ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ

Contributed byhotiblhvk@gmail.com|Vijaya Karnataka

ಮರಕುಂಬಿಯ ಶ್ರೀ ಬಿ.ಬಿ.ಗಣಾಚಾರಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು. ಧರ್ಮದರ್ಶಿ ಡಾ.ಜಿ.ಬಿ.ಮಲ್ಲೇಶ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಸಲಹೆ ನೀಡಿದರು. ಗ್ರಾಮೀಣ ವಿದ್ಯಾರ್ಥಿಗಳು ಉನ್ನತ ಅಧಿಕಾರಿಗಳಾಗಬೇಕು ಎಂದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ಶಿವನಗೌಡ ಪಾಟೀಲ, ಈಶ್ವರ ಉಳ್ಳೆಗಡ್ಡಿ, ಡಾ.ರವಿ ಜಕನೂರ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

courage and confidence in education encouraging rural students

ಧರ್ಮದರ್ಶಿ ಡಾ.ಜಿ.ಬಿ.ಮಲ್ಲೇಶ ಸಲಹೆ | ವಾರ್ಷಿಕ ಸ್ನೇಹ ಸಮ್ಮೇಳನ

ವಿಕ ಸುದ್ದಿಲೋಕ ಬೈಲಹೊಂಗಲ

ವಿದ್ಯಾರ್ಥಿಗಳು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸಿ ಸಾಧನೆ ಮಾಡಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಅಧಿಕಾರಿಗಳಾಗಬೇಕೆಂದು ಗೌಡಗೆರೆ-ಮರಕುಂಬಿ ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ.ಜಿ.ಬಿ.ಮಲ್ಲೇಶ ಹೇಳಿದರು.

ಸಮೀಪದ ಮರಕುಂಬಿಯ ಶ್ರೀ ಬಿ.ಬಿ.ಗಣಾಚಾರಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ‘‘ಈ ಭಾಗದಲ್ಲಿಶಿಕ್ಷಣ ಕ್ರಾಂತಿ ಮಾಡುತ್ತಿರುವ ಬಿ.ಬಿ.ಗಣಾಚಾರಿ ಅವರ ಕಾರ್ಯ ಶ್ಲಾಘನೀಯ,’’ ಎಂದರು.

ಬ್ರಹ್ಮಾಕುಮಾರಿ ಪ್ರಭಾ ಅಕ್ಕ ನೇತೃತ್ವ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಬಿ.ಬಿ.ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಈಶ್ವರ ಉಳ್ಳೇಗಡ್ಡಿ, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರವಿ ಜಕನೂರ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ವಿರೂಪಯ್ಯ ಕೋರಿಮಠ, ಕಾರ್ತಿಕ ಪಾಟೀಲ, ಮಡಿವಾಳಪ್ಪ ಹೋಟಿ, ಮಹಾಂತೇಶ ತುರಮರಿ, ಬಸವರಾಜ ತಿಗಡಿ, ಡಾ.ಸಿ.ಬಿ.ಗಣಾಚಾರಿ, ಕಾಶೀನಾಥ ಬಿರಾದಾರ, ಮಹಾಂತೇಶ ಕೌಜಲಗಿ, ಪ್ರಧಾನ ಗುರುಮಾತೆ ಎಂ.ಸಿ.ಕಾಜಗಾರ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಎಸ್ .ಎಂ.ಅಂಬರಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಎಂ.ಡಿ.ಕಡಬಿ ನಿರೂಪಿಸಿದರು. ಶಿಕ್ಷಕ ಎಸ್ .ಎಸ್ .ಮೇಟಿ ವಿದ್ಯಾರ್ಥಿಗಳಿಗೆ ಬಹುಮಾನ ಕಾರ್ಯಕ್ರಮ ನಡೆಸಿಕೊಟ್ಟರು.

ಶಿಕ್ಷಕ ಎಮ್ .ಡಿ.ಅಂಬೋಜಿ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಫೊಟೊ 16ಹೆಚ್ ಟಿಪಿ1: ಗಣಾಚಾರಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರವಿ ಜಕನೂರ ಅವರನ್ನು ಸನ್ಮಾನಿಸಲಾಯಿತು.