ಸುಖೀಭವ

Contributed byshubha.hegde@timesgroup.com|Vijaya Karnataka

ನಿರ್ದೇಶಕ ಎನ್‌.ಕೆ ರಾಜೇಶ್‌ ನಾಯ್ಡು ಅವರ 'ಸುಖೀಭವ' ಚಿತ್ರದ ಟೀಸರ್ ಮತ್ತು ಹಾಡುಗಳು ಬಿಡುಗಡೆಯಾಗಿವೆ. ಈ ಚಿತ್ರದಲ್ಲಿ ನಟ ಶರಣ್‌ ಅವರು ಒಂದು ಹಾಡಿಗೆ ಧ್ವನಿ ನೀಡಿದ್ದಾರೆ. ಇದು ಕುಟುಂಬ, ಹಾಸ್ಯ ಮತ್ತು ಮನರಂಜನೆಯ ಕಥಾಹಂದರವನ್ನು ಹೊಂದಿದೆ. ಮಹೇಂದ್ರ ನಾಯಕರಾಗಿ ನಟಿಸಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ.

sukhibhava new family movie teaser and song released

ಸುಖೀಭವ ಟೀಸರ್

ಎನ್ .ಕೆ ರಾಜೇಶ್ ನಾಯ್ಡು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿರುವ ‘ಸುಖೀಭವ’ ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆಯಾಗಿದೆ.

ಈ ಚಿತ್ರದ ನಾಲ್ಕು ಹಾಡುಗಳ ಪೈಕಿ ಒಂದು ಗೀತೆಗೆ ನಟ ಶರಣ್ ಧ್ವನಿಯಾಗಿರುವುದು ವಿಶೇಷ. ಸಿನಿಮಾವು ಫ್ಯಾಮಿಲಿ ಕಥೆ, ಹಾಸ್ಯ ಹಾಗೂ ಮನರಂಜನೆಯಿಂದ ಕೂಡಿದೆ.

ಮಹೇಂದ್ರ ನಾಯಕ. ಸುಷ್ಮಿತಾ ನಾಯಕ್ ಹಾಗೂ ವಿಯಾನ್ ಶಿಗ್ಡೆ ನಾಯಕಿಯರು. ಉಳಿದಂತೆ ಗೌರವ್ ಶೆಟ್ಟಿ, ಶೋಭರಾಜ್ , ರವಿಶಂಕರ್ ಗೌಡ, ಸುನಿಲ್ ಪುರಾಣಿಕ್ , ತುಕಾಲಿ ಸಂತು, ಮೈತ್ರಿ ಜಗ್ಗಿ ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ಬಿ.ಜೆ.ಭರತ್ -ಶುಭಂ, ಛಾಯಾಗ್ರಹಣ ಮಂಜುನಾಥ್ ನಾಯಕ್ ಅವರದ್ದು. ಸಿನಿಮಾದ ಪೋಸ್ವ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಚಿತ್ರ ಈಗ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.