ದಂತ ವಿಜ್ಞಾನ ಶಿಕ್ಷಣ ಕಾರ್ಯಾಗಾರ | ಡಾ.ವೆಂಕಟೇಶ ಆನೆಹೊಸೂರ ಹೇಳಿಕೆ
ಯುವ ವೈದ್ಯರಿಗೆ ತರಬೇತಿ ಅಗತ್ಯವಿಕ ಸುದ್ದಿಲೋಕ ಬಾಗಲಕೋಟೆ
‘‘ತಂತ್ರಜ್ಞಾನದ ಪರಿಣಾಮ ಇಂದಿನ ದಿನಗಳಲ್ಲಿದಂತ ವಿಜ್ಞಾನದ ಅಧ್ಯಯನಕ್ಕೆ ಅಗತ್ಯ ಮಾಹಿತಿ ಲಭ್ಯವಾಗುತ್ತಿದೆ. ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ದಂತ ವೈದ್ಯಕೀಯ ಕ್ಷೇತ್ರದಲ್ಲಿಪರಿಣತಿ ಸಾಧಿಸಲು ಸಾಧ್ಯವಿದೆ,’’ ಎಂದು ಎಸ್ ಡಿಎಂ ಡೆಂಟಲ್ ಕಾಲೇಜ್ ಪ್ರಾಧ್ಯಾಪಕ ಡಾ.ವೆಂಕಟೇಶ ಆನೆಹೊಸೂರ ಹೇಳಿದರು.
ಬವಿವ ಸಂಘದ ಪಿ.ಎಂ.ನಾಡಗೌಡ ಮೆಮೋರಿಯಲ್ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಾ ವಿಭಾಗ ಮತ್ತು ಭಾರತೀಯ ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಾ ತಜ್ಞರ ಸಂಘದ ಸಹಯೋಗದಲ್ಲಿಆಯೋಜಿಸಿದ್ದ ದಂತ ವಿಜ್ಞಾನ ಶಿಕ್ಷಣ ಕಾರ್ಯಾಗಾರದಲ್ಲಿಮಾತನಾಡಿದ ಅವರು, ‘‘ದಂತ ವೈದ್ಯಕೀಯ ಕಾರ್ಯಾಗಾರಗಳನ್ನು ರಾಜ್ಯಾದ್ಯಂತ ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ದಂತ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ದಂತ ವೈದ್ಯರಿಗೆ ಪರಿಣತಿ ಹೊಂದಲು ಪ್ರಯೋಜನವಾಗಲಿದೆ. ಕಾರ್ಯಾಗಾರಗಳ ಮೂಲಕ ಹೆಚ್ಚಿನ ಪರಿಣತಿ ಸಾಧಿಸಿ ರೋಗಿಗÜಳಿಗೆ ತೊಂದರೆಯಾಗದಂತೆ ಚಿಕಿತ್ಸೆ ನೀಡಿ,’’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ‘‘ಪಿಎಂಎನ್ ಎಂ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ರಾಜ್ಯದ ಪ್ರತಿಷ್ಠಿತ ಸಂಸ್ಥೆ ಎನ್ನುವ ಗೌರವಕ್ಕೆ ಪಾತ್ರವಾಗಿದೆ. ಕಾರ್ಯಾಗಾರದಲ್ಲಿನ ವಿಷಯ ಪರಿಣತರ ಚರ್ಚೆ ಮತ್ತು ಸಂವಾದಗಳಿಂದ ಹೊಸ ಅವಿಷ್ಕಾರಗಳು ದಂತ ವೈದ್ಯಕೀಯ ಕ್ಷೇತ್ರಕ್ಕೆ ಲಭ್ಯವಾಗಲಿ,’’ ಎಂದರು.
ಪ್ರಾಂಶುಪಾಲ ಡಾ.ರವಿರಾಜ ದೇಸಾಯಿ, ‘‘ದಂತ ವೈದ್ಯರಲ್ಲಿದಂತ ವಿಜ್ಞಾನದ ಹೊಸ ಅವಿಷ್ಕಾರಗಳ ಕುರಿತು ಚರ್ಚೆ ಮತ್ತು ಸಂವಾದ ನಡೆಸಲು ಕಾರ್ಯಾಗಾರಗಳು ಉಪಯುಕ್ತವಾಗಿವೆ. ವಿಶೇಷವಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಯುವ ವೈದ್ಯರಿಗೆ ಪ್ರಯೋಜನವಾಗಲಿದೆ,’’ ಎಂದು ಹೇಳಿದರು.
ಭಾರತೀಯ ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಾ ತಜ್ಞರ ಸಂಘದ ಕರ್ನಾಟಕ ಶಾಖೆಯ ವಿದ್ಯುನ್ಮಾನ ವಾರ್ತಾ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಪತ್ರಿಕೆ ಕುರಿತು ಸಂಪಾದಕಿ ಡಾ.ಮಮತಾ ಮಾತನಾಡಿದರು.
ತಜ್ಞರಾದ ಡಾ.ಸತ್ಯಜೀತ ದಂಡಗಿ ಮತ್ತು ಡಾ.ಮಮತಾ ಅವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು. ನಾನಾ ದಂತ ವೈದ್ಯಕೀಯ ಕಾಲೇಜುಗಳಿಂದ ಆಗಮಿಸಿದ್ದ ವಿಷಯ ಪರಿಣತರು ಉಪನ್ಯಾಸ ನೀಡಿದರು. ಮುಖ್ಯಸ್ಥೆ ಡಾ.ಸುಮಾ ಸರಾಫ, ಡಾ.ಆಶಾ ಬಡದೇಸಾಯಿ, ಡಾ.ಸೌಮ್ಯ ಸೂಳಿಭಾವಿ, ಡಾ.ಸೌಮ್ಯ ದೇಸಾಯಿ, ಡಾ.ಗಿರೀಶ ಚೌರ, ಡಾ.ಶ್ರದ್ಧಾ, ಡಾ.ಶ್ರೇಯಾ, ಡಾ.ಭೀಮಪ್ಪ, ಡಾ.ಗಂಗಾಧರ, ಡಾ.ಪಾರ್ವತಿ, ಡಾ.ವಿಶ್ವನಾಥ ಇತರರಿದ್ದರು.
ಡೆಂಟಲ್ -ಬಿಜಿಕೆ-21
ಬಾಗಲಕೋಟೆಯ ಪಿ.ಎಂ.ನಾಡಗೌಡ ಮೆಮೋರಿಯಲ್ ದಂತ ಮಹಾವಿದ್ಯಾಲಯದಲ್ಲಿದಂತ ವಿಜ್ಞಾನ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಲಾಯಿತು.