ದಶಾವತಾರದಲ್ಲಿಮತ್ಸ ್ಯ, ಕೂರ್ಮ, ವರಾಹ ಅವತಾರಗಳು ಪ್ರಾಣಿಗಳ ರೂಪದಲ್ಲಿದ್ದರೆ, ನರಸಿಂಹನ ಅವತಾರವು ಮನುಷ್ಯ ಮತ್ತು ಪ್ರಾಣಿಗಳ ಸಂಕೀರ್ಣ ರೂಪ. ವರಾಹ ಮತ್ತು ನರಸಿಂಹರ ಅವತಾರಗಳು ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಇವರ ಸಂಹಾರಕ್ಕೆಂದೇ ತಳೆದವು.
ಶಿಲ್ಪ ರೂಪದಲ್ಲಿನರಸಿಂಹನು ಹಿರಣ್ಯಕಶಿಪುವನ್ನು ವಧಿಸುತ್ತಿರುವ ಹಲವು ಶೈಲಿಯ ಶಿಲ್ಪಗಳು ಕಾಣಿಸುತ್ತವೆ. ಆದರೆ ಹಿರಣ್ಯಾಕ್ಷನನ್ನು ಕೊಂದಿರುವ ಶಿಲ್ಪರೂಪ ತೀರಾ ಅಪರೂಪದ್ದೆನ್ನಬಹುದು. ವರಾಹ ಅವತಾರದಲ್ಲಿವಿಷ್ಣುವು ಭೂದೇವಿಯನ್ನು ರಕ್ಷಿಸಿ ತನ್ನ ತೋಳಿನ ಮೇಲೆ ಕೂಡಿಸಿಕೊಂಡಿರುವ ಭಂಗಿಯ ಶಿಲ್ಪಗಳು ಸಾಧಾರಣವೆನ್ನುವಂತೆ ನೋಡಬಹುದು.
ಇಲ್ಲೊಂದು ಅಪರೂಪದ ಶಿಲ್ಪವಿದೆ. ಇದರಲ್ಲಿವರಾಹ ಅವತಾರದ ವಿಷ್ಣುವು ಆಲೀಢ ಭಂಗಿಯಲ್ಲಿನಿಂತು, ಹಿರಣ್ಯಾಕ್ಷನನ್ನು ಎತ್ತಿ ಹಿಡಿದಿದ್ದಾನೆ.ಬಲಗೈಯಲ್ಲಿಹಿರಣ್ಯಾಕ್ಷನ ಕಾಲುಗಳನ್ನು ಕಾಲುಗಳನ್ನು ಗಟ್ಟಿಯಾಗಿ ಹಿಡಿದು, ಎಡಗೈಯಲ್ಲಿಮುಡಿಯನ್ನು ಹಿಡಿದಿದ್ದಾನೆ. ತನ್ನ ಕೋರೆದಾಡೆಯಿಂದ ದಾನವನ ಹೊಟ್ಟೆಯನ್ನು ಬಗೆಯುತ್ತಿದ್ದಾನೆ. ಹಿರಣ್ಯಾಕ್ಷನ ಈ ಭಂಗಿಯ ಶಿಲ್ಪವು ಇಡೀ ದೇಶದಲ್ಲಿಇದೊಂದೇ ಇರಬಹುದೆಂದು ತಜ್ಞರು ಊಹಿಸಿದ್ದಾರೆ. ಇದು ಆಂಧ್ರಪ್ರದೇಶದ ತಾಡಪತ್ರಿ ದೇವಾಲಯದಲ್ಲಿಕಂಬದ ಮೇಲೆ ಚಿತ್ರಿತವಾಗಿದೆ. ಮೂಲ ಚಿತ್ರವು ಸ್ವಲ್ಪ ಅಸ್ಪಷ್ಟವಾಗಿರುವುದರಿಂದ, ಹಿರಣ್ಯಾಕ್ಷನ ಭಾಗವನ್ನು ಕೆಂಪು ಬಣ್ಣದಲ್ಲಿಸುತ್ತುವರೆದು ತೋರಿಸಲಾಗಿದೆ.