ಎಸ್ ಐಆರ್ … ಮಹಾ ಸಂಪರ್ಕ ಅಭಿಯಾನವು ಜು. 25, 26ರಂದು ಜಿಲ್ಲೆಯಾದ್ಯಂತ ಸಂಘಟಿತ ಯತ್ನದ ಮೂಲಕ ಯಶಸ್ವಿಗೊಳಿಸುವಂತೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದ್ದಾರೆ.ಅವರು ಕುಂಜಿಬೆಟ್ಟಿನ ಬಿಜೆಪಿ ಜಿಲ್ಲಾಕಚೇರಿಯಲ್ಲಿಮಂಗಳವಾರ ನಡೆದ ಜಿಲ್ಲಾಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್ ಐಆರ್ ಮಹಾ ಸಂಪರ್ಕ ಅಭಿಯಾನ’ದ ಎರಡೂ ದಿನಗಳಲ್ಲಿಪಕ್ಷದ ಪ್ರಮುಖರು, ಎಲ್ಲಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಮನೆ ಮನೆ ಭೇಟಿ ಮೂಲಕ ಎಸ್ ಐಆರ್ ಪ್ರಕ್ರಿಯೆಗೆ ವೇಗ ನೀಡಬೇಕು. ಜು.26ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದ ನೇರ ಪ್ರಸಾರವನ್ನು ಜಿಲ್ಲೆಯ ಎಲ್ಲ1,112 ಬೂತ್ ಗಳಲ್ಲಿವೀಕ್ಷಿಸಿ, ವಿವರವನ್ನು ಸರಲ್ ಆಪ್ ನಲ್ಲಿಅಪ್ಲೋಡ್ ಮಾಡಿ ಉಡುಪಿ ಜಿಲ್ಲೆಶೇ. 100 ಸಾಧನೆ ದಾಖಲಿಸುವಂತೆ ಬದ್ಧತೆಯಿಂದ ಕೈಜೋಡಿಸಬೇಕು ಎಂದರು.
ಬಿಜೆಪಿ ಜಿಲ್ಲಾಕಚೇರಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ವರ್ಷಾಂತ್ಯದಲ್ಲಿಪೂರ್ಣಗೊಳ್ಳಲಿದೆ. ರಾಜ್ಯ ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿ ವಿರುದ್ಧ ಕರಾವಳಿಯಾದ್ಯಂತ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಲಾಗುವುದು ಎಂದರು.
ಜಿಲ್ಲಾಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಪಕ್ಷದ ಸಂಘಟನಾತ್ಮಕ ವಿಚಾರಗಳ ಕುರಿತು ಮಾಹಿತಿ ನೀಡಿದರು. ಬಿಜೆಪಿ ಜಿಲ್ಲಾಕಾರ್ಯದರ್ಶಿ ಅನಿತಾ ಶ್ರೀಧರ್ ಗೀತೆ ಹಾಡಿದರು. ಜಿಲ್ಲಾಪ್ರಧಾನ ಕಾರ್ಯದರ್ಶಿಗಳಾದ ರೇಶ್ಮಾ ಉದಯ ಶೆಟ್ಟಿ ಸ್ವಾಗತಿಸಿದರು. ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.