ಫ್ರಂಟ್ ಲೀಡ್

Contributed by: Jaya shree|Vijaya Karnataka•
indian armys surgical strike is modis vision to control terrorism
ಭಾರತದ ಭಯೋತ್ಪಾದನಾ ನಿಗ್ರಹ

ನೀತಿ ಜಗತ್ತಿಗೇ ಮಾದರಿ
- ಮನ್ ಕೀ ಬಾತ್ ಕಾರ್ಯಕ್ರಮದಲ್ಲಿಪ್ರಧಾನಿ ಮೋದಿ ಬಣ್ಣನೆ

ಉಗ್ರರ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿಭಾರತೀಯ ಸೇನೆಯ ಸರ್ಜಿಕಲ್ ಸ್ಟ್ರೈಕ್ ಮತ್ತು ಆಪರೇಷನ್ ಸಿಂದೂರ ಜಗತ್ತಿಗೆ ಹೊಸ ಮಾದರಿಯನ್ನು ತೋರಿಸಿಕೊಟ್ಟಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಮಾಸಿಕ ‘ಮನ್ ಕೀ ಬಾತ್ ’ ಕಾರ್ಯಕ್ರಮದಲ್ಲಿಮಾತನಾಡಿರುವ ಅವರು, ‘‘ಉಗ್ರ ಚಟುವಟಿಕೆಗಳ ವಿರುದ್ಧ ಭಾರತವು ಶೂನ್ಯ ಸಹಿಷ್ಣು ನೀತಿ ಅನುಸರಿಸುತ್ತದೆ. ಭಯೋತ್ಪಾದನೆ ಗೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ ಎಂಬ ಸ್ಪಷ್ಟ ಸಂದೇಶವನ್ನು ನಿರ್ದಿಷ್ಟ ದಾಳಿ ಮೂಲಕ ಜಗತ್ತಿಗೆ ಸಾರಿದ್ದೇವೆ. ಜಮ್ಮು-ಕಾಶ್ಮೀರದ ಉರಿಯಲ್ಲಿಸೇನಾ ಶಿಬಿರದ ಮೇಲೆ ಭಯೋತ್ಪಾದಕರು ನಡೆಸಿದ್ದ ದಾಳಿಗೆ ಪ್ರತಿಯಾಗಿ, ಭಾರತೀಯ ಸೇನೆ 2016ರ ಸೆಪ್ಟೆಂಬರ್ 28-29ರಂದು ಗಡಿ ನಿಯಂತ್ರಣ ರೇಖೆಯನ್ನು ದಾಟಿ, ಉಗ್ರರ ನೆಲೆಗಳ ಮೇಲೆ ನಿರ್ದಿಷ್ಟ ದಾಳಿ ನಡೆಸಿತ್ತು. ನಮ್ಮ ಯೋಧರು ಗಡಿ ರೇಖೆಯನ್ನು ದಾಟಿ ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ನಡೆಸಿದ ರೀತಿಯು ಇಡೀ ಜಗತ್ತನ್ನೇ ಅಚ್ಚರಿಗೊಳಿಸಿತ್ತು. ಅದು ದೇಶದ ಭಯೋತ್ಪಾದನಾ ನಿಗ್ರಹ ನೀತಿಯ ದಿಟ್ಟ ಸಾಮರ್ಥ್ಯದ ನಿದರ್ಶನ’’ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ಇದೇ ವೇಳೆ, ಅಧ್ಯಾತ್ಮ ಮತ್ತು ಸಮಾಜ ಸೇವೆಯಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದ ವಿಶ್ವ ಹಿಂದೂ ಪರಿಷತ್ತಿನ ಮಾಜಿ ಮುಖಂಡ ಅಶೋಕ್ ಸಿಂಘಾಲ್ ಅವರ 100ನೇ ಜನ್ಮದಿನವನ್ನು ಸ್ಮರಿಸಿದ ಮೋದಿ, ರಾಮಜನ್ಮಭೂಮಿ ಚಳವಳಿಯಲ್ಲಿಅವರ ಕೊಡುಗೆಯನ್ನು ಸ್ಮರಿಸಿದರು. ಹಾಗೆಯೇ, ಒಂದು ಸಾವಿರ ವರ್ಷಗಳ ಹಿಂದೆ ಗಜನಿಯಿಂದ ಧ್ವಂಸಗೊಂಡ ಗುಜರಾತಿನ ಮೋದೇರಾ ಸೂರ್ಯ ದೇವಾಲಯದ ಇತಿಹಾಸವನ್ನು ಸ್ಮರಿಸಿ, ಇಂದು ಮೋದೇರಾ ದೇಶದ ಮೊದಲ ‘ಸೂರ್ಯ ಗ್ರಾಮ’ವಾಗಿ ರೂಪುಗೊಂಡಿರುವುದನ್ನು ಶ್ಲಾಘಿಘಿಸಿದರು.

ಮಹಾತ್ಮ ಗಾಂಧಿಯವರ ಜನ್ಮದಿನದ ಹಿನ್ನೆಲೆಯಲ್ಲಿಸ್ವಚ್ಛತೆಯ ಮಹತ್ವವನ್ನು ತಿಳಿಸಿದ ಪ್ರಧಾನಿಯವರು, ಯುವಕರು ದೇಶದ ವಿವಿಧೆಡೆ ನದಿಗಳು, ಬಾವಿಗಳು ಮತ್ತು ಕಡಲತೀರಗಳನ್ನು ಸ್ವಚ್ಛಗೊಳಿಸುವಲ್ಲಿನಿರತರಾಗಿರುವುದನ್ನು ಪ್ರಶಂಸಿಸಿದರು. ಅಲ್ಲದೆ, ಯುವಜನತೆಯನ್ನು ಮಾದಕ ವಸ್ತುಗಳ ವ್ಯಸನದಿಂದ ಮುಕ್ತಗೊಳಿಸಲು ‘ನಶಾ ಮುಕ್ತ ಯುವ ಅಭಿಯಾನ’ವನ್ನು 100 ವಾರಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದರು.

ಪೋಷಣ ಮಾಸದ ಕುರಿತು ಮಾತನಾಡುತ್ತಾ, ಛತ್ತೀಸ್ ಗಢ ಮತ್ತು ಗುಜರಾತ್ ಮುಂತಾದ ರಾಜ್ಯಗಳಲ್ಲಿಪೌಷ್ಟಿಕಾಂಶ ವೃದ್ಧಿಗೆ ಕೈಗೊಂಡಿರುವ ನಾವೀನ್ಯತಾ ಅಭಿಯಾನಗಳನ್ನು ಪ್ರಧಾನಿ ಕೊಂಡಾಡಿದರು. ವಿಶೇಷವಾಗಿ ಮಿಜೋರಾಂನಲ್ಲಿಸಮುದಾಯದ ಸಹಭಾಗಿತ್ವದಲ್ಲಿಅತಿಥಿ ಉದ್ಯಾನಗಳು ಮತ್ತು ಪೌಷ್ಟಿಕಾಂಶ ವೃದ್ಧಿಗೆ ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಶ್ಲಾಘಿಘಿಸಿದರು.

ಬಾಕ್ಸ್

ಜನಗಣತಿ ರಾಷ್ಟ್ರೀಯ ಜವಾಬ್ದಾರಿ

ದೇಶದಲ್ಲಿನಡೆಯುತ್ತಿರುವ ಜನಗಣತಿ ಪ್ರಕ್ರಿಯೆಯ ಕುರಿತು ಮಾತನಾಡಿದ ಪ್ರಧಾನಿ ಮೋದಿ , ‘‘ಇದು ಪ್ರತಿಯೊಬ್ಬ ನಾಗರಿಕನ ರಾಷ್ಟ್ರೀಯ ಜವಾಬ್ದಾರಿಯಾಗಿದೆ. ಸಾರ್ವಜನಿಕರು ಮೊಬೈಲ್ ಮೂಲಕ ಸ್ವತಃ ತಮ್ಮ ಹಾಗೂ ಕುಟುಂಬದ ವಿವರಗಳನ್ನು ಆನ್ ಲೈನ್ ಪೋರ್ಟಲ್ ನಲ್ಲಿದಾಖಲಿಸಲು ಅನುಕೂಲ ಕಲ್ಪಿಸಲಾಗಿದೆ’’ ಎಂದು ತಿಳಿಸಿದರು.