ಪ್ರಾಣಿಗಳ ಬಲಿ ನೀಡಧಿದಂತೆ ಎಧಿಚ್ಚಧಿವಧಿಹಿಸಿ

Contributed byravimgl.kumar13@gmail.com|Vijaya Karnataka

ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಮಾರ್ಚ್ 5, 6, 7 ರಂದು ನಡೆಯಲಿದೆ. ಈ ಜಾತ್ರೆಯಲ್ಲಿ ಪ್ರಾಣಿ ಬಲಿ ನೀಡದಂತೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಪ್ರಾಣಿ ಬಲಿ ನೀಡುವುದು ಶಿಕ್ಷಾರ್ಹ ಅಪರಾಧ ಎಂದು ತಿಳಿಸಿದ್ದಾರೆ. ಏಪ್ರಿಲ್ 1 ರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು.

animal sacrifice rising concerns at shri guru tippere udraswamy festival

ಪ್ರಾಣಿಗಳ ಬಲಿ ನೀಡಧಿದಂತೆ ಎಧಿಚ್ಚಧಿವಧಿಹಿಸಿ

ಚಿತ್ರದುರ್ಗ: ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿಪ್ರಾಣಿಗಳನ್ನು ಜಾತ್ರಾ ಪರಿಸರಕ್ಕೆ ತಾರದಂತೆ ಕಟ್ಟೆಚ್ಚರ ವಹಿಸಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಮಾ.5, 6 ಮತ್ತು 7ರಂದು ಜರುಗುವ ಜಾತ್ರೆಗೆ ಸಹಸ್ರಾರು ಭಕ್ತರು ಆಗಮಿಸಿ ದೇವರಿಗೆ ಪೂಜಾದಿ ಧಾರ್ಮಿಕ ಸೇವಾ ಕೈಂಕರ್ಯ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿಹಲವು ಭಕ್ತರು ದೇವರು ಮತ್ತು ಧರ್ಮದ ಹೆಸರಿನಲ್ಲಿಹರಕೆಯ ರೂಪದಲ್ಲಿಆಡು, ಕುರಿ, ಕೋಳಿ ಮುಂತಾದ ಪ್ರಾಣಿಗಳ ಬಲಿ ನೀಡಲಿದ್ದು, ಇದು ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಅಧಿನಿಯಮ 1959 ಮತ್ತು ನಿಯಮಗಳು 1963 ಹಾಗೂ ತಿದ್ದುಪಡಿ ಕಾಯ್ದೆ 1975ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಫೋಟೊ/ದಯಾನಂದ ಸ್ವಾಮೀಜಿ

------

ಸ್ಪರ್ಧಾತ್ಮಕ ಪರೀಕ್ಷೆಗೆ ತಧಿರಧಿಬೇಧಿತಿ

ಏಪ್ರಿಲ್ 1ರಿಂದ ಉಚಿತವಾಗಿ, ರಿಯಾಯಿತಿ ಶುಲ್ಕದೊಂದಿಗೆ ತರಬೇತಿ ನೀಡಲಾಗುವುದು.

ಚಿಧಿತ್ರಧಿದುರ್ಗ: ಕೆಪಿಎಸ್ ಸಿಯ ಮೂಲಕ 2026ನೇ ಸಾಲಿನಲ್ಲಿನಡೆಸಲ್ಪಡುವ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಎಸ್ ಬಿಐ,ಐಬಿಪಿಎಸ್ , ಆರ್ ಆರ್ ಬಿಯ ಮೂಲಕ ನಡೆಸಲ್ಪಡುವ ನಾನಾ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಚಿತ್ರದುರ್ಗದ ಮಹಾತ್ಮ ಫುಲೆ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರದಲ್ಲಿಏಪ್ರಿಲ್ 1ರಿಂದ ಉಚಿತವಾಗಿ, ರಿಯಾಯಿತಿ ಶುಲ್ಕದೊಂದಿಗೆ ತರಬೇತಿ ನೀಡಲಾಗುವುದು. ಸ್ಪರ್ಧಾತ್ಮಕ ಮತ್ತು ಬ್ಯಾಂಕಿಂಗ್ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳ ಬಯಸುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ನಿರ್ದೇಶಕರು, ಮಹಾತ್ಮ ಫುಲೆ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರ, ಚಿತ್ರದುರ್ಗ, 92428 43504 ಇವರನ್ನು ಸಂಪರ್ಕಿಸಲು ಕೋರಿದೆ.