ಧರ್ಮಸ್ಥಳದ ಸೌಜನ್ಯಾ ಪ್ರಕರಣ ಮರುತನಿಖೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಪ್ರಾಮಾಣಿಕ ಅಧಿಕಾರಿಗಳನ್ನೊಳಗೊಂಡ ಎಸ್ ಐಟಿ ತಂಡ ರಚಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ ್ಯಕರ್ತೆಯರು ನಗರದ ಶನಿವಾರ ಪ್ರತಿಭಟನೆ ನಡೆಸಿದರು.ಜೆ.ಸಿ.ವೃತ್ತದಲ್ಲಿಜಮಾವಣೆಗೊಂಡ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ ್ಯಕರ್ತೆಯರು, ಸೌಜನ್ಯಾ ಸಾವಿಗೆ ನ್ಯಾಯ ಸಿಗಬೇಕು ಎಂದು ಘೋಷಣೆ ಕೂಗಿದರು. ‘‘ಸರಕಾರ ಎಸ್ ಐಟಿ ರಚನೆ ಮಾಡಿರುವುದು ಸರಿ. ಆದರೆ, ಅದರ ಬೆನ್ನಲ್ಲೇ ಎಸ್ ಐಟಿ ತಂಡದಲ್ಲಿನ ಅಧಿ ಕಾರಿಗಳ ವಿರುದ್ಧ ಅಪಸ್ವರ ಎದ್ದಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು,’’ಎಂದು ಒತ್ತಾಯಿಸಿದರು.
‘‘ಈಗ ರಚಿಸಿರುವ ನ್ಯಾಯಯುತವಾದ ತನಿಖೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲಎಂಬುದು ಜನಾಭಿಪ್ರಾಯವಾಗಿದೆ. ಇದನ್ನು ಸರಕಾರ ಗೌರವಿಸಬೇಕು. ಎಸ್ ಐಟಿ ತಂಡಕ್ಕೆ ದಕ್ಷ ಅಧಿಕಾರಿಗಳನ್ನು ನೇಮಿಸಿ ತನಿಖೆ ನಡೆಸಬೇಕು,’’ ಎಂದು ಆಗ್ರಹಿಸಿದರು.
‘‘ಯಾವುದೇ ಸರಕಾರ ಬಂದರೂ ಸೌಜನ್ಯಾ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಲೇ ಬಂದಿವೆ. ಇದು ಸರಿಯಲ್ಲ. ಧರ್ಮಸ್ಥಳದ ಸುತ್ತಮುತ್ತ ನಡೆದ ನಿಗೂಢ ಸಾವುಗಳಿಗೆ ಅಸಹಜ ಸಾವು ಎನ್ನುವುದನ್ನು ಬಿಂಬಿಸಿ ಮುಚ್ಚಿ ಹಾಕಲಾಗಿದೆ. ಸೌಜನ್ಯಾ ಪ್ರಕರಣಕ್ಕೆ ನಿರಪರಾಧಿಯೊಬ್ಬನನ್ನು ಸಿಕ್ಕಿಸಿರುವುದು ಖಂಡನೀಯ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ,’’ಎಂದು ಎಚ್ಚರಿಸಿದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ ್ಯದರ್ಶಿ ದೇವಿ, ಜಿಲ್ಲಾಘಟಕದ ಅಧ್ಯಕ್ಷ ಡಿ.ಕೆ.ಲತಾ, ಜಿಲ್ಲಾಕಾರ ್ಯದರ್ಶಿ ಸುಶೀಲಾ, ಉಪಾಧ್ಯಕ್ಷರಾದ ಶೋಭಾ, ಜಯಲಕ್ಷಿ ್ಮ, ಮುಖಂಡರಾದ ಪ್ರೇಮಾ, ಪುಟ್ಟರಸಮ್ಮ, ಸಾವಿತ್ರಮ್ಮ, ಗೌರಮ್ಮ ಭಾಗವಹಿಸಿದ್ದರು.