ಸ್ವಚ್ಛತೆ ಕಾಪಾಡುವುದು ಎಲ್ಲರ ಕರ್ತವ್ಯ
ವಿಕ ಸುದ್ದಿಲೋಕ ಚಿಕ್ಕಮಗಳೂರು
ಬಡಾವಣೆ ಸುತ್ತಮುತ್ತಲು ಸ್ವಚ್ಛತೆ ಕಾಪಾಡುವುದು ನಾಗರಿಕರ ಮೂಲ ಕರ್ತವ್ಯ. ಕಸ ಕಂಡುಬಂದಲ್ಲಿಸ್ವಚ್ಛತೆಗೆ ಮುಂದಾಗುವ ಮೂಲಕ ಸ್ವಚ್ಛ ನಗರಿ ನಿರ್ಮಾಣಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಬ್ರಹ್ಮಕುಮಾರೀಸ್ ಸಂಸ್ಥೆ ಸಂಚಾಲಕಿ ಕೆ.ಎಸ್ .ಭಾಗ್ಯಲಕ್ಷಿತ್ರ್ಮ ಹೇಳಿದರು.
ನಗರದ ಹೌಸಿಂಗ್ ಬೋರ್ಡ್ ಸಮೀಪ ಸಾರ್ವಜನಿಕರ ಸಹಯೋಗದಲ್ಲಿಶುಕ್ರವಾರ ಆಯೋಜಿಸಿದ್ಧ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನೆಯಂಗಳ, ಆವರಣದಲ್ಲಿಅಕ್ಕಪಕ್ಕದ ನಿವಾಸಿಗಳು ಸ್ವಯಂ ಪ್ರೇರಿತರಾಗಿ ಸ್ವಚ್ಛತೆ ಕಾಪಾಡಬೇಕು. ಇದು ಆರೋಗ್ಯಪೂರ್ಣ ಬದುಕಿಗೆ ಪೂರಕವಾಗಲಿದೆ. ಜತೆಗೆ ಸಸಿ ನೆಡುವ ಅಭ್ಯಾಸವನ್ನು ರೂಢಿಸಿಕೊಂಡರೆ ಸ್ವಚ್ಛಂದ ಆಮ್ಲಜನಕ ಲಭ್ಯವಾಗಿ ಮುಂದಿನ ಪೀಳಿಗೆಗೆ ಆಸರೆಯಾಗಲಿದೆ ಎಂದರು.
ನಗರಸಭೆ ಸದಸ್ಯೆ ಕವಿತಾ ಶೇಖರ್ ಮಾತನಾಡಿ, ಬಡಾವಣೆ ಸೇರಿದಂತೆ ಜಿಲ್ಲಾದ್ಯಂತ ಸ್ವಚ್ಛತೆ ನಿರ್ವಹಣೆ ದೊಡ್ಡ ಸವಾಲಾಗಿದೆ. ಕೆಲವರು ಬೇಕಾಬಿಟ್ಟಿ ರಸ್ತೆಬದಿ, ಚರಂಡಿಗಳಲ್ಲೇ ಕಸ ಸುರಿದು ಪರಿಸರಕ್ಕೆ ಹಾನಿ ಮಾಡುತ್ತಿದ್ದು, ಇದು ನಿಲ್ಲಬೇಕು. ಪ್ರತಿದಿನ ನಗರಸಭೆ ಗಂಟೆಗಾಡಿಗಳಲ್ಲೇ ಒಣ ಮತ್ತು ಹಸಿ ಕಸವನ್ನು ವಿಂಗಡಿಸಿ ಹಾಕಬೇಕು ಎಂದು ಸಲಹೆ ಮಾಡಿದರು.
ಶ್ರೀಶಕ್ತಿ ಅಸೋಸಿಯೇಷನ್ ನಿರ್ದೇಶಕ ಡಾ. ಅನೀತ್ ಕುಮಾರ್ , ಶಿಕ್ಷಕ ದೊಡ್ಡಮಲ್ಲಪ್ಪ, ಶ್ರೀ ಶಕ್ತಿ ಅಸೋಸಿಯೇಷನ್ ವ್ಯವಸ್ಥಾಪಕ ಎಚ್ .ಮಂ ಜುನಾಥ್ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
ಫೋಟೋ:16ರುದ್ರಯ್ಯ-ಪಿ9
ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಸಮೀಪ ಸಾರ್ವಜನಿಕರ ಸಹಯೋಗದಲ್ಲಿಶುಕ್ರವಾರ ಸ್ವಚ್ಛತಾ ಕಾರ್ಯ ಆಯೋಜಿಸಲಾಗಿತ್ತು.

