ಚಿತ್ರ: ಕೆನ್ 1, ಕೆನ್ 2
ನಗರದ ಕೆನ್ ಬ್ರಿಡ್ಜ್ ಶಾಲೆಯ 15ನೇ ವಾರ್ಷಿಕೋತ್ಸವದಲ್ಲಿವಿದ್ಯಾರ್ಥಿಗಳು ಸಾಂಸ್ಕೃತಿಕ ನೃತ್ಯ ಪ್ರದರ್ಶನ ಮಾಡಿದರು.
**
* ‘ದಕ್ಷಿಣೋತ್ಸವ - ಸೆಲೆಬ್ರೇಟಿಂಗ್ ಸೌತ್ ಸೂಪರ್ ಸ್ಟಾರ್ಸ್ ’ ಶೀರ್ಷಿಕೆಯಡಿ ಆಚರಣೆ
ಕೆನ್ ಬ್ರಿಡ್ಜ್ ಶಾಲೆಯ 15ನೇ ವಾರ್ಷಿಕೋತ್ಸವ
ಚಿಕ ಸುದ್ದಿಲೋಕ ಕಲಬುರಗಿ
ನಗರದ ಕೆನ್ ಬ್ರಿಡ್ಜ್ ಶಾಲೆಯ 15ನೇ ವಾರ್ಷಿಕೋತ್ಸವವನ್ನು ಈ ಬಾರಿ ‘ದಕ್ಷಿಣೋತ್ಸವ - ಸೆಲೆಬ್ರೇಟಿಂಗ್ ಸೌತ್ ಸೂಪರ್ ಸ್ಟಾರ್ಸ್ ಎಂಬ ಶೀರ್ಷಿಕೆಯಡಿ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಶಾಲೆಯ ವಿದ್ಯಾರ್ಥಿಗಳು ನೃತ್ಯ ಮತ್ತು ನಾಟಕಗಳ ಮೂಲಕ ದಕ್ಷಿಣ ಭಾರತ ಮೇರು ನಟ ಡಾ.ರಾಜಕುಮಾರ ಮತ್ತು ಅವರ ಕುಟುಂಬ, ಡಾ.ವಿಷ್ಣುವರ್ಧನ್ , ಅಂಬರೀಶ್ , ರವಿಚಂದ್ರನ್ , ಯಶ್ , ಸುದೀಪ್ , ಉಪೇಂದ್ರ, ರಜನಿಕಾಂತ್ , ವಿಜಯ…, ಪ್ರಭಾಸ್ ಮತ್ತು ಅಲ್ಲುಅರ್ಜುನ್ ಸೇರಿ ಹಲವು ಖ್ಯಾತ ನಟರನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವೇದಿಕೆಯ ಮೇಲೆ ಮರುಸೃಷ್ಟಿ ಮಾಡುವ ಮೂಲಕ ಗಮನ ಸೆಳೆದರು.
ಇದರ ಜತೆಗೆ ಸಿನಿಮಾ ತಾರೆಯರ ಜತೆ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಸಾಧಕರಾದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಸಾಲು ಮರದ ತಿಮ್ಮಕ್ಕ, ನಾರಾಯಣ ಮೂರ್ತಿ, ಸುಧಾ ಮೂರ್ತಿ, ಅನಿಲ್ ಕುಂಬ್ಳೆ, ಪಿ.ಟಿ.ಉಷಾ, ಪಿ.ವಿ.ಸಿಂಧು, ಎ.ಆರ್ .ರೆಹಮಾನ್ ಮತ್ತು ವಿಶ್ವನಾಥನ್ ಆನಂದ್ ಅವರ ಜೀವನ ಸಾಧನೆಗಳನ್ನು ತಿಳಿಸಲಾಯಿತು.
ಹೈದರಾಬಾದ್ ನ ಡಿಆರ್ ಡಿಎಲ್ ನ ಹಿರಿಯ ವಿಜ್ಞಾನಿ ಡಾ.ಪಿ.ಮಸ್ತಾನಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಆಚರಣೆಗಳೊಂದಿಗೆ ಮಾಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಕೆನ್ ಬ್ರಿಡ್ಜ್ ಶಾಲೆಯ ಪ್ರಯತ್ನ ಅತ್ಯಂತ ಶ್ಲಾಘನೀಯವಾದದ್ದು ಎಂದು ಹೇಳಿದರು.
ಶಾಲೆಯ ಪ್ರಾಚಾರ್ಯ ನೀತಾ ಪುರೋಹಿತ್ , ಟ್ರಸ್ಟಿ ಡಾ.ನಾಗನಾಥ ಗಚ್ಚಿನಮನಿ, ಶಾಲೆಯ ನಿರ್ದೇಶಕ ನೌಶಾದ್ ಎನ್ .ಇರಾನಿ ಸೇರಿ ಹಲವರು ಗಣ್ಯರು, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.

