ರಾಯಚೂರು-14 ಸಾವಿರ ಕ್ವಿಂಟಾಲ್ ಬೀಜೋತ್ಪಾದನೆ ಗುರಿ

Contributed bymanjunathsalic@gmail.com|Vijaya Karnataka

ರಾಯಚೂರು ಕೃಷಿ ವಿಶ್ವವಿದ್ಯಾಲಯವು 2025-26ನೇ ಸಾಲಿನಲ್ಲಿ 14 ಸಾವಿರ ಕ್ವಿಂಟಾಲ್ ಗುಣಮಟ್ಟದ ಬೀಜೋತ್ಪಾದನೆ ಗುರಿ ಹೊಂದಿದೆ. ಕಲ್ಯಾಣ ಕರ್ನಾಟಕದ ರೈತರಿಗೆ ಉತ್ತಮ ಬೀಜ ಲಭ್ಯವಾಗಲಿದೆ. ಗ್ರಾಮೀಣ ಯುವಕರು ಬೀಜೋತ್ಪಾದನೆಯಿಂದ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದು. ರಾಯಚೂರಿನಲ್ಲಿ ಅಭಿವೃದ್ಧಿಪಡಿಸಿದ ಹೊಸ ತಳಿಗಳು ಮತ್ತು ತಂತ್ರಜ್ಞಾನಗಳನ್ನು ವಾಣಿಜ್ಯೀಕರಣಗೊಳಿಸಲು ಯೋಜನೆ ರೂಪಿಸಲಾಗಿದೆ. ರೈತರು ಲಾಭದಾಯಕ ಬೆಳೆಗಳನ್ನು ಬೆಳೆಯಲು ಸಲಹೆ ನೀಡಲಾಗಿದೆ.

raising 14 thousand quintal seed production in raichur is a new hope for farmers economic development

ಕೃಷಿ ವಿವಿ ವಿಶೇಷಾಧಿಕಾರಿ (ಬೀಜ) ಡಾ.ಅರುಣಕುಮಾರ ಹೊಸಮನಿ ಹೇಳಿಕೆ

14 ಸಾವಿರ ಕ್ವಿಂಟಾಲ್ ಬೀಜೋತ್ಪಾದನೆ ಗುರಿ

ವಿಕ ಸುದ್ದಿಲೋಕ ರಾಯಚೂರು

‘‘ ರಾಯಚೂರು ಕೃಷಿ ವಿಶ್ವವಿದ್ಯಾಲಯವು 2025-26ನೇ ಸಾಲಿನಲ್ಲಿಅಂದಾಜು 14 ಸಾವಿರ ಕ್ವಿಂಟಾಲ್ ನಾನಾ ಬೆಳೆಗಳ ಗುಣಮಟ್ಟದ ಬೀಜೋತ್ಪಾದನೆ ಗುರಿ ಹೊಂದಿದೆ,’’ ಎಂದು ಕೃಷಿ ವಿವಿ ವಿಶೇಷಾಧಿಕಾರಿ (ಬೀಜ) ಡಾ.ಅರುಣಕುಮಾರ ಹೊಸಮನಿ ಹೇಳಿದರು.

ತಾಲೂಕಿನ ಕಸ್ಬೆ ಕ್ಯಾಂಪ್ ನ ರೈತ ಶ್ರೀನಿವಾಸರಾವ್ ಅವರ ಜಮೀನಿನಲ್ಲಿಹಮ್ಮಿಕೊಂಡಿದ್ದ ಕ್ಷೇತ್ರೋತ್ರವದಲ್ಲಿಮಾತನಾಡಿದ ಅವರು, ‘‘ಕೃಷಿ ವಿವಿ, ಕಲ್ಯಾಣ ಕರ್ನಾಟಕದ ರೈತರಿಗೆ ಗುಣಮಟ್ಟದ ಬೀಜ ತಲುಪಿಸುತ್ತಿದ್ದು, ಗ್ರಾಮೀಣ ಯುವಕರು ಬೀಜೋತ್ಪಾದನೆಯಿಂದ ಆರ್ಥಿಕ ಸ್ವಾವಲಂಬನೆ ಹೊಂದಬಹುದು,’’ ಎಂದು ಹೇಳಿದರು.

ಸಂಶೋಧನಾ ನಿರ್ದೇಶಕ ಡಾ.ಅಮರೇಗೌಡ ಎ. ಮಾತನಾಡಿ, ‘‘ರಾಯಚೂರಿನಲ್ಲಿಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು ಕೃಷಿ ವಿವಿ, ರಾಯಚೂರಿನಲ್ಲಿಅಭಿವೃದ್ಧಿ ಪಡಿಸಿದ ಹೊಸ ತಳಿ ಮತ್ತು ತಂತ್ರಜ್ಞಾನಗಳನ್ನು ವಾಣಿಜ್ಯೀಕರಣಗೊಳಿಸಲು ಇತರೆ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಯೋಜನೆ ರೂಪಿಸಿದೆ,’’ ಎಂದು ತಿಳಿಸಿದರು.

ವ್ಯವಸ್ಥಾಪನಾ ಮಂಡಳಿ ಸದಸ್ಯ ಮಲ್ಲಿಕಾರ್ಜುನ ಡಿ. ಮಾತನಾಡಿದರು. ಉಪ ಕೃಷಿ ನಿರ್ದೇಶಕ ನಯೀಮ್ ಹುಸೇನ್ ಮಾತನಾಡಿ, ‘‘ವಾತಾವರಣ ಮತ್ತು ಮಾರುಕಟ್ಟೆಗೆ ಅನುಗುಣವಾಗಿ ನಾನಾ ಬೆಳೆಗಳ ವಿಸ್ತೀರ್ಣ ಬದಲಾಗುತ್ತಿರುವುದರಿಂದ ರೈತರು ಅವುಗಳನ್ನು ಗಮನಿಸಿ, ಲಾಭದಾಯಕ ಬೆಳೆ ಬೆಳೆಯಬೇಕು,’’ ಎಂದು ಸಲಹೆ ನೀಡಿದರು.

ಐಸಿಎಆರ್ ಭಾರತೀಯ ಎಣ್ಣೆಬೀಜ ಸಂಶೋಧನಾ ಸಂಸ್ಥೆ, ಹೈದರಾಬಾದ್ ನ ವಿಜ್ಞಾನಿ ಡಾ.ಜಿ.ಡಿ.ಸತೀಶ್ , ಡಾ.ಸುರೇಶ್ , ಡಾ.ವಿನುತಾ, ಡಾ.ಸೋಮಶೇಖರ್ ಹಾಗೂ ಕೃಷಿ ವಿವಿ ವಿಜ್ಞಾನಿಗಳಾದ ಡಾ.ವಿಕಾಸ ಕುಲಕರ್ಣಿ, ಡಾ.ಉಮೇಶ್ ಎಂ.ಆರ್ ., ಡಾ.ಪೂರ್ಣಿಮಾ, ಡಾ.ಮಲ್ಲರೆಡ್ಡಿ ಇತರರಿದ್ದರು.

ಸಹಾಯಕ ಪ್ರಾಧ್ಯಾಪಕರಾದ ಡಾ.ಉಮೇಶ್ ಹಿರೇಮಠ, ಡಾ.ವಿಜಯಕುಮಾರ ಕೆ. ನಿರ್ವಹಿಸಿದರು.

---

03ಎಂಎಸ್ 10

ರಾಯಚೂರು ತಾಲೂಕಿನ ಕಸ್ಬೆ ಕ್ಯಾಂಪ್ ನ ರೈತ ಶ್ರೀನಿವಾಸರಾವ್ ಅವರ ಜಮೀನಿನಲ್ಲಿಹಮ್ಮಿಕೊಂಡಿದ್ದ ಕ್ಷೇತ್ರೋತ್ಸವದಲ್ಲಿಸಂಶೋಧನಾ ನಿರ್ದೇಶಕ ಡಾ.ಅಮರೇಗೌಡ ಎ. ಮಾತನಾಡಿದರು.