ಸಮಸಮಾಜ ನಿರ್ಮಾಣ ಸರಕಾರದ ಗುರಿ
- ಲಕ್ಯಾದಲ್ಲಿ1.20 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ತಮ್ಮಯ್ಯ ಚಾಲನೆ
ವಿಕ ಸುದ್ದಿಲೋಕ ಚಿಕ್ಕಮಗಳೂರು
ಬಡವರು, ಶೋಷಿತರು ಸಮಾಜದ ಮುನ್ನೆಲೆಗೆ ಬರಬೇಕು ಎಂಬ ಪರಿಕಲ್ಪನೆಯೊಂದಿಗೆ ರಾಜ್ಯಸರಕಾರ ಸಮಸಮಾಜ ನಿರ್ಮಾಣದ ಗುರಿ ಹೊಂದಿದೆ ಎಂದು ಶಾಸಕ ಎಚ್ .ಡಿ.ತಮ್ಮಯ್ಯ ಹೇಳಿದರು.
ಲಕ್ಯಾ ಗ್ರಾಮದಲ್ಲಿಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಬುಧವಾರ ಏರ್ಪಡಿಸಿದ್ದ ಸುಮಾರು 1.20 ಕೋಟಿ ರೂ. ವೆಚ್ಚದ ಲಕ್ಯಾ, ಹಿರೇಗೌಜ, ಉದ್ದೇಬೋರನಹಳ್ಳಿ, ಪಾದಮನೆ ಗ್ರಾಮಗಳ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
7 ಕೋಟಿ ರೂ. ಅನುದಾನದಲ್ಲಿಹಿಂದೂ ಧರ್ಮದ ವಿವಿಧ ಸಮುದಾಯಗಳ ದೇವಾಲಯಗಳು ಹಾಗೂ ಸಮುದಾಯ ಭವನಗಳ ಅಭಿವೃದ್ಧಿಗೆ ಸರಕಾರ ಹಣ ಬಿಡುಗಡೆ ಮಾಡಿದೆ. ಒಟ್ಟು 14 ಕೋಟಿ ರೂ.ಗಳನ್ನು ಹಿಂದೂ ಧರ್ಮದ ವಿವಿಧ ಸಮುದಾಯಗಳ ಅಭಿವೃದ್ಧಿಗೆ ನೀಡಿದೆ ಎಂದ ಅವರು, ಒಂದು ಕೋಮಿನ ವರ್ಗವನ್ನು ರಾಜ್ಯಸರಕಾರ ಓಲೈಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದರು.
ಬಡವರು, ಶೋಷಿತರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿರಾಜ್ಯಸರಕಾರ ಚುನಾವಣಾ ಪೂರ್ವದಲ್ಲಿಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಐದು ತಿಂಗಳಲ್ಲಿಅನುಷ್ಠಾನಕ್ಕೆ ತಂದು ನೆರವು ನೀಡುತ್ತಿದೆ. ವಿವಿಧತೆಯಲ್ಲಿಏಕತೆಯುಳ್ಳ ಜಾತ್ಯತೀತ ರಾಷ್ಟ್ರ ಭಾರತದಲ್ಲಿಸರ್ವ ಧರ್ಮವನ್ನು ಸಮಾನವಾಗಿ ಕಾಣುವ ಮೂಲಕ ರಾಜ್ಯ ಸರಕಾರ ಶ್ರಮಿಸುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಡವರ ಪರವಾದ ಹಲವಾರು ಜನಪರ ಯೋಜನೆಗಳನ್ನು ನಿರಂತರ ಜಾರಿಗೆ ತರುತ್ತಿದ್ದಾರೆ ಎಂದರು.
ಗ್ರಾಮದ ಮುಖಂಡರಾದ ಲೋಕಯ್ಯ, ಶಿವಕುಮಾರ್ , ಜ್ಞಾನಪ್ಪ, ಯೋಗೀಶ್ , ಕುಮಾರ್ , ಗುರುಲಿಂಗಪ್ಪ, ಕಾಡಪ್ಪ, ನಾಗಣ್ಣ, ಕೆಂಗೇಗೌಡ, ಶಂಕರ್ ನಾಯ್ಕ, ಸಾದರಹಳ್ಳಿ ಹುಲಿಯಪ್ಪ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.
ಫೋಟೋ:4ರುದ್ರಯ್ಯ-ಪಿ2
ಚಿಕ್ಕಮಗಳೂರಿನ ವಿವಿಧ ಗ್ರಾಮಗಳಲ್ಲಿರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ಎಚ್ .ಡಿ.ತಮ್ಮಯ್ಯ ಭೂಮಿ ಪೂಜೆ ನೆರವೇರಿಸಿದರು.

