ಶಿಲ್ಪ ಸ್ವಾರಸ್ಯ1

Contributed byShridevi Ambekallu|Vijaya Karnataka
gajsura sahra mrti sculpture aesthetics
ಗಜಾಸುರ ಸಂಹಾರ ಮೂರ್ತಿ

-----------
ಶಂಕರ ಅಜ್ಜಂಪುರ

---

ಸಾಧಾರಣವಾಗಿ ದೇವಾಲಯಗಳ ಹೊರಭಿತ್ತಿಯಲ್ಲಿಕಾಣಿಸುವ ದೇವ-ದೇವಿಯರ ವಿಗ್ರಹಗಳನ್ನು ಲೀಲಾಮೂರ್ತಿಗಳೆಂದು ಹೆಸರಿಸುವುದು ವಾಡಿಕೆ. ಏಕೆಂದರೆ ದೇವ-ದೇವಿಯರು ಯಾವುದಾದರೊಂದು ಉದ್ದೇಶಕ್ಕಾಗಿ ಕೈಗೊಂಡ ಅವತಾರಗಳು, ಶಿಷ್ಟ ರಕ್ಷಣಾ ಕ್ರಿಯೆಗಳನ್ನು ಪುರಾಣಗಳಲ್ಲಿಉಲ್ಲೇಖಿಸಿರುವಂತೆ, ಅವುಗಳನ್ನು ಶಿಲ್ಪರೂಪದಲ್ಲಿತೋರಿಸಲಾಗಿರುತ್ತದೆ.

ಅಂಥದೇ ಒಂದು ಶಿವನ ಜನಪ್ರಿಯ ಶಿಲ್ಪವೆಂದರೆ ಗಜಾಸುರ ಸಂಹಾರ ಮೂರ್ತಿ. ಶಿಲ್ಪಿಯ ಕಲ್ಪನೆಗಳು ಈ ಕಥಾನಕವನ್ನು ಸಾಕಾರಗೊಳಿಸಿರುವ ಅನೇಕ ರೂಪಗಳನ್ನು ಈ ಕೆಳಗಿನ ಚಿತ್ರಗಳಲ್ಲಿವೈವಿಧ್ಯಮಯವಾಗಿ ತೋರಿಸಲಾಗಿದೆ. ಬೇಲೂರು ಮತ್ತು ಹಳೇಬೀಡುಗಳಲ್ಲಿಗಜಾಸುರ ಸಂಹಾರ ಮೂರ್ತಿಯ ಶಿಲ್ಪಗಳಿವೆ. ದೇಶದ ಇತರ ಭಾಗಗಳಲ್ಲೂಇಂಥ ಶಿಲ್ಪಗಳಿವೆ.

ಗಜಾಸುರ ಸಂಹಾರಕ್ಕೆ ಕಾರಣವಾದ ಪ್ರಸಂಗವು ಈ ರೀತಿಯಿದೆ. ಈ ಪ್ರಸಂಗವು ತಮಿಳುನಾಡಿನ ವಳವೂರು ಎಂಬಲ್ಲಿನಡೆಯಿತೆಂದು ಭಾವಿಸಲಾಗಿದೆ.

ಒಮ್ಮೆ ದಾರುಕಾವನದಲ್ಲಿತಪೋನಿರತರಾಗಿದ್ದ ಮುನಿಗಳಿಗೆ, ಶಿವನ ಸ್ವಯಂಪ್ರಕಾಶತ್ವವನ್ನು ತಿಳಿಯುವ ಅಪೇಕ್ಷೆಯಾಯಿತು. ಅವರಿಗೆ ತಿಳಿವಳಿಕೆ ಬರಲೆಂದು ಶಿವನು ಭಿಕ್ಷಾಟನಮೂರ್ತಿಯಾಗಿಯೂ, ವಿಷ್ಣುವು ಮೋಹಿನಿಯ ರೂಪವನ್ನೂ ಧರಿಸಿದರು. ಮುನಿಗಳು ಮೋಹಿನಿಯ ಮೂರ್ತಿಗೆ ಆಕರ್ಷಿತರಾದರೆ, ಮುನಿಪತ್ನಿಯರು ಭಿಕ್ಷಾಟನ ಮೂರ್ತಿಯನ್ನು ಮೆಚ್ಚಿದರು.ಹಾಗಿದ್ದೂ ಅದನ್ನು ಅವರು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಅನೇಕ ಹೋಮ-ಹವನಗಳ ಮೂಲಕ, ವಿವಿಧ ಕ್ರೂರಪ್ರಾಣಿಗಳನ್ನು ಸೃಷ್ಟಿಸಿ, ಶಿವನನ್ನು ಕೊಲ್ಲುವ ನಿರರ್ಥಕ ತಂತ್ರವನ್ನು ಮಾಡಿದರು. ಕೊನೆಗೆ ದೊಡ್ಡ ಆನೆಯೊಂದನ್ನು ಸೃಷ್ಟಿಸಿ ಶಿವನ ಮೇಲೆ ಎರಗುವಂತೆ ಮಾಡಿದರು.

ಶಿವನು ಸೂಕ್ಷ ್ಮ ಶರೀರಿಯಾಗಿ ಆ ಆನೆಯ ಶರೀರವನ್ನು ಪ್ರವೇಶಿಸಿ, ನಂತರ ಅಲ್ಲೇ ಬೃಹದಾಕಾರವಾಗಿ ಬೆಳೆದು, ಆನೆಯನ್ನು ಛೇದಿಸಿದನು.

ಈ ದೃಶ್ಯವನ್ನು 10ನೇ ಶತಮಾನದ, ರಾಜ ರಾಜ ಚೋಳನ ಕಾಲದ ಕಂಚಿನ ವಿಗ್ರಹದಲ್ಲಿಸುಂದರವಾಗಿ ಪಡಿಮೂಡಿಸಲಾಗಿದೆ. ಇದು ಆಗಮ ಮತ್ತು ಶಿಲ್ಪ ಶಾಸ್ತ್ರಗಳಿಗಿಂತ ಕೊಂಚ ಭಿನ್ನವಾಗಿರಬಹುದು.

ಶಿವನ ಐದು ರೂಪಗಳಲ್ಲಿಕೊನೆಯದಾಗ ಅಘೋರ ರೂಪವೂ ಮತ್ತೆ ಐದು ರೂಪಗಳನ್ನು ಹೊಂದಿದೆ. ಅದರಲ್ಲಿಒಂದು ಈ ಗಜಾಸುರ ಸಂಹಾರಮೂರ್ತಿ. ಈತನನ್ನೇ ಪಿನಾಕೀ, ಕೃತ್ತಿವಾಸ ಎಂದು ಹೇಳಲಾಗಿದೆ. ಇದನ್ನೇ ಮಾತಂಗಾರಿ (ಮಾತಂಗ-ಆನೆ, ಅರಿ-ಶತ್ರು) ಎಂದೂ ಹೇಳುವರು.

ಶಿಲ್ಪದಲ್ಲಿಈ ರೂಪವು ಮೂಡಿಬಂದಿರುವ ಪರಿಗಳು ವಿಭಿನ್ನವಾಗಿವೆ. ಶಿವನ ಹಿಂದೆ ಆನೆಯ ಚರ್ಮವು ಪ್ರಭಾವಳಿಯಂತೆ ತೋರಿಸಲಾಗಿದ್ದರೆ, ಬಾಲವು ಆತನ ತಲೆಯ ಮೇಲೆ ಜುಟ್ಟಿನಂತೆ ಕಾಣುತ್ತದೆ. ಶಿವನು ಇಲ್ಲಿನರ್ತನ ಭಂಗಿಯಲ್ಲಿದ್ದು ನಾಲ್ಕು, ಎಂಟು ಹಾಗೂ ಹತ್ತು ತೋಳುಗಳನ್ನು ಹೊಂದಿರುವ ವಿಗ್ರಹಗಳಿವೆ. ನಾಲ್ಕು ತೋಳಿನ ವಿಗ್ರಹದಲ್ಲಿಆತನ ಕೈಗಳಲ್ಲಿಪಾಶ, ಆನೆಯ ಮುರಿದ ದಂತಗಳಿದ್ದರೆ, ಉಳಿದೆರಡು ಕೈಗಳಲ್ಲಿಆನೆಯ ಚರ್ಮವನ್ನು ಎತ್ತಿ ಹಿಡಿದಿರುವಂತೆ ಇರುತ್ತದೆ. ಎಂಟು, ಹತ್ತು ಕೈಗಳ ಮೂರ್ತಿಗಳಲ್ಲಿವಿವಿಧ ಆಯುಧಗಳಿದ್ದರೂ, ಎರಡು ಕೈಗಳು ಆನೆಯ ಚರ್ಮವನ್ನು ಎತ್ತಿ ಹಿಡಿದಿರುವಂತೆ ತೋರಿಸಲಾಗಿರುತ್ತದೆ.