ಸಹಕಾರ ಸಂಘ ಅಭಿವೃದ್ಧಿಯಿಂದ ರೈತರಿಗೆ ಅನುಕೂಲ

Contributed by: nallurmanjunath@gmail.com|Vijaya Karnataka•
cooperative society development key insights for farmers
ಸಹಕಾರ ಸಂಘ ಅಭಿವೃದ್ಧಿಯಿಂದ ರೈತರಿಗೆ ಅನುಕೂಲ

((5ನೇ ಹಣಕಾಸು ಆಯೋಗ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಹೇಳಿಕೆ))
ವಿಕ ಸುದ್ದಿಲೋಕ ಚನ್ನರಾಯಪಟ್ಟಣ

ಸಹಕಾರ ಸಂಘ ಅಭಿವೃದ್ಧಿಯಾದರೆ ರೈತರಿಗೆ ಅನುಕೂಲವಾಗಲಿದೆ ಎಂದು ರಾಜ್ಯದ 5ನೇ ಹಣಕಾಸು ಆಯೋಗ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಹೇಳಿದರು.

ದೇವನಹಳ್ಳಿ ತಾಲೂಕು ಚನ್ನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿಅವರು ಮಾತನಾಡಿದರು.

ಸಹಕಾರ ಸಂಘ ಎಂದು ರೈತರು ತಾತ್ಸರ ಮನೋಭಾವ ತೊರಬಾರದು. ಸಂಘದಲ್ಲಿವ್ಯವಹರಿಸಿದರೆ ಸಂಘವು ಅಭಿವೃದ್ಧಿಯಾಗುತ್ತದೆ. ರೈತರಿಗೆ ಅನುಕೂಲವಾಗುತ್ತದೆ. ಸುಮಾರು ವರ್ಷಗಳ ಹಿಂದೆ ಮಲೆನಾಡು ಕರಾವಳಿ ಪ್ರದೇಶಗಳಲ್ಲಿಸಹಕಾರ ಸಂಘದ ಅಭಿವೃದ್ಧಿಗೆ ಸರಕಾರ ಹೆಚ್ಚು ಒತ್ತು ನೀಡುತ್ತಿದೆ ಎಂದರು.

ಜಿಲ್ಲಾಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ ರಾಜಣ್ಣ ಮಾತನಾಡಿ, ಎಲ್ಲರ ಸಹಕಾರದಿಂದ ಸಂಘ ಉತ್ತಮವಾಗಿ ನಡೆಯುತ್ತಿದೆ. ರೈತರು ಸಂಘದಲ್ಲಿವ್ಯವಹರಿಸಬೇಕು ಎಂದು ಹೇಳಿದರು.

ಸಂಘದ ಅಧ್ಯಕ್ಷ ಸಿ ಜೆ ತಿಮ್ಮೇಗೌಡ ಮಾತನಾಡಿ, ಎಲ್ಲರ ಸಹಕಾರದಿಂದ ಸಂಘವು ಉತ್ತಮವಾಗಿ ಮುನ್ನಡೆಯುತ್ತಿದೆ ಎಂದರು. ಸಂಘದ ಉಪಾಧ್ಯಕ್ಷ ನರಸಿಂಹಯ್ಯ, ನಿರ್ದೇಶಕರಾದ ಎ.ಎಂ. ರಾಜಣ್ಣ, ಸಿ.ಎಂ. ಮುನಿಕೃಷ್ಣಪ್ಪ, ಬಿ. ನಾಗರಾಜ್ , ಟಿ.ಎ. ಶಿವರಾಮ, ಸಿ.ಎಂ. ಹನುಮಂತ, ಬಿ.ಎಂ. ನರಸಿಂಹಮೂರ್ತಿ, ವೆಂಕಟೇಶಪ್ಪ, ಮೂರ್ತಿ, ಶೋಭಾ, ಯಶೋಧ, ಸಿ ಪ್ರಕಾಶ್ , ಮುಖ್ಯ ಕಾರ್ಯನಿರ್ವಾಹಕ ಹೇಮಂತ್ , ಮತ್ತಿತತರು ಹಾಜರಿದ್ದರು.

ಚಿತ್ರ 25 ನಲ್ಲೂರು 2

ದೇವನಹಳ್ಳಿ ತಾಲೂಕು ಚನ್ನಹಳ್ಳಿ ವಿವಿಧೋದ್ದೇಶ ಪ್ರಾರ್ಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿರಾಜ್ಯ ಸರಕಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಬಿ ರಾಜಣ್ಣ ಮಾತನಾಡಿದರು.