* ನೀತಿ ಸಂಹಿತೆ ಕೊಕ್ಕೆಗೆ ಜನರ ಬೇಸರಖಾಜಾಹುಸೇನ್ ಲಿಂಗಸುಗೂರು
ಬಹು ನಿರೀಕ್ಷಿತ ಲಿಂಗಸುಗೂರು 100 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ ದಿನಾಂಕ ಸೆ.29ರಂದು ನಿಗದಿಯಾಗಿತ್ತು. ಆದರೆ, ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಲೋಕಾರ್ಪಣೆ ದಿನಾಂಕ ಮುಂದೂಡಲಾಗಿದೆ. ಇದರಿಂದ ಜನರಲ್ಲಿನಿರಾಸೆ, ಬೇಸರ ಮೂಡಿದೆ.
ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ಹೊರ ವಲಯದಲ್ಲಿ30 ರೂ.ವೆಚ್ಚದಲ್ಲಿನಿರ್ಮಾಣಗೊಂಡಿರುವ ಸುಸಜ್ಜಿತ ಆಸ್ಪತ್ರೆ ಕಟ್ಟಡ ಕಳೆದ ಒಂದು ವರ್ಷದಿಂದ ಲೋಕಾರ್ಪಣೆಗೆ ಅಣಿಯಾಗಿತ್ತು. ಇದಕ್ಕಾಗಿ ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ನಾನಾ ಸಂಘಟನೆಗಳು ಆಡಳಿತಕ್ಕೆ ಮನವಿ ಸಲ್ಲಿಸಿದ್ದವು. ಎಲ್ಲದರ ಪರಿಣಾಮ ಅಂತೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರಿಂದ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದರಿಂದ ಜನರಲ್ಲಿಸಂತಸ ಮನೆ ಮಾಡಿತ್ತು. ಕೊನೆ ಕ್ಷಣದ ಬದಲಾವಣೆ ಎನ್ನುವಂತೆ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಘೋಷಣೆಯಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಪರಿಣಾಮ ಉದ್ಘಾಟನೆ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಮೂಲಗಳು ದೃಢಪಡಿಸಿವೆ.
ತಾಯಿ-ಮಗುವಿನ ಮರಣ ಪ್ರಮಾಣ ತಡೆಗಟ್ಟಿ, ಅವರ ಆರೈಕೆಗಾಗಿಯೇ ಮೀಸಲಾದ ಅತ್ಯಾಧುನಿಕ ಆಸ್ಪತ್ರೆಯಲ್ಲಿಹಲವು ವಿಶೇಷ ವಿಭಾಗಗಳಿವೆ. ಇಪ್ಪತ್ನಾಲ್ಕು ಗಂಟೆ ಹೆರಿಗೆ ಸೇವೆ, ತುರ್ತು ಸಿಸೇರಿಯನ್ ಗಾಗಿ ಆಪರೇಷನ್ ಥಿಯೇಟರ್ ಗಳು, ನವಜಾತ ಶಿಶುಗಳಿಗಾಗಿ ಮಕ್ಕಳ ತೀವ್ರನಿಗಾ ಘಟಕ, ಎನ್ ಐಸಿಯು, ಅತಿ ಕಡಿಮೆ ತೂಕದ ಮಕ್ಕಳಿಗಾಗಿ ಎಂಎನ್ ಸಿಯು, ತಾಯಂದಿರಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ, ಕೌನ್ಸೆಲಿಂಗ್ ಕೊಠಡಿ, ರಕ್ತ ಸಂಗ್ರಹ ಘಟಕ, ಸುಸಜ್ಜಿತ ಪ್ರಯೋಗಾಲಯ, ಆಂಬ್ಯುಲೆನ್ಸ್ ಸೇವೆಗಳನ್ನು ಈ ಆಸ್ಪತ್ರೆ ಒಳಗೊಂಡಿದೆ.
ಸಿಬ್ಬಂದಿ ಮಾಹಿತಿ:
ತಾಯಿ ಮಕ್ಕಳ ಆಸ್ಪತೆಗೆ ಸರಕಾರಿ ಆಸ್ಪತ್ರೆಯಿಂದ 3 ಜನ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರು, ಇಬ್ಬರು ಅರಿಳಿಕೆ ತಜ್ಞರು, ಮಕ್ಕಳ ತಜ್ಞರು, ಜನರಲ್ ಫಿಜಿಷಿಯನ್ , 10 ಸ್ಟಾಫ್ ನರ್ಸ್ ಗಳು, 15 ನರ್ಸಿಂಗ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಇಬ್ಬರು ಡಾಟಾ ಎಂಟ್ರಿ ಆಪರೇಟರ್ ಗಳು, ಒಬ್ಬ ಒಟಿ ಟಿಕ್ನಿಷಿಯನ್ , 3 ಎಂಬಿಬಿಎಸ್ ವೈದ್ಯರು, 20 ಡಿ ಗ್ರೂಪ್ ನೌಕರರನ್ನು ನೇಮಕವಾಗಬೇಕಿದೆ. ಎನ್ನುವ ಮಾಹಿತಿ ಇದೆ. ಶೀಘ್ರ ಆಸ್ಪತ್ರೆಗೆ ಅವಶ್ಯಕವಿರುವ ಸಿಬ್ಬಂದಿ ನೇಮಕಾತಿ ಮಾಡಿ ಬಹುವರ್ಷಗಳಿಂದ ಕಾಯುತ್ತಿರುವ ಜನರಿಗೆ ಸರಕಾರ ಅನುಕೂಲ ಕಲ್ಪಿಸಬೇಕಿದೆ.
ವರ್ಷದಿಂದ ನನೆಗುದಿಗೆ ಬಿದ್ದಿದ್ದ ಆಸ್ಪತ್ರೆಯ ಉದ್ಘಾಟನೆಯ ಸಂತಸದಲ್ಲಿದ್ದ ಜನರಿಗೆ ಮಾತ್ರ ಇದು ನಿರಾಸೆ ಮೂಡಿಸಿದೆ.
ಕೋಟ್ -
ಈಗಾಗಲೇ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಚುನಾವಣೆ ನೀತಿ ಸಂಹಿತೆಯಾಗಿದ್ದರಿಂದ ಉದ್ಘಾಟನೆ ದಿನಾಂಕ ಮುಂದೂಡಲಾಗಿದೆ.
- ಡಾ.ರುದ್ರಗೌಡ ಪೊಲೀಸ್ ಪಾಟೀಲ್ , ಮುಖ್ಯ ವೈದ್ಯಾಧಿಕಾರಿ, ಲಿಂಗಸುಗೂರು.
ಕೋಟ್ -
ಬಡವರಿಗೆ ಆಸರೆಯಾಗಲು ಸರಕಾರ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಿದ್ದು ಸಂತಸ ತಂದಿತ್ತು. ವರ್ಷದಿಂದ ಉದ್ಘಾಟನೆ ಆಗದೇ ಇದ್ದದ್ದು ಬೇಸರ ಮೂಡಿಸಿತ್ತು. ಹಲವು ಹೋರಾಟಗಳ ಪರಿಣಾಮ ಇನ್ನೇನು ದಿನಾಂಕ ನಿಗದಿಯಾಯಿತು ಎನ್ನುವ ಸಮಾಧಾನದಲ್ಲಿದ್ದರೆ, ನೀತಿ ಸಂಹಿತೆ ಜಾರಿಯಾಗಿದೆ. ಅಧಿಕಾರಿಗಳಿಗೆ ಮೊದಲೇ ಇದರ ಬಗ್ಗೆ ಮಾಹಿತಿ ಇರುತ್ತದೆ. ಆದರೂ ಶೀಘ್ರ ಉದ್ಘಾಟನೆ ಮಾಡದೇ ನನೆಗುದಿಗೆ ಬಿಟ್ಟದ್ದು ಖಂಡನೀಯ.