ವಿಕ ಸುದ್ದಿಲೋಕ ಚಿತ್ರದುರ್ಗ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಆವರಣದ ಮುಂಭಾಗದಲ್ಲಿಶುಕ್ರವಾರ ಬಣ್ಣ ಬಣ್ಣದ ರಂಗೋಲಿ ಚಿತ್ತಾರದಲ್ಲಿಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ ಐಆರ್ ) ಕುರಿತು ಜಾಗೃತಿ ಮೂಡಿಸಲಾ ಯಿತು. ಜಿಲ್ಲಾಡಳಿತ, ಜಿಲ್ಲಾಪಂಚಾ ಯಿತಿ, ಜಿಲ್ಲಾಸ್ವೀಪ್ ಸಮಿತಿ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026ರ ಕುರಿತು ಸಾರ್ವಜನಿಕರಲ್ಲಿಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿ ಸಿದ್ದ ಆಕರ್ಷಕ ರಂಗೋಲಿ ಸ್ಪರ್ಧೆಯಲ್ಲಿಎಸ್ ಐಆರ್ ಕುರಿತ ಜಾಗೃತಿ ಸಂದೇಶ ಗಳು ರಂಗೋಲಿ ಬಣ್ಣಗಳ ಮೂಲಕ ಮೂಡಿಬಂದವು. ಎಸ್ ಐಆರ್ ಜಾಗೃತಿ ಮೂಡಿಸುವ ನಿಟ್ಟಿನಲ್ಲಿಮಹಿಳೆಯರು ಬಿಡಿಸಿದ್ದ ಆಕ ರ್ಷಕ ರಂಗೋಲಿ ವೀಕ್ಷಿಸಿದ ಜಿಪಂ ಸಿಇಒ ಡಾ.ಎಸ್ .ಆಕಾಶ್ , ಸ್ಪರ್ಧೆಯಲ್ಲಿಭಾಗ ವಹಿಸಿದವರೆಲ್ಲರೂ ಆಕರ್ಷಕವಾಗಿ ಮತ್ತು ಅರ್ಥಪೂರ್ಣವಾಗಿ ರಂಗೋಲಿ ಬಿಡಿಸಿದ್ದೀರಿ. ನಿಮ್ಮೆಲ್ಲರ ಪ್ರಯತ್ನ ಮೆಚ್ಚುವಂತದ್ದು ಎಂದು ಶ್ಘಾಘಿಸಿದರು. ಇದೇ ವೇಳೆ ಸ್ಪರ್ಧೆಯಲ್ಲಿ ವಿಜೇತರಾದ ವರಿಗೆ ಬಹುಮಾನ ವಿತರಿಸಲಾಯಿತು.