ಪ್ರೇಮವು ವ್ಯಕ್ತವಾದಾಗ ಅದು ಸೇವೆಯಾಗಿ ಮಾರ್ಪಡುತ್ತದೆ. ಸೇವೆಯನ್ನು ಸತ್ಯ ಮತ್ತು ನಿಸ್ವಾರ್ಥ ಮನೋಭಾವದಿಂದ ಮಾಡಿದಾಗ ಅದು ಪುನಃ ಪ್ರೇಮವಾಗಿ ಪರಿವರ್ತನೆಯಾಗುತ್ತದೆ. ಪ್ರೇಮ ಮತ್ತು ಸೇವೆ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರೇಮದಿಂದ ಕೂಡಿದವರು ಸೇವೆ ಮಾಡದೆ ಇರಲಾರರು ಮತ್ತು ಸೇವೆಯು ಯಾವಾಗಲೂ ಪ್ರೇಮಪೂರ್ಣವಾಗಿರುತ್ತದೆ. ಎಲ್ಲರನ್ನೂ ಪ್ರೀತಿಸಿ, ಎಲ್ಲರ ಸೇವೆ ಮಾಡಿ.- ಶ್ರೀ ಸತ್ಯಸಾಯಿ ಬಾಬಾ ಪುಟ್ಟಪರ್ತಿ
----
ಶ್ರೀ ಸತ್ಯ ಸಾಯಿ ಬಾಬಾ ಪ್ರೇರಣೆ
ಆಧ್ಯಾತ್ಮಿಕ ಗುರು ಮತ್ತು ಮಹಾ ಮಾನವತಾವಾದಿ ಶ್ರೀ ಸತ್ಯ ಸಾಯಿ ಬಾಬಾರವರು ಸಾರ್ವತ್ರಿಕ ಪ್ರೇಮ , ಸೇವೆ ಮತ್ತು ಸರ್ವಧರ್ಮಗಳ ಏಕತೆಯ ತತ್ತ್ವಗಳನ್ನು ಸಾರಿದರು. ‘ಎಲ್ಲರನ್ನೂ ಪ್ರೀತಿಸು, ಎಲ್ಲರ ಸೇವೆ ಮಾಡು’ ಎಂಬ ಅವರ ಅಮರ ಬೋಧನೆಯ ಮೂಲಕ ಅಸಂಖ್ಯಾತ ಜನರನ್ನು ನಿಸ್ವಾರ್ಥ ಸೇವೆಯತ್ತ ಪ್ರೇರೇಪಿಸಿದರು. ಅವರ ಸಾಧನೆ ಬಣ್ಣಿಸಲಸಾಧ್ಯ. ಕೋಟಿಗಟ್ಟಲೆ ಜನರ ಜೀವನವನ್ನು ಅವರು ಹಸನುಗೊಳಿಸಿದರು. ಅದ್ಭುತ ಉಚಿತ ವಿದ್ಯಾಸಂಸ್ಥೆಗಳು, ಅತ್ಯುತ್ತಮ ಆಸ್ಪತ್ರೆಗಳು ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ ಮೂಲಕ “ಮಾನವ ಸೇವೆಯೇ ದೇವರ ಸೇವೆ‘ ಎಂಬ ಸಂದೇಶವನ್ನು ಸಾರಿದರು. ಬಾಬಾರವರು ಹಾಕಿಕೊಟ್ಟ ಈ ಪವಿತ್ರ ಮಾರ್ಗವನ್ನು ಅನುಸರಿಸುತ್ತಾ, ಶ್ರೀ ಮಧುಸೂದನ ಸಾಯಿಯವರು, ಬಾಬಾರವರ ಪ್ರೇಮ ಮತ್ತು ಸೇವೆಯ ಮಿಷನ್ ಅನ್ನು ಇಡೀ ಜಗತ್ತಿನಾದ್ಯಂತ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.