ಜೀವಜಲಕ್ಕಾಗಿ ರಾಧಿತ್ರಿಧಿವೀಡಿ ಜಾಧಿಗಧಿರಣೆ - ಸಧಿರಣಿ ಲೀಡ್

Contributed bymaruthi.sunagar@timesofindia.com|Vijaya Karnataka

ಬಳ್ಳಾರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಗ್ರಾಮೀಣ ಭಾಗದಲ್ಲಿ ಜನರು ರಾತ್ರಿಯೆಲ್ಲಾ ನೀರಿಗಾಗಿ ಕಾಯುವಂತಾಗಿದೆ. ಜಿಲ್ಲಾ ಕೇಂದ್ರ ಬಳ್ಳಾರಿ ನಗರದಲ್ಲೂ ನೀರಿನ ಅಭಾವ ಎದುರಾಗಿದ್ದು, 10 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಮಸ್ಯೆ ಇನ್ನಷ್ಟು ಉಲ್ಬಣಿಸುವ ಸಾಧ್ಯತೆ ಇದೆ. ಕೆರೆಗಳಲ್ಲಿ ಸಂಗ್ರಹವಾದ ನೀರು ಬೇಸಿಗೆಯಲ್ಲಿ ನಿರ್ವಹಣೆ ಮಾಡಬೇಕಿದೆ. ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಜನರು ಖಾಸಗಿ ಟ್ಯಾಂಕರ್ ಗಳನ್ನು ಅವಲಂಬಿಸುವಂತಾಗಿದೆ.

water scarcity in ballari district a distressing situation

*ಜಿಲ್ಲಾಕೇಂದ್ರಧಿದಲ್ಲೇ ಕುಧಿಡಿಧಿಯುವ ನೀಧಿರಿನ ಅಧಿಭಾವ

* ಬಧಿಳ್ಳಾರಿ ನಧಿಗಧಿರಧಿಕ್ಕೆ 10 ದಿನಕ್ಕೊಮ್ಮೆ ಪೂಧಿರೈಕೆ

* ಏಧಿಪ್ರಿಲ್ , ಮೇಧಿನಲ್ಲಿಇಧಿನ್ನಷ್ಟು ಸಧಿಮಸ್ಯೆ ಉಧಿಲ್ಬಣ

ಜೀವಜಲಕ್ಕಾಗಿ ರಾಧಿತ್ರಿಧಿವೀಡಿ ಜಾಧಿಗಧಿರಣೆ

ಮಾಧಿರುತಿ ಸುಧಿಣಧಿಗಾರ ಬಳ್ಳಾರಿ

ಸಮುದ್ರದ ದಡದಲ್ಲಿಉಪ್ಪಿಗೆ ಕೊರತೆ ಎಂಬಂತೆ, ತುಂಗಭದ್ರಾ ಜಲಾಶಯವಿದ್ದರೂ, ಗಣಿಜಿಲ್ಲೆಯ ಜನತೆಗೆ ಕುಡಿವ ನೀರಿನ ಅಧಿಭಾವ ತಧಿಪ್ಪಿಲ್ಲ. ಗ್ರಾಧಿಮೀಣ ಭಾಧಿಗದಲ್ಲಿನೀಧಿರಿಧಿಗಾಗಿ ರಾಧಿತ್ರಿಧಿವೀಡಿ ಜಾಧಿಗಧಿರಣೆ ಮಾಧಿಡುಧಿವಂತಾಧಿಗಿದೆ.

ಜಿಲ್ಲೆಯಲ್ಲಿಪ್ರಸಕ್ತ ಸಾಲಿನಲ್ಲಿಬೇಸಿಗೆ ಆಧಿರಂಭಧಿದಲ್ಲೇ ಕುಡಿಧಿಯುವ ನೀರಿನ ಸಮಸ್ಯೆ ತಾರಕಕ್ಕೇರುತ್ತಿದ್ದು, ಜೀವಜಲಕ್ಕಾಗಿ ಬಾಯ್ತರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಧಿಲ್ಲೆಯ 83 ಗ್ರಾಧಿಮಗಧಿಳಲ್ಲಿಪ್ರಧಿಸಕ್ತ ಸಾಧಿಲಿಧಿನಲ್ಲಿಕುಧಿಡಿಧಿಯುವ ನೀಧಿರಿನ ಸಧಿಮಸ್ಯೆ ಉಧಿಲ್ಬಧಿಣಧಿಗೊಧಿಳ್ಳುವ ಸಾಧಿಧ್ಯಧಿತೆಧಿವಿದೆ ಎಂದು ಜಿಧಿಲ್ಲಾಧಿಡಧಿಳಿಧಿತದ ಪಟ್ಟಿ ಮಾಧಿಡಿದ್ದು, ಕಧಿಳೆದ ಸಾಧಿಲಿಧಿನಲ್ಲಿ64 ಗ್ರಾಧಿಮಧಿಗಧಿಳಲ್ಲಿನೀಧಿರಿನ ಸಧಿಮಸ್ಯೆ ಆಧಿಗಿತ್ತು. ಈ ಬಾರಿ ಅಧಿದರ ಸಂಖ್ಯೆ ಹೆಧಿಚ್ಚಾಧಿಗಿದೆ. ಅಧಿಲ್ಲದೆ ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳ 203ವಾರ್ಡ್ ಗಳ ಪೈಕಿ 24 ವಾರ್ಡ್ ಗಳಲ್ಲಿನೀರಿನ ಅಭಾವ ಉಂಟಾಗುವ ಸಾಧ್ಯತೆಗಳಿವೆ ಎಂದು ಗುರುತಿಸಲಾಗಿದೆ.

ಜಿಲ್ಲೆಯಲ್ಲಿಪ್ರತಿ ವರ್ಷ ಬೇಸಿಗೆ ಎದುರಾಗುತ್ತಿದ್ದಂತೆ ಐದು ತಾಲೂಕುಗಳಲ್ಲಿ100 ಗ್ರಾಪಂ, 8ನಗರ ಸ್ಥಳೀಯ ಸಂಸ್ಥೆಗಳಿದ್ದು, ಎಲ್ಲೆಡೆ ನೀರಿನ ಅಭಾವ ಉಂಟಾಗುವುದು, ಕೊಳವೆ ಬಾವಿಗಳು ಬತ್ತುವುದು, ಕೆರೆಗಳಲ್ಲಿಶೇಖರಣೆಗೊಂಡ ನೀರು ಬಿಸಿಲಿನ ತಾಪಕ್ಕೆ ಆವಿಯಾಗುವುದು ಸಾಮಾನ್ಯವಾಗಿದೆ. ಅದರಲ್ಲೂಜಿಲ್ಲಾಕೇಂದ್ರ ಬಳ್ಳಾರಿ ನಗರದಲ್ಲಿಯೇ ಕುಡಿಯುವ ನೀರಿಗಾಗಿ ಜನತೆ ನಿತ್ಯ ಸರ್ಕಸ್ ಮಾಡುವಂತಹ ಪರಿಸ್ಥಿತಿ ಎದುರಾಗಿದ್ದು, ನೀರಿನ ಅಭಾವ ಇಲ್ಲಿನ ಜನತೆಗೆ ಮಾತ್ರವಲ್ಲದೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೂ ಬಿಸಿ ತಟ್ಟಿದೆ.

ಸರಕಾರದಿಂದ ಪ್ರತಿ ವರ್ಷ 24*7ಕುಯುಧಿವ ನೀರು ಒದಗಿಸುವ ಜಪದೊಂದಿಗೆ ಕೋಟ್ಯಂತರ ರೂ. ಅನುದಾನ ನೀರಿನಂತೆ ಹರಿಸಿದರೂ ಕುಡಿಯುವ ನೀರಿನ ಸಮಸ್ಯೆಗೆ ಮಾತ್ರ ಪರಿಹಾರ ದೊರಕದಂತಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಬೇಸಿಗೆಯಲ್ಲಿಎಲ್ಲೆಡೆ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ, ಗ್ರಾಮೀಣ, ನಗರ ಭಾಗದಲ್ಲಿನ ಕಾದಾಟಗಳಿಗೆ ಕೊನೆಯಿಲ್ಲದಂತಾಗಿದೆ.

ಬಳ್ಳಾರಿ ನಗರಕ್ಕೆ ನೀರಿನ ಸಧಿಮಧಿಸ್ಯೆ: ಜಿಲ್ಲಾಕೇಂದ್ರ ಬಳ್ಳಾರಿ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಒಟ್ಟು 39ವಾರ್ಡ್ ಇದೆ. ಬಳ್ಳಾರಿ ನಗರ ಹಾಗೂ ಗ್ರಾಮೀಣ ಕ್ಷೇತ್ರವನ್ನು ಹಂಚಿಕೊಂಡಿರುವ ನಗರದಲ್ಲಿಸಾಮಾನ್ಯ ದಿನಗಳಲ್ಲಿಯೇ ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನೂ ಬೇಸಿಗೆ ಎದುರಾದರೇ 10-15ದಿನಕ್ಕೊಮ್ಮೆ ನೀರು ಪೂರೈಸುವುದು ಸಾಮಾನ್ಯವಾಗಿದೆ. ಪ್ರಸ್ತುತ ಬೇಸಿಗೆಯಲ್ಲಿಸ್ಥಳೀಯ ಆಡಳಿತದಿಂದ 9 ವಾರ್ಡ್ ಗಳಲ್ಲಿನೀರಿನ ಸಮಸ್ಯೆ ಎದುರಾಗುವ ಬಗ್ಗೆ ಗುರುತಿಸಿದೆ. ಆದರೆ, ವಾಸ್ತವದಲ್ಲಿನಗರದ ಎಲ್ಲವಾರ್ಡ್ ಗಳಲ್ಲಿನೀರಿನ ಅಭಾವ ಉಂಟಾಗಿದ್ದು, ನಗರದ ಜನತೆ ಕುಡಿಯುವ ನೀರಿಗಾಗಿ ಹೆಚ್ಚಿನ ಹಣ ವ್ಯಹಿಸಿ ಖಾಸಗಿ ಟ್ಯಾಂಕರ್ , ಆರ್ ಒ ಪ್ಲಾಂಟ್ ಗಳ ಮೊರೆ ಹೋಗುವಂತಾಗಿದೆ. ಇದಲ್ಲದೆ, ಬಹುತೇಕ ಕುಟುಂಬಗಳು ಖಾಸಗಿ ಕ್ಯಾನ್ ಗಳ ಖರೀದಿಗೆ ಸಹ ಮುಂದಾಗಿವೆ.

ಕೆರೆಗಳಲ್ಲಿ9,365 ಎಂಎಲ್ ಡಿ ನೀರು: ಬಳ್ಳಾರಿ ಮಹಾನಗರದಲ್ಲಿನಾಲ್ಕು ಕೆರೆ ಮೂಲಕ ಎಲ್ಲವಾರ್ಡ್ ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಈ ಕೆರೆಗಳಿಗೆ ಎಚ್ ಎಲ್ ಸಿ, ಎಲ್ ಎಲ್ ಸಿ ಮೂಲಕ ನೀರು ತುಂಬಿಸಿಕೊಳ್ಳಲಾಗುತ್ತಿದೆ. ಅಲ್ಲೀಪುರ ಕೆರೆಯಲ್ಲಿಒಟ್ಟು 12633ಎಂಎಲ್ ಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 8055ಎಂಎಲ್ ಡಿ ನೀರು ಸಂಗ್ರಹವಿದೆ. ಮೋಕಾ 1 ಕೆರೆಯಲ್ಲಿ523 ಎಂಎಲ್ ಡಿ ಸಾಮರ್ಥ್ಯದಲ್ಲಿಈಗ 249.61ಎಂಎಲ್ ಧಿಡಿ, ಮೋಕಾ 2 ಕೆರೆ 710ಎಂಎಲ್ ಧಿಡಿ ಸಾಮರ್ಥ್ಯ ಹೊಂದಿದ್ದು ಸದ್ಯ 288.02ಎಂಎಲ್ ಡಿ ಹಾಗೂ ಹೊಸ ಮೋಕಾ ಗ್ರಾಮದಲ್ಲಿರುವ ಕೆರೆ 800ಎಂಎಲ್ ಡಿ ಸಾಮರ್ಥ್ಯವಿದ್ದು, ಈಗ 773.26ಎಂಎಲ್ ಡಿ ನೀರು ಸಂಗ್ರಹವಿದೆ. ಒಟ್ಟಾರೆ ನಾಲ್ಕು ಕೆರೆಗಳಲ್ಲಿ14,666 ಎಂಎಲ್ ಡಿ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 9,365 ಎಂಎಲ್ ಡಿ ನೀರು ಇದ್ದು, ಇದೇ ನೀರಿನಲ್ಲಿಯೇ ಬೇಸಿಗೆ ನಿರ್ವಹಣೆ ಮಾಡಬೇಕಿದೆ.

ಅಭಾವದ ನಡುವೆಯೂ ಕಲುಷಿತ ನೀರು: ಮಹಾನಗರ ಪಾಲಿಕೆಯ 39 ವಾರ್ಡ್ ಗಳಲ್ಲಿಎದುರಾಗಿರುವ ನೀರಿನ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ನೀರಿಗಾಗಿ ದಿನಗಟ್ಟಲೇ ಎದುರು ನೋಡುವ ಹಲವು ವಾರ್ಡ್ ಗಳಲ್ಲಿನ ನಿವಾಸಿಗಳಿಗೆ ಕಲುಷಿತ ನೀರೇ ಗತಿ ಎನ್ನುವಂತಾಗಿದೆ. ಬಹುತೇಕ ವಾರ್ಡ್ ಗಳಲ್ಲಿಚರಂಡಿ ನೀರು ಮಿಶ್ರಿತ ನೀರು ಸರಬರಾಜು ಆಗುತ್ತಿರುವ ಹಿನ್ನೆಲೆ ಅದನ್ನೇ ದಿನ ನಿತ್ಯ ಬಳಕೆ ಮಾಡಿಕೊಳ್ಳುವಂತ ಪರಿಸ್ಥಿತಿಯಿದೆ. ಹೀಗಾಗಿ, ಸಮರ್ಪಕ ನೀರು ಪೂರೈಕೆಯಾಗದ ಕಾರಣ ಅನೇಕ ಕುಟುಂಬಗಳು ಟ್ಯಾಂಕರ್ ಮೊರೆಹೋಗಿದ್ದಾಧಿರೆ. ಪ್ರತಿಯೊಂದು ಖಾಸಗಿ ಟ್ಯಾಂಕರ್ ಬೋರ್ ವೆಲ್ ನೀರಿಗೆ 600-800 ರೂ. ಇದ್ದರೆ, ಸಿಹಿ ನೀರಿನ ಟ್ಯಾಂಕರ್ ಗೆ 800-1000ರೂ. ವ್ಯಹಿಸಲಾಗುತ್ತಿದೆ.

ಬಾಕ್ಸ್

ಜಿಧಿಲ್ಲೆಧಿಯಲ್ಲಿನೀಧಿರಿನ ಸಧಿಮಧಿಸ್ಯೆ ಎಧಿದುಧಿರಾಧಿಗುವ ಗ್ರಾಧಿಮಧಿಗಧಿಳಧಿನ್ನು ಗುಧಿರುಧಿತಿಧಿಸಿಧಿರುವ ಜಿಧಿಲ್ಲಾಧಿಡಧಿಳಿತ.(ಧಿಅಂಕಿ-ಅಂಶ)

ತಾಧಿಲೂಕು ಸಧಿಮಧಿಸ್ಯಾಧಿತ್ಮಕ ಗ್ರಾಧಿಮಧಿಗಳ ಸಂಖ್ಯೆ

ಬಳ್ಳಾರಿ 21

ಕುರುಗೋಡು 15

ಸಿರುಗುಪ್ಪ 28

ಕಂಪ್ಲಿ 16

ಸಂಡೂರು 3

ಒಟ್ಟು 83

(ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳ 203ವಾರ್ಡ್ ಗಳ ಪೈಕಿ 24ವಾರ್ಡ್ ಗಳಲ್ಲಿನೀರಿನ ಅಭಾವ ಉಂಟಾಗುವ ಸಾಧ್ಯತೆಗಳಿವೆ)

* ಕೋಟ್

ಬಳ್ಳಾರಿ ನಗರ ವ್ಯಾಪ್ತಿಯಲ್ಲಿಬೇಸಿಗೆಯಲ್ಲಿಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮಕೈಗೊಂಡಿದೆ. ಸದ್ಯ ಕೆರೆಗಳಲ್ಲಿನೀರಿದೆ. ನೀರು ವ್ಯರ್ಥವಾಗುವುದನ್ನು ತಡೆಗಟ್ಟಲು ಜಾಗೃತಿ ಮೂಡಿಸಲಾಗುತ್ತಿದೆ. ಕಲುಷಿತ ನೀರು ಸರಬರಾಜು ಆಗುತ್ತಿರುವ ಬಗ್ಗೆ ಗಮನಹರಿಸಿ ಶುದ್ಧ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು.

- ಪಿ.ಗಾದೆಪ್ಪ, ಮೇಯರ್ , ಮಹಾನಗರ ಪಾಲಿಕೆ, ಬಳ್ಳಾರಿ.

ಕೋಟ್

ಬಳ್ಳಾರಿ ನಗರದಲ್ಲಿನೀರಿನ ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದೆ. ಬಡಾವಣೆಯಲ್ಲಿಸದ್ಯ 10 ದಿನಕೊಮ್ಮೆ ನೀರು ಸಿಗುತ್ತಿದೆ. ಇನ್ನೂ ಬೇಸಿಗೆಯಲ್ಲಿಸಮಸ್ಯೆ ಮತ್ತಷ್ಟು ತೀವ್ರಗೊಳ್ಳಲಿದೆ. ಕೆಲವೆಡೆ ನೀರನ್ನು ಪೋಲು ಮಾಡುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು. ನಾನಾ ಕಡೆ ಡ್ರೈನೆಜ್ ನೀರು ಸರಬರಾಜು ಆಗುತ್ತಿದ್ದು, ಶುದ್ಧ ಕುಡಿಧಿಯುವ ನೀರು ಒದಗಿಸಬೇಕು.

- ಈಶ್ವರಿ, ಸದಸ್ಯರು, ಬಳ್ಳಾರಿ ನಾಗರಿಕ ಹೋರಾಟ ಸಮಿತಿ.

* ಕೋಟ್

| ಜಿಧಿಲ್ಲಾಧಿಧಿಧಿಕಾರಿ ಕೋಟ್ ಬಧಿರಧಿಲಿಧಿದೆ

04 ಮಾರುತಿ 03

ಬಳ್ಳಾರಿ ನಗರಕ್ಕೆ ನೀರು ಸರಬರಾಜು ಮಾಡುವ ಅಲ್ಲೀಧಿಪುರ ಕೆರೆಯಲ್ಲಿಸಂಗ್ರಹಗೊಂಡ ನೀರು.