ವಿಕ ಸುದ್ದಿಲೋಕ ಮಂಗಳೂರು
ದ ಭಾರತ್ ಅಕಾಡೆಮಿ ಮಂಗಳೂರು ವಾಣಿಜ್ಯ ವಿಭಾಗದಲ್ಲಿಬಿಸಿನೆಸ್ ಸ್ಟಡೀಸ್ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಕವಿತಾ ಪಕ್ಕಳ ಅವರಿಗೆ ಶ್ರೀನಿವಾಸ್ ವಿಶ್ವವಿದ್ಯಾಲಯ ಮಂಗಳೂರು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಅವರು ಡಾ. ಕೆ. ಶಿವಶಂಕರ್ ಭಟ್ ಮಾರ್ಗದರ್ಶನದಲ್ಲಿವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದಲ್ಲಿಪಿಎಚ್ ಡಿ ಪದವಿ ಪಡೆದಿದ್ದಾರೆ.
‘ಬಯಿಂಗ್ ಬಿಹೇವಿಯರ್ ಆಫ್ ದ ಕಸ್ಟಮರ್ಸ್ ಟುವರ್ಡ್ಸ್ ಬೇಬೀ ಫುಡ್ ಪ್ರೊಡಕ್ಟ್ ವಿಥ್ ರೆಫರೆನ್ಸ್ ಟು ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್’ ವಿಷಯದ ಮೇಲೆ ನಡೆಸಿದ ಅವರ ಸಂಶೋಧನೆ, ಶಿಶು ಆಹಾರ ಉತ್ಪನ್ನಗಳ ಕ್ಷೇತ್ರದಲ್ಲಿಗ್ರಾಹಕರ ಮನೋಭಾವನೆ ಹಾಗೂ ಖರೀದಿ ನಿರ್ಧಾರಗಳ ವಿಶ್ಲೇಷಣೆಯನ್ನೊಳಗೊಂಡಿದ್ದು, ಮಾರುಕಟ್ಟೆ ಅಧ್ಯಯನ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ.
ಫೋಟೋ: 4ಎಂ-ಕವಿತಾ

