ಲಕ್ಷೇಶ್ವರ: ಕೊಲೆ ಆರೋಪಿಗಳ ಬಂಧನ

Contributed bybeerappapujar93@gmail.com|Vijaya Karnataka

ಲಕ್ಷೇಶ್ವರ ಠಾಣೆ ಪೊಲೀಸರು 12 ಗಂಟೆಯೊಳಗೆ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಶಿಗ್ಲಿ ಗ್ರಾಮದ ಮಹಮದ್‌ ಫಾರೂಕ್‌ ಶೇಖ್‌ ಸನದಿ ಎಂಬುವರ ಕೊಲೆ ಪ್ರಕರಣ ಇದಾಗಿದೆ. ಪ್ರೀತಿ ವಿಚಾರವಾಗಿ ಈ ಕೊಲೆ ನಡೆದಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರು ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

laksheshwar four accused arrested in murder case within 12 hours

ಲಕ್ಷೇಶ್ವರ: ಕೊಲೆ ಆರೋಪಿಗಳ ಬಂಧನ

ಲಕ್ಷೇಶ್ವರ: ಕೊಲೆ ಪ್ರಕರಣವೊಂದನ್ನು ಕೇವಲ 12 ಗಂಟೆಯಲ್ಲಿಭೇದಿಸಿರುವ ಲಕ್ಷೇಶ್ವರ ಠಾಣೆ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಲೂಕಿನ ಶಿಗ್ಲಿಗ್ರಾಮದ ಯುವಕ ಮಹಮದ್ ಫಾರೂಕ್ ಶೇಖ್ ಸನದಿ (29) ಕೊಲೆ ನಡೆದಿತ್ತು. ಧಾರವಾಡ ಜಿಲ್ಲೆಅಣ್ಣಿಗೇರಿಯ ಗಣೇಶನಗರದ ದಾವಲಸಾಬ್ ಮಕಾನದಾರ (22), ಮಕ್ತುಂಹುಸೇನ್ ಹುಸೇನಸಾಬ ತಹಶೀಲ್ದಾರ್ (23) ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರು ಬಂಧಿತರು. ಕೊಲೆಯಾದ ಯುವಕ ಮಹಮದ್ ಫಾರೂಕ್ ಶೇಖ್ ಸನದಿಗೆ ತಿಂಗಳ ಹಿಂದಷ್ಟೇ ಮದುವೆ ನಿಶ್ಚಯವಾಗಿತ್ತು. ಆದರೆ, ಸನದಿಗೆ ನಿಶ್ಚಯವಾಗಿದ್ದ ಹುಡುಗಿಯನ್ನು ಪ್ರಕರಣದ ಆರೋಪಿ ದಾವಲಸಾಬ ಮಕಾನದಾರ ಪ್ರೀತಿಸುತ್ತಿದ್ದ.

ಏಕಾಏಕಿ ಮದುವೆ ನಿಶ್ಚಿಯ ಆಗಿದ್ದರಿಂದ ಕೋಪಗೊಂಡಿದ್ದ ದಾವಲಸಾಬ ಮೂವರೊಂದಿಗೆ ಸೇರಿ ಲಕ್ಷ್ಮೇಶ್ವರಕ್ಕೆ ಬಂದು ಅಲ್ಲಿಂದ ಮಹಮದ್ ಫಾರೂಕ್ ಶೇಖ್ ಸನದಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕತ್ತು ಸೀಳಿ ಕೊಲೆ ಮಾಡಿದ್ದರು. ಆರೋಪಿಗಳು ಕೃತ್ಯಕ್ಕೆ ಬಳಸಿದ ಸಾಮಗ್ರಿ, ಸ್ವಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯದಲ್ಲಿಸಿಪಿಐ ಬಿ.ವಿ.ನ್ಯಾಮಗೌಡ, ಪಿಎಸ್ ಐ ನಾಗರಾಜ ಗಡದ ಹಾಗೂ ಸಿಬ್ಬಂದಿಯಾದ ಆರ್ .ಎಸ್ .ಯರಗಟ್ಟಿ, ಎಂ.ಎ.ಶೇಖ್ , ಎ.ಆರ್ .ಕಮ್ಮಾರ, ಎಂ.ಎಸ್ . ಬಳ್ಳಾರಿ, ಅಪರಾಧ ವಿಭಾಗದ ಸಿಬ್ಬಂದಿ ಡಿ.ಎಸ್ . ನದಾಫ್ , ಪಾಂಡುರಂಗರಾವ್ . ಮಧುಚಂದ್ರ ಧಾರವಾಡ, ಎಂ.ವೈ.ಉಪ್ಪಾರ, ಬಸವರಾಜ ಮುಳಗುಂದ, ಸೋಮು ವಾಲ್ಮೀಕಿ, ಕೃಷ್ಣ ಹುಲಗೂರ, ಅಪ್ಪಣ್ಣ ರಾಠೋಡ ಹಾಗೂ ಗದಗ ಜಿಲ್ಲೆಯ ತಾಂತ್ರಿಕ ವಿಭಾಗದ ಗುರು ಬೂದಿಹಾಳ, ಸಂಜು ಕೊರಡೂರ ಅವರ ಕಾರ್ಯಕ್ಕೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.