ಜನರ ಪ್ರೀತಿ ಮುಂದೆ ಶಾಸಕ, ಮಂತ್ರಿ ಸ್ಥಾನ ಶೂನ್ಯ

Contributed bytotad.eranna@gmail.com|Vijaya Karnataka

ಶಾಸಕ ಬಸವರಾಜ ರಾಯರಡ್ಡಿ ಅವರು ಯಲಬುರ್ಗಾ ತಾಲೂಕಿನ ಬಂಡಿ, ಜೂಲಕಟ್ಟಿ, ಬಳೂಟಗಿ ತಾಂಡಾ ಗ್ರಾಮಗಳಲ್ಲಿ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಜನರ ಪ್ರೀತಿ, ಗೌರವವೇ ತಮಗೆ ಮುಖ್ಯ ಎಂದರು. ರಾಜ್ಯ ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ಅಭಿವೃದ್ಧಿಗೆ ಅನುದಾನದ ಕೊರತೆ ಇಲ್ಲ. ಮುಂಬರುವ ಬಜೆಟ್‌ನಲ್ಲಿ ಹೊಸ ಯೋಜನೆಗಳು ಬರಲಿವೆ. ಲಂಬಾಣಿ ಸಮುದಾಯದ ವಸತಿ ಶಾಲೆಗೆ ಸಿಎಂ ಜತೆ ಚರ್ಚಿಸುವೆ ಎಂದರು.

basavaraj rayaraddis love and loyalty minister position empty before the people

ಜನರ ಪ್ರೀತಿ ಮುಂದೆ ಶಾಸಕ, ಮಂತ್ರಿ ಸ್ಥಾನ ಶೂನ್ಯ

ಜನಸಂಪರ್ಕ ಸಭೆಯಲ್ಲಿಶಾಸಕ ಬಸವರಾಜ ರಾಯರಡ್ಡಿ ಹೇಳಿಕೆ

ವಿಕ ಸುದ್ದಿಲೋಕ ಯಲಬುರ್ಗಾ

‘‘ಜನರ ಪ್ರೀತಿ, ಗೌರವದ ಮುಂದೆ ನನಗೆ ಶಾಸಕ ಹಾಗೂ ಮಂತ್ರಿ ಸ್ಥಾನ ಶೂನ್ಯ,’’ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಬಂಡಿ, ಜೂಲಕಟ್ಟಿ, ಬಳೂಟಗಿ ತಾಂಡಾ ಗ್ರಾಮಗಳಲ್ಲಿಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿಮಾತನಾಡಿದರು.

‘‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಜನಪರ ಆಡಳಿತ ನೀಡುತ್ತಿದೆ. ವಿರೋಧ ಪಕ್ಷದ ನಾಯಕರು ಸುಮ್ಮನೆ ಟೀಕೆ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ. ಮುಂಬರುವ ಬಜೆಟ್ ನಲ್ಲಿರಾಜ್ಯದ ಜನರಿಗೆ ನಾನಾ ಹೊಸ ಯೋಜನೆ ನೀಡಲಾಗುವುದು. ಮೀಸಲು ವಿಚಾರದಲ್ಲಿಅನಗತ್ಯವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ. ಲಂಬಾಣಿ ಸಮುದಾಯಕ್ಕೆ ಮೀಸಲು ವಿಚಾರದಲ್ಲಿತೊಂದರೆಯಿಲ್ಲ. ಬಜೆಟ್ ನಲ್ಲಿಬಂಜಾರ ಸಮುದಾಯದ ವಸತಿ ಶಾಲೆ ಆರಂಭಿಸಲು ಸಿಎಂ ಜತೆ ಚರ್ಚಿಸುವೆ,’’ ಎಂದರು.

ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒ ನೀಲಗಂಗಾ ಬಬಲಾದ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟ್ಟದಪ್ಪ ಮಾಳೆಕೊಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶಿವಶಂಕರ್ ಕರಡಕಲ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ವೀರನಗೌಡ ಪಾಟೀಲ, ಎ.ಜಿ.ಬಾವಿಮನಿ, ರಾಮಣ್ಣ ಸಾಲಬಾವಿ, ಡಾ.ಶಿವನಗೌಡ ದಾನರಡ್ಡಿ, ಆನಂದ ಉಳ್ಳಾಗಡ್ಡಿ, ಎಂ.ಎಫ್ .ನದಾಫ್ , ಸಂಗಣ್ಣ ಟೆಂಗಿನಕಾಯಿ, ರೇವಣೆಪ್ಪ ಹಿರೇಕುರಬರ, ಹುಲಗಪ್ಪ ಬಂಡಿವಡ್ಡರ, ಗವಿಸಿದ್ದಪ್ಪ ಮಾನಶೆಟ್ಟರ್ , ಶೇಖಪ್ಪ ಬಸಾಪುರ, ಶಿವಾನಂದ ಬಣಕಾರ ಸೇರಿ ಇತರರು ಇದ್ದರು.

ಫೋಟೋ ಕ್ಯಾಪ್ಷನ್ : 16 ವೈಎಲ್ ಬಿ2

ಯಲಬುರ್ಗಾ ತಾಲೂಕಿನ ಬಂಡಿ, ಜೂಲಕಟ್ಟಿ, ಬಳೂಟಗಿ ತಾಂಡಾ ಗ್ರಾಮಗಳಲ್ಲಿಹಮ್ಮಿಕೊಂಡಿದ್ದ ಜನಸಂಪರ್ಕ ಸಭೆ ಉದ್ದೇಶಿಸಿ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿದರು.