ಶೀಘ್ರದಲ್ಲೇ ಬಿಇಒ ಕಚೇರಿ ಆರಂಭ
ಶಾಸಕ ಜೆ.ಎನ್ .ಗಣೇಶ್ ಭರವಸೆ
ವಿಕ ಸುದ್ದಿಲೋಕ ಕಂಪ್ಲಿ
‘‘ ಬಿಇಒ ಕಚೇರಿ ಆರಂಭಿಸಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವೆ,’’ ಎಂದು ಶಾಸಕ ಜೆ.ಎನ್ .ಗಣೇಶ್ ಹೇಳಿದರು.
ಇಲ್ಲಿನ ವೀರಶೈವ ಭವನದಲ್ಲಿತಾಲೂಕು ಮಟ್ಟದ ಶಿಕ್ಷಕ ದಿನ, ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಶುಕ್ರವಾರ ಉದ್ಘಾಟಿಸಿ, ‘ಕಚೇರಿಗೆ ಸಂಬಂಧ ಅವಶ್ಯ ಅಂಕಿ, ಅಂಶ, ಮಾಹಿತಿ ನೀಡಿ ಶಿಕ್ಷಣ ಸಚಿವರಿಗೆ ಮನವಿ ಮಾಡಿದೆ. ಮುಂಬರುವ ದಿನದಲ್ಲಿಆರಂಭವಾಗಲಿದ್ದು ಗುರುಭವನ, ನೌಕರರ ಭವನಗಳಿಗೆ ನೀವು ನಿವೇಶನ ಪಡೆದುಕೊಂಡಲ್ಲಿಕಟ್ಟಡ ನಿರ್ಮಿಸಲು ಅನುದಾನ ಮಂಜೂರು ಮಾಡಲಾಗುವುದು. ಓಪಿಎಸ್ ಅನುಷ್ಠಾನ ಸೇರಿ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಸರಕಾರದ ಗಮನ ಸೆಳೆಯಲಾಗುವುದು. ಎಮ್ಮಿಗನೂರು, ದೇವಸಮುದ್ರಗಳಲ್ಲಿಕೆಪಿಎಸ್ ಶಾಲೆ ಮಂಜೂರಾಗಿದ್ದು, ಕ್ಷೇತ್ರದಲ್ಲಿಇನ್ನೂ ನಾಲ್ಕು ಕೆಪಿಎಸ್ ಶಾಲೆ ಮಂಜೂರಾಗಲಿವೆ. ಸಿಎಸ್ ಆರ್ , ಡಿಎಂಎಫ್ ಅನುದಾನದಲ್ಲಿಶಾಲೆ ಕೊಠಡಿಗಳನ್ನು ನಿರ್ಮಿಸಲಾಗುವುದು,’’ ಎಂದರು.
ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ‘‘ ಗುರುಭವನಕ್ಕಾಗಿ ನಿವೇಶನ ನೀಡಬೇಕು. ಕಾಯಂ ಶಿಕ್ಷಕರನ್ನು ನೇಮಿಸಬೇಕು,’’ ಎಂದರು.
ಸಭೆಯಲ್ಲಿನಿವೃತ್ತ ಶಿಕ್ಷಕರು, ನಾನಾ ಕ್ಷೇತ್ರಗಳ ಸಾಧಕ ಶಿಕ್ಷಕರನ್ನು ಗೌರವಿಸಲಾಯಿತು. ನಾನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಬಿಇಒ ಟಿ.ಎಂ.ಸಿದ್ಧಲಿಂಗಮೂರ್ತಿ, ಅಧಿಕಾರಿಗಳಾದ ಆರ್ .ಕೆ.ಶ್ರೀಕುಮಾರ್ , ಕೆ.ಎಸ್ .ಮಲ್ಲನಗೌಡ, ಮನೋಹರ, ಶಿಕ್ಷಕರಾದ ಪಿ.ನಾಗೇಶ್ವರರಾವ್ , ಎಚ್ .ದೊಡ್ಡಬಸಪ್ಪ, ಟಿ.ಎಂ.ಬಸವರಾಜ, ಮಂಜುನಾಥ, ಸುನಿತಾ ಪೂಜಾರ, ನಿಂಗಪ್ಪ, ಟಿ.ಪಂಪಾಪತಿ, ಅಂಬಿಗರ ಮಂಜುನಾಥ, ಎಂ.ರೇವಣ್ಣ, ಸುಗ್ಗೇನಹಳ್ಳಿ ರಮೇಶ್ ಸೇರಿ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು, ಮುಖಂಡರು ಇದ್ದರು.
ಪೊ.ಶೀ.16ಕೆಎಂಪಿ2;-Üಂಪ್ಲಿಯಲ್ಲಿನಡೆದ ಶಿಕ್ಷಕ ದಿನದಲ್ಲಿನಿವೃತ್ತ ಶಿಕ್ಷಕರು, ಸಾಧನೆ ಮಾಡಿದ ಶಿಕ್ಷಕರನ್ನು ಶುಕ್ರವಾರ ಗೌರವಿಸಲಾಯಿತು.

