ಅನಿಮಿಯ ಅರಿವು ಕಾರ್ಯಾಗಾರ
ವಿಕ ಸುದ್ದಿಲೋಕ ವಿರಾಜಪೇಟೆ
ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಾಲಯ, ಪನ್ನಡ್ಕ, ಬಾಲಂಬಿ ಅಂಗನವಾಡಿ ಕೇಂದ್ರಗಳಲ್ಲಿಅನಿಮಿಯ ಅರಿವು ಕಾರ್ಯಾಗಾರ ಹಾಗೂ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಮಡಿಕೇರಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ್ ಮಾತನಾಡಿ, ‘ಧಿ‘ಅನಿಮಿಯ ಪರೀಕ್ಷೆಯಿಂದ ಮಕ್ಕಳಲ್ಲಿರಕ್ತಹೀನತೆ ಹಾಧಿಗೂ ಅಪೌಷ್ಟಿಕತೆಯ ಮಟ್ಟವನ್ನು ಪರಿಶೀಲಿಸಿ ಅದಕ್ಕೆ ಬೇಧಿಕಾದ ಪೌಧಿಷ್ಟಿಧಿಕಾಂಶ ಒಧಿದಧಿಗಿಧಿಸಧಿಬಧಿಹುಧಿದುಧಿ’’ ಎಂದರು.
‘ಧಿ‘ಬೆಳೆಯುವ ಮಕ್ಕಳಿಗೆ ಕಾಲಕ್ಕೆ ತಕ್ಕಂತೆ ಆರೋಗ್ಯ ತಪಾಸಣೆ ನಡೆಸುವುದರಿಂದ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ. ಅಂಗನವಾಡಿ ಕೇಂದ್ರದಲ್ಲಿಅನ್ನ ಪ್ರಾಶನ ಕಾರ್ಯಕ್ರಮ ನಡೆಸಿ ಆರು ತಿಂಗಳು ತುಂಬಿದ ನಂತರ ಮಗುವಿಗೆ ಎದೆಹಾಲಿನ ಜತೆಗೆ ಪೂರಕ ಆಹಾರವನ್ನು ಪ್ರಾರಂಭಿಸಬೇಕುಧಿ’’ ಎಂದು ತಿಳಿಸಿದರು.
ಬಳಿಕ ಚೆಂಬುಗ್ರಾಮದ ದೇವಾಲಯ, ಅಂಗನವಾಡಿ ಕೇಂದ್ರದ ಕೈತೋಟ ಹಾಗೂ ಪನ್ನಡ್ಕ ಅಂಗನವಾಡಿ ಕೇಂದ್ರದ ಸುತ್ತಲೂ ನಿಧಿರ್ಮಿಧಿಸುಧಿತ್ತಿಧಿರುಧಿವ ತಡೆಗೋಡೆ ನಿರ್ಮಾಣ ಕಾಮಗಾರಿ ಪರಿಶೀಲಿಧಿಸಿಧಿದರು.
ಶಿಬಿರದಲ್ಲಿಆರ್ ಬಿಎಸ್ ಕೆ ತಂಡದ ವೈದ್ಯರಾದ ಡಾ.ಪೂಜಾ ಹಾಗೂ ಶುಶ್ರೂಷಕಿ ಅಮೃತಾ ನೇತೃತ್ವದಲ್ಲಿಮಕ್ಕಳ ತೂಕ, ಎತ್ತರ ಪರಿಶೀಲಿಸಿ ಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ ಅನಿಮಿಯ ಮಟ್ಟ ಕಡಿಮೆ ಇರುವ ಮಕ್ಕಳಿಗೆ ವಯಸ್ಸಿಗಣಗುಣವಾಗಿ ಔಷಧಿಗಳನ್ನು ವಿತರಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ, ರೇಖಾ, ಮೀನಾಕ್ಷಿ, ಅಂಗನವಾಡಿ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಬಾಲ ವಿಕಾಸ ಸಮಿತಿ ಅಧ್ಯಕ್ಷರು,ಸದಸ್ಯರು, ಪೋಷಕರು, ಮಕ್ಕಳು ಹಾಜರಿದ್ದರು.
ಪೋಟೋ:ಎಂಡಿಕೆ12ವಿಪಿಟಿ03ಎ: ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿಅನಿಮಿಯ ಅರಿವು ಕಾರ್ಯಾಗಾರ ಹಾಗೂ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

