ದಿನಕ್ಕೆ 10 ಮನೆಗೆ 10 ನಿಮಿಷ ಭೇಟಿ

Contributed byKeerthi Prasad|Vijaya Karnataka
bjp maha sampark abhiyan plan for 10 minute visits to 10 houses daily
ಬೆಂಗಳೂರು: ರಾಜ್ಯದಲ್ಲಿಎಸ್ ಐಆರ್ ನಡೆದಿರುವ ಹಿನ್ನೆಲೆಯಲ್ಲಿಬಿಜೆಪಿಯು ಇದೇ 25 ಮತ್ತು 26ರಂದು ಎಸ್ ಐಆರ್ ಮಹಾ ಸಂಪರ್ಕ ಅಭಿಯಾನ ನಡೆಸಲು ಮುಂದಾಗಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿಬುಧವಾರ ಈ ಸಂಬಂಧ ಲೋಗೋ ಪೋಸ್ಟರ್ ಬಿಡುಗಡೆ ಮಾಡ ಲಾಯಿತು. ಈ ವೇಳೆ ಮಾತನಾಡಿದ ಎಸ್ ಐಆರ್ ಮಹಾ ಅಭಿಯಾನದ ಸಂಚಾಲಕ ಎಸ್ . ದತ್ತಾತ್ರಿ, ‘‘ಮಹಾ ಅಭಿಯಾನಧಿದಡಿ ಪ್ರತಿಯೊಬ್ಬ ಪ್ರಮುಖ ಕಾರ್ಯ ಕರ್ತರಿಗೂ 20 ಮನೆಗಳಿಗೆ ಭೇಟಿ ನೀಡುವ ಗುರಿ ನೀಡಲಾಗಿದೆ,’’ ಎಂದು ಹೇಳಿದರು. ‘‘ದಿನಕ್ಕೆ 10 ಮನೆಯಂತೆ ಭೇಟಿ ಮಾಡಿ, 5-10 ನಿಮಿಷ ಮಾತುಕತೆ ನಡೆಸಿ ವಿವರ ನೀಡುವಂತೆ ತಿಳಿಸಧಿಲಾಗಿದ್ದು. ಇದಕ್ಕಾಗಿ ಮ್ಯಾಪಿಂಗ್ ಕಾರ್ಯ ನಡೆದಿದೆ. ಪಕ್ಷದ ಎಲ್ಲಪ್ರಮುಖರು, ಕಾರ್ಯಕರ್ತರಿಗೆ ಎಸ್ ಐಆರ್ ಕುರಿತಂತೆ 6 ತಿಂಗಳಿನಿಂದ ತರಬೇತಿ ಕೊಡಲಾಗಿದೆ. ಇದಲ್ಲದೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರನ್ನು ಪ್ರಭಾರಿಯಾಗಿ ನೇಮಿಸಿ, ಅವರು ಎಸ್ ಐಆರ್ ಚಟುವಟಿಕೆ ನೋಡಿಕೊಳ್ಳುಧಿವಂತೆ ಸೂಚಿಸಲಾಗಿದೆ,’’ ಎಂದರು.