*ಚಿತ್ರ: 16ಜಿಎಲ್ ಬಿ5*
**
ಮಾನವೀಯ ಕಲ್ಯಾಣ ಟ್ರಸ್ಟ್ ,ಅರುಜೀವ ಆಯುರ್ವೇದ ಆಸ್ಪತ್ರೆಯಿಂದ ಆಯೋಜನೆ(ಕಿಕ್ಕರ್ )
ಫೆಬ್ರವರಿವರೆಗೆ ಉಚಿತ ತಪಾಸಣೆ
ವಿಕ ಸುದ್ದಿಲೋಕ ಕಲಬುರಗಿ
ಮಾನವೀಯ ಕಲ್ಯಾಣ ಟ್ರಸ್ಟ್ , ಅರುಜೀವ ಆಯುರ್ವೇದ ಆಸ್ಪತ್ರೆಯಿಂದ ನಗರದ ಐವಾನ್ -ಇ-ಶಾಹಿ ಸಮೀಪದ ಎಸ್ .ಎಸ್ .ಪಾಟೀಲ್ ಅಪಾರ್ಟ್ ಮೆಂಟ್ ನಲ್ಲಿಆರಂಭಿಸಿರುವ ಸಿಟಿ ಕ್ಲಿನಿಕ್ ನಲ್ಲಿಜನವರಿ ಮತ್ತು ಫೆಬ್ರವರಿವರೆಗೆ ಉಚಿತ ಪರೀಕ್ಷೆ ಅಥವಾ ಸಮಾಲೋಚನೆ ಇರಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಟ್ರಸ್ಟ್ ನ ಜನರಲ್ ಮ್ಯಾನೇಜರ್ ಡಾ.ಶಾಲಿನ್ ಭಾರತಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ಜನಸಾಮಾನ್ಯರಿಗೆ ಹತ್ತಿರವಾಗಲು ಯೋಗ, ಆಯುರ್ವೇದ, ನ್ಯಾಚುರೋಪತಿ ಮತ್ತು ಫಿಜಿಯೋಥೆರಪಿ ಕ್ಷೇತ್ರಗಳಲ್ಲಿಶಾಸ್ತೊ್ರೕಕ್ತ ವಿಶೇಷ ಚಿಕಿತ್ಸೆ ತಲುಪಿಸುವ ಉದ್ದೇಶದಿಂದ ಸಿಟಿ ಕ್ಲಿನಿಕ್ ತೆರೆಯಲಾಗಿದೆ. ಸೇಡಂ ರಸ್ತೆಯ ವಿಮಾನ ನಿಲ್ದಾಣ ಸಮೀಪದಲ್ಲಿರುವ ಅರುಜೀವ ಆಯುರ್ವೇದ ಆಸ್ಪತ್ರೆಗೆ ಬರಲು ಸಾಧ್ಯವಾಗದವರು ನಗರ ಕ್ಲಿನಿಕ್ ಗೆ ಭೇಟಿ ನೀಡಿ, ತಜ್ಞ ವೈದ್ಯರಿಂದ ಉಚಿತ ಸಲಹೆ ಪಡೆಯಬಹುದು ಎಂದರು.
ಮಾರುಕಟ್ಟೆ ವ್ಯವಸ್ಥಾಪಕ ಸಂದೀಪ್ ಪಿ.ಮಾಳಗಿ ಮಾತನಾಡಿ, ಸೇಡಂ ರಸ್ತೆಯಲ್ಲಿ40 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಇದ್ದು, ವಿದೇಶಿಗರು ಕೂಡ ಬರುತ್ತಿದ್ದಾರೆ. ಫೆಬ್ರುವರಿ ಮೊದಲ ವಾರದಲ್ಲಿಐವಾನ್ -ಇ-ಶಾಹಿ ಉದ್ಯಾನದಲ್ಲಿಉಚಿತವಾಗಿ ಯೋಗ ತರಗತಿಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಡಾ.ಆಕಾಂಕ್ಷಾ ಸಿದ್ದು ಇದ್ದರು.

