ವಿಕ ಸುದ್ದಿಲೋಕ ಗಾವಡಗೆರೆ(ಮೈಸೂರು)ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಜಾಬಗೆರೆ ಗ್ರಾಮದ ಶ್ರೀ ಜಾಬೇಶ್ವರ ಸ್ವಾಮಿಯ ಬಸವ ಬುಧವಾರ ಸಂಜೆ ಮೃತಪಟ್ಟಿದ್ದು, ಗುರುವಾರ ಗ್ರಾಮದಲ್ಲಿಶಾಸ್ತೊ್ರೕಕ್ತವಾಗಿ ಮೆರವಣಿಗೆ ಮಾಡುವ ಮೂಲಕ ಅಂತ್ಯಸಂಸ್ಕಾರ ನೇರವೇರಿಸಲಾಯಿತು.
ಕಳೆದ 22 ವರ್ಷಗಳಿಂದ ದೇವರ ಬಸವ ಇತ್ತು. ಗ್ರಾಮದಲ್ಲಿಎಲ್ಲಜಾತಿ, ಸಮುದಾಯಗಳ ನೆಚ್ಚಿನ ಬಸವನಾಗಿದ್ದು, ಸಾಧು ಸ್ವಭಾವದಿಂದ ಗ್ರಾಮದವರ ಪ್ರೀತಿಗೆ ಪಾತ್ರವಾಗಿತ್ತು. ವಯೋಸಹಜವಾಗಿ ಬುಧವಾರ ಸಂಜೆ ಬಸವ ಮೃತಪಟ್ಟಿತು.
ಗುರುವಾರ ಬೆಳಗ್ಗೆ ಹೂವಿನಿಂದ ಅಲಂಕೃತಗೊಂಡ ಟ್ರ್ಯಾಕ್ಟರ್ ಮೇಲೆ ಬಸವನ ಮೃತದೇಹವನ್ನು ಇರಿಸಿ ಮಂಗಳವಾದ್ಯ, ತಮಟೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿಮೆರವಣಿಗೆ ಮಾಡಲಾಯಿತು. ಗ್ರಾಮಸ್ಥರು ಬಸವನಿಗೆ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಮೆರೆದರು.
ಮೆರವಣಿಗೆ ನಂತರ ದೇವರಿಗೆಂದೇ ಮೀಸಲಿರಿಸಿರುವ 3 ಎಕರೆ ಜಾಗದಲ್ಲಿವಿಧಿ ವಿಧಾನಗಳ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಫೋಟೊ ಉಗಿಉ-1
ಜಾಬಗೆರೆ ಗ್ರಾಮದ ಶ್ರೀ ಜಾಬೇಶ್ವರ ದೇವರ ಬಸವ.
ಉಗಿಉ 02:
ಜಾಬಗೆರೆ ಗ್ರಾಮದಲ್ಲಿಶ್ರೀ ಜಾಬೇಶ್ವರ ದೇವರ ಬಸವನ ಅಂತ್ಯಸಂಸ್ಕಾರದ ಮೆರವಣಿಗೆ ನಡೆಯಿತು.