಸಾಬೀತುಪಡಿಸುವ ದಾಖಲೆಗಳೊಂದಿಗೆ ಪಂಚಾಯಿತಿ ಕಚೇರಿಯಲ್ಲಿಹಾಜರಾಗಬೇಕು.
................
ಲ್ಯಾಬ್ ಟೆಕ್ನಿಷಿಯನ್ ಹುದ್ದೆ
ಕಾಸರಗೋಡು: ಕಾಂಞಂಗಾಡು ಸರಕಾರಿ ಜಿಲ್ಲಾಹೋಮಿಯೋ ಆಸ್ಪತ್ರೆಯಲ್ಲಿದಿನಗೂಲಿ ಆಧಾರದ ಮೇಲೆ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಕೇರಳ ಸರಕಾರ ಮತ್ತು ಪಿಎಸ್ ಸಿಯಿಂದ ಮಾನ್ಯತೆ ಪಡೆದ ಡಿಎಂಎಲ್ ಟಿ ಅಥವಾ ಬಿ.ಎಸ್ಸಿ. ಎಂಎಲ್ ಟಿ ಉತ್ತೀರ್ಣರಾದ 18ರಿಂದ 56 ವರ್ಷದೊಳಗಿನ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಅಭ್ಯರ್ಥಿಗಳು ಜ. 21 ರಂದು ಬೆಳಗ್ಗೆ 10.30ಕ್ಕೆ ಕಾಞಂಗಾಡಿನ ಪುದಿಯ ಕೋಟಾದಲ್ಲಿರುವ ಹೋಮಿಯೋಪತಿ ಜಿಲ್ಲಾವೈದ್ಯಕೀಯ ಕಚೇರಿಯಲ್ಲಿತಮ್ಮ ಬಯೋಡೇಟಾ ಮತ್ತು ಪ್ರಮಾಣಪತ್ರಗಳ ಸ್ವಯಂ ದೃಢೀಕೃತ ಪ್ರತಿಗಳೊಂದಿಗೆ ಹಾಜರಾಗಬೇಕು.
................
ವೈದ್ಯರ ನೇಮಕಾತಿ
ಕಾಸರಗೋಡು: ನೀಲೇಶ್ವರ ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ತ್ರಿಕರಿಪುರ ತಾಲೂಕು ಆಸ್ಪತ್ರೆಯಲ್ಲಿಮೂರನೇ ಪಾಳಿ ಡಯಾಲಿಸಿಸ್ ನ ಭಾಗವಾಗಿ, ಸಂಜೆ 6ರಿಂದ ರಾತ್ರಿ 11ರ ವರೆಗೆ ವೈದ್ಯರನ್ನು ನೇಮಿಸುವ ಸಭೆ ತ್ರಿಕರಿಪುರ ತಾಲೂಕು ಆಸ್ಪತ್ರೆಯಲ್ಲಿಜ. 19ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಅರ್ಹತೆ - ಎಂಬಿಬಿಎಸ್ , ಟಿಸಿಎಂಸಿ ನೋಂದಣಿ ಹೊಂದಿರಬೇಕು.
............
ಸರ್ವೇಯರ್ ನೇಮಕಾತಿ
ಕಾಸರಗೋಡು: ಕೃಷಿ ಅಭಿಧಿವೃದ್ಧಿ ಮತ್ತು ಕೃಷಿ ಕಲ್ಯಾಣ ಇಲಾಖೆಯಡಿಯಲ್ಲಿಕಾಸರಗೋಡು ಜಿಲ್ಲೆಯ ನೀಲೇಶ್ವರ, ಕಾಸರಗೋಡು ನಗರಸಭೆ, ಉದುಮ, ಪುಲ್ಲೂರು ಪೆರಿಯ, ಮಡಿಕೈ, ಕಿನನೂರು- ಕರಿಂದಳಂ, ಮೊಗ್ರಾಲ್ ಪುತ್ತೂರು, ಮಧೂರು, ಚೆಂಗಳ, ಚೆಮ್ಮನಾಡ್ , ಕುಂಬಳೆ, ವರ್ಕಾಡಿ, ಮಂಜೇಶ್ವರ, ಮೀಂಜ, ಮಂಗಲ್ಪಾಡಿ ಗ್ರಾಮ ಪಂಚಾಯಿತಿಗಳಲ್ಲಿಡಿಜಿಟಲ್ ಬೆಳೆ ಸಮೀಕ್ಷೆ ನಡೆಸಲು ಪಂಚಾಯಿತಿಗಳ ಒಳಗೆ ಅಥವಾ ಹತ್ತಿರದಲ್ಲಿವಾಸಿಸುವ ವಿದ್ಯಾವಂತ ಯುವಕ-ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಮೇಲಿನ ಪಂಚಾಯಿತಿಯ ಕೃಷಿ ಭವನವನ್ನು ಸಂಪರ್ಕಿಸಬೇಕು. ಅರ್ಹತೆ - ಎಸ್ ಎಸ್ ಎಲ್ ಸಿ, ಮೊಬೈಲ್ ಜ್ಞಾನ ಹೊಂದಿರಬೇಕು.
..................
ಕ್ರೀಡಾ ವಿದ್ಯಾರ್ಥಿವೇತನ ಅರ್ಜಿ
ಕಾಸರಗೋಡು: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿಭಾಗವಹಿಸುವ ಸೇನಾ ನಿವೃತ್ತ ಸೈನಿಕರ ಮಕ್ಕಳು ಕ್ರೀಡಾ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು.

