ಪ್ರತಿದಿನ ಕಚೇರಿ ಕೆಲಸಕ್ಕೆ ಹೋಗುವ ಮಹಿಳೆಯರು ತಮ್ಮ ತ್ವಚೆ, ಕೂದಲಿನ ಆರೈಕೆಯನ್ನೂ ಸಮರ್ಪಕವಾಗಿ ಮಾಡಬೇಕು. ಕೆಲಸದ ಧಾವಂತದಲ್ಲಿಸ್ವ ಕಾಳಜಿಯನ್ನು ನಿರ್ಲಕ್ಷಿಸಬಾರದು. ಈ ವಿಷಯದಲ್ಲಿಈಗ ಮಹಿಳೆಯರಿಗೆ ಕೊರಿಯನ್ ಬ್ಯೂಟಿ ಸೂತ್ರ ಪರಿಣಾಮಕಾರಿಯಾಗಿದೆ.-ಪ್ರತಿದಿನ ಮುಖಕ್ಕೆ ಡಬಲ್ ಕ್ಲೆನ್ಸಿಂಗ್ ಮಾಡಿ. ಮೊದಲಿಗೆ ಎಣ್ಣೆ ಅಂಶವಿರುವ ಕ್ಲೆನ್ಸರ್ ನಿಂದ ಮುಖ ಸ್ವಚ್ಛಗೊಳಿಸಿ. ಇದರಿಂದ ಅಳಿದುಳಿದ ಮೇಕಪ್ , ಸನ್ ಸ್ಕ್ರೀನ್ ನಿವಾರಣೆಯಾಗುತ್ತದೆ. ನಂತರ ನೀರಿನಂಶವಿರುವ ಕ್ಲೆನ್ಸರ್ ಬಳಸಿ. ಇದು ಮುಖದಲ್ಲಿಮುಚ್ಚಿಕೊಂಡಿರುವ ರಂಧ್ರಗಳನ್ನೆಲ್ಲಾಸ್ವಚ್ಛಗೊಳಿಸುತ್ತದೆ.
-ಪ್ರತಿದಿನ ತ್ವಚೆಯನ್ನು ಲಘುವಾಗಿ ಎಕ್ಸ್ ಫಾಲಿಯೇಟ್ ಮಾಡುತ್ತಿರಿ. ಇದು ಚರ್ಮದ ನಿರ್ಜೀವ ಕೋಶಗಳನ್ನು ಹೋಗಲಾಡಿಸಿ ತ್ವಚೆಗೆ ಕಾಂತಿ ಕೊಡುತ್ತದೆ. ಇದಕ್ಕಾಗಿ ಸೌಮ್ಯವಾಗಿರುವ ಎಕ್ಸ್ ಫಾಲಿಯೆಟ್ ಗಳನ್ನು ಬಳಸಿ.
-ಚರ್ಮ ಮೃದು ಮತ್ತು ಫ್ರೆಶ್ ಆಗಿ ಕಾಣಲು ನೀರಿನಂಶವಿರುವ ಟೋನರ್ ಮತ್ತು ಮಾಯಿಶ್ಚರೈಸರ್ ಉಪಯೋಗಿಸಿ. ಹೆಚ್ಚಿನ ಮಾಯಿಶ್ಚರ್ ಗಾಗಿ ಶೀಟ್ ಮಾಸ್ಕ್ ಅಥವಾ ಸ್ಲೀಪಿಂಗ್ ಪ್ಯಾಕ್ ಗಳನ್ನು ಬಳಸಿ.
-ಕಣ್ಣಿನ ಕೆಳಗಿನ ಕಪ್ಪು ವೃತ್ತ, ಊತ, ಸುಕ್ಕುಗಳನ್ನು ನಿವಾರಿಸಲು ಸೌಮ್ಯವಾದ ಐ ಕ್ರೀಮ್ ಹಚ್ಚಿ. ಇದನ್ನು ನಿಮ್ಮ ಉಂಗುರ ಬೆರಳಿನಿಂದಲೇ ಲೇಪಿಸಿ.
-ಬ್ಯೂಟಿ ಸ್ಲೀಪ್ ಗೆ ಆದ್ಯತೆ ಕೊಡಿ. ಅಂದರೆ ಚೆನ್ನಾಗಿ ನಿದ್ದೆ ಮಾಡುವ ಮೂಲಕ ಆರೋಗ್ಯಕರ ಮತ್ತು ಕಾಂತಿಯುಕ್ತ ತ್ವಚೆ ಪಡೆಯಿರಿ. ಇದಕ್ಕಾಗಿ ಪ್ರತಿದಿನ ರಾತ್ರಿ 7ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಿ.