ಬೆಣ್ಣೆತೊರಾ ಹಿನ್ನೀರಿಗೆ ಹಾರಿದ ಯುವತಿ
ವಿಕ ಸುದ್ದಿಲೋಕ ಕಮಲಾಪುರ
ಯುವತಿಯೊಬ್ಬಳು ಶುಕ್ರವಾರ ಮಧ್ಯಾಹ್ನ ಕುರಿಕೋಟಾದ ಹಳೆಯ ಸೇತುವೆ ಮೇಲಿಂದ ಬೆಣ್ಣೆತೊರಾ ಹಿನ್ನೀರಿಗೆ ಹಾರಿದ ಘಟನೆ ನಡೆದಿದೆ.
ತಾಲೂಕಿನ ಮಹಾಗಾಂವ ಗ್ರಾಮದ ತ್ರಿವೇಣಿ ಸೂರ್ಯಕಾಂತ (30) ನದಿಗೆ ಹಾರಿದ ಯುವತಿ. ಬೆಳಗ್ಗೆ ಮನೆಯಿಂದ ಹೊರ ಹೋಗಿದ್ದ ಯುವತಿ, ಮಧ್ಯಾಹ್ನ ಕುರಿಕೋಟಾ ಸೇತುವೆ ಮೇಲಿಂದ ಬೆಣ್ಣೆತೊರಾ ಹಿನ್ನೀರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಹಾರಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಹಾಗಾಂವ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಜೆಯಾಗಿದ್ದರಿಂದ ಶನಿವಾರ ಬೆಳಗ್ಗೆ ಯುವತಿಯ ಪತ್ತೆ ಕಾರ್ಯ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಯಾವ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾಳೆ ಎಂಬುದು ತಿಳಿದು ಬಂದಿಲ್ಲ. ಈ ಕುರಿತು ಮಹಾಗಾಂವ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

