ಅರವಿಂದ್ ಗೆ ಮಣಿದ ಗುಕೇಶ್

Contributed bymanjunath.gowda@timesgroup.com|Vijaya Karnataka

ಪ್ರಾಗ್‌ ಅಂತಾರಾಷ್ಟ್ರೀಯ ಚೆಸ್‌ ಉತ್ಸವದಲ್ಲಿ ಅರವಿಂದ್ ಚಿದಂಬರಂ ಅವರು ವಿಶ್ವ ಚಾಂಪಿಯನ್ ಡಿ. ಗುಕೇಶ್‌ ಅವರಿಗೆ ಸೋಲುಣಿಸಿದ್ದಾರೆ. ಆರನೇ ಸುತ್ತಿನಲ್ಲಿ ನಡೆದ ಈ ಪಂದ್ಯದಲ್ಲಿ ಅರವಿಂದ್ 2.5 ಅಂಕಗಳನ್ನು ಗಳಿಸಿದ್ದಾರೆ. ಗುಕೇಶ್‌ ಅವರು ತಮ್ಮ ವಿಶ್ವ ಚಾಂಪಿಯನ್‌ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಜೋರ್ಡನ್‌ ವ್ಯಾನ್‌ ಫೊರೀಸ್ಟ್‌ 4.5 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

gukeshs stunning victory against aravind chidambaram

ಪ್ರಾಗ್ : ಕಳೆದ ಬಾರಿಯ ಚಾಂಪಿಯನ್ ಅರವಿಂದ್ ಚಿದಂಬರಂ ಪ್ರಾಗ್ ಅಂತಾರಾಷ್ಟ್ರೀಯ ಚೆಸ್ ಉತ್ಸವದ ಆರನೇ ಸುತ್ತಿನಲ್ಲಿವಿಶ್ವ ಚಾಂಪಿಯನ್ ಹಾಗೂ ಸಹ ಆಟಗಾರ ಡಿ. ಗುಕೇಶ್ ಅವರಿಗೆ ಆಘಾತ ನೀಡಿದರು.

ಬುಧವಾರ ನಡೆದ ಆರನೇ ಸುತ್ತಿನಲ್ಲಿಗುಕೇಶ್ ಗೆ ಸೋಲುಣಿದ ಅರವಿಂದ್ , ಒಟ್ಟಾರೆ 2.5 ಅಂಕಗಳನ್ನು ಕಲೆಹಾಕಿದ್ದಾರೆ.2024ರ ಡಿಸೆಂಬರ್ ನಲ್ಲಿವಿಶ್ವ ಚಾಂಪಿಯನ್ ಪಟ್ಟ ಗೆದ್ದ ನಂತರ ಗುಕೇಶ್ ತಮ್ಮ ಸ್ಥಾನಮಾನವನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಡೇವಿಡ್ ನವರಾ ವಿರುದ್ಧ ಡ್ರಾ ಸಾಧಿಸಿದ ಜೋರ್ಡನ್ ವ್ಯಾನ್ ಫೊರೀಸ್ಟ್ ಪ್ರಸ್ತುತ 4.5 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಘ್ಕಿ