(27ಎಸ್ಸಾರೆಸ್ 6) ವಿದ್ಯಾರ್ಥಿಗಳಿಂದ ರಕ್ತದಾನ

Contributed by: keregaddemurthy@gmail.com|Vijaya Karnataka•
shirsi blood donation camp held by 27 esrss 6 students
ವಿಕ ಸುದ್ದಿಲೋಕ ಶಿರಸಿ

ಪ್ರತಿನಿತ್ಯ 2-3 ರಸ್ತೆ ಅಪಘಾತಗಳು ಘಟಿಸುತ್ತವೆ. ಇದರಲ್ಲಿಯುವಕರೇ ಹೆಚ್ಚಿನವರು ಅಪಘಾತಕ್ಕೆ ಒಳಗಾಗುತ್ತಾರೆ. ಯುವಜನತೆ ಜೀವದ ಪ್ರಾಮುಖ್ಯತೆ ಅರಿಯಬೇಕು ಎಂದು ಟಿಎಸ್ ಎಸ್ ಆಸ್ಪತ್ರೆ ರಕ್ತನಿಧಿ ಘಟಕದ ಮುಖ್ಯಸ್ಥ ಡಾ.ಪಿ.ಎಸ್ .ಹೆಗಡೆ ಹೇಳಿದರು.
ನಗರದ ಎಂ. ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿಎನ್ ಎಸ್ ಎಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎನ್ ಎಸ್ ಎಸ್ , ರೆಡ್ ಕ್ರಾಸ್ , ಎನ್ ಸಿಸಿ, ಸ್ಕೌಟ್ ಮತ್ತು ಗೈಡ್ ಘಟಕಗಳ ಸಹಯೋಗದಲ್ಲಿಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿಮಾತನಾಡಿದರು.

‘‘ಆರೋಗ್ಯವಂತ ಯುವಕರು ದೇಶದ ಶಕ್ತಿ. 18 ರಿಂದ 65 ವರ್ಷದ ಒಳಗಿನ ಎಲ್ಲಆರೋಗ್ಯವಂತ ವ್ಯಕ್ತಿಯೂ ರಕ್ತದಾನ ಮಾಡಬಹುದು. ಇಂದಿನ ಕಾಲದಲ್ಲಿರೋಗ ಹಾಗೂ ಡ್ರಗ್ಸ್ ಮುಕ್ತ ರಕ್ತವನ್ನು ಹುಡುಕುವುದು ಕಷ್ಟವಾಗಿದೆ. ದಿನನಿತ್ಯ 5 ಯುನಿಟ್ ರಕ್ತದ ಅವಶ್ಯಕತೆ ಇರುತ್ತದೆ. ರಕ್ತ ದಾನಕ್ಕಿಂತ ಪುಣ್ಯದ ಕೆಲಸ ಇನ್ನೊಂದಿಲ್ಲ,’’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ಜಿ.ಟಿ.ಭಟ್ ಮಾತನಾಡಿ, ‘‘ಮಹಾವಿದ್ಯಾಲಯದಲ್ಲಿರಕ್ತದಾನ ಶಿಬಿರ 2001ರಲ್ಲಿಮೊದಲ ಬಾರಿಗೆ ಪ್ರಾರಂಭಿಸಲಾಯಿತು. ರಕ್ತ ನೀಡುವದರಿಂದ ಹೊಸ ರಕ್ತದ ಉತ್ಪತ್ತಿ ಆಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ,’’ ಎಂದರು.

ಪ್ರೊ.ರವಿಕುಮಾರ್ ಕೋಳೆಕರ್ , ಎನ್ ಸಿಸಿ ಸಂಚಾಲಕ ಪ್ರೊ.ವಿಜಯ್ ಮಹಾಂತೇಶ್ ಉಪಸ್ಥಿತರಿದ್ದರು. ಎನ್ ಎಸ್ ಎಸ್ ಅಧಿಕಾರಿ ಡಾ.ರಾಜು ಕೂಡಗಿ ಸ್ವಾಗತಿಸಿದರು. ರೆಡ್ ಕ್ರಾಸ್ ಅಧಿಕಾರಿ ಪ್ರೊ.ರಾಘವೇಂದ್ರ ಹೆಗಡೆ ನಿರೂಪಿಸಿದರು. ನಂತರ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಅಕ್ತದಾನ ಮಾಡಿದರು.

*ಪೊಟೋ 27ಎಸ್ಸಾರೆಸ್ 6===

ಶಿರಸಿಯ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿನಡೆದ ರಕ್ತದಾನ ಶಿಬಿರದಲ್ಲಿವಿದ್ಯಾರ್ಥಿಗಳು ರಕ್ತದಾನ ಮಾಡಿದರು,