ಭಾರತ ಪುರುಷರಿಗೆ ರಜತ, ಮಹಿಳೆಯರಿಗೆ ಕಂಚು

Contributed by: manjunath.gowda@timesgroup.com|Vijaya Karnataka•
india wins silver and bronze in chess olympiad
ಚೆಸ್ ಒಲಿಂಪಿಯಾಡ್

ಸಮರ್ ಕಂಡ್ (ಕಜಕಸ್ತಾನ): ಭಾರತದ ಪುರುಷ ಮತ್ತು ಮಹಿಳಾ ತಂಡಗಳು 46ನೇ ಚೆಸ್ ಒಲಿಂಪಿಯಾಡ್ ನಲ್ಲಿಕ್ರಮವಾಗಿ ಬೆಳ್ಳಿ ಮತ್ತು ಕಂಚಿನೊಂದಿಗೆ ಅಭಿಯಾನ ಮುಗಿಸಿವೆ. ಭಾನುವಾರ ಮುಕ್ತಾಯಗೊಂಡ ಟೂರ್ನಿಯಲ್ಲಿಹಂಗೇರಿ ವಿರುದ್ಧದ ಅಂತಿಮ ಪಂದ್ಯದಲ್ಲಿಡ್ರಾ ಮಾಡಿಕೊಂಡ ಭಾರತ ಪುರುಷರ ತಂಡ ಟೈಬ್ರೇಕ್ ನಲ್ಲಿಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. ಏತನ್ಮಧ್ಯೆ, ಜಾರ್ಜಿಯಾ ವಿರುದ್ಧದ ಪಂದ್ಯದಲ್ಲಿಸಮಬಲ ಸಾಧಿಸಿದ ಭಾರತ ಮಹಿಳಾ ತಂಡ ಕಂಚಿನ ಪದಕ ಗೆದ್ದುಕೊಂಡಿತು.
ಮುಕ್ತ ವಿಭಾಗದ ಅಂತಿಮ ಸುತ್ತಿನಲ್ಲಿಉಕ್ರೇನ್ ವಿರುದ್ಧ 2.5-1.5 ಅಂತರದ ಗೆಲುವು ದಾಖಲಿಸಿದ ಉಜ್ಬೇಕಿಸ್ತಾನ ತಂಡ ಚಿನ್ನದ ಪದಕವನ್ನು ಮರಳಿ ತನ್ನದಾಗಿಸಿಕೊಂಡಿತು. ಒಟ್ಟು 22 ಅಂಕಗಳ ಪೈಕಿ 20 ಅಂಕ ಗಳಿಸಿದ ಉಜ್ಬೇಕಿಸ್ತಾನ 10 ಸುತ್ತುಗಳಲ್ಲಿಗೆಲುವು ಸಾಧಿಸಿತು. ಜರ್ಮನಿ ವಿರುದ್ಧದ ಒಂದು ಪಂದ್ಯದಲ್ಲಿಮಾತ್ರ ಸೋಲು ಕಂಡಿತು. ಭಾರತ ಪುರುಷರ ತಂಡ 18 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜರ್ಮನಿಯೊಂದಿಗೆ ಸಮಬಲ ಸಾಧಿಸಿತು. ಜರ್ಮನಿ ನೆದರ್ಲೆಂಡ್ಸ್ ವಿರುದ್ಧ ಗೆಲುವು ದಾಖಲಿಸಿತ್ತು. ಆದರೆ ಉತ್ತಮ ಟೈಬ್ರೇಕ್ ಅಂಕಗಳ ಆಧಾರದ ಮೇಲೆ ಭಾರತಕ್ಕೆ ಬೆಳ್ಳಿ ಪದಕ ಲಭಿಸಿದರೆ, ಜರ್ಮನಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.

ಮಹಿಳೆಯರ ವಿಭಾಗದಲ್ಲಿವಿಯೆಟ್ನಾಂ ವಿರುದ್ಧ 3-1 ಅಂತರದ ಗೆಲುವು ಸಾಧಿಸಿದ ಚೀನಾ ತಂಡ ಚಿನ್ನದ ಪದಕ ಗೆದ್ದುಕೊಂಡಿತು. ಚೀನಾ ಒಟ್ಟು 20 ಅಂಕ ಗಳಿಸಿದ್ದು, ಎರಡನೇ ಸ್ಥಾನ ಪಡೆದ ಕಜಕಿಸ್ತಾನಕ್ಕಿಂತ ಎರಡು ಅಂಕಗಳ ಮುನ್ನಡೆ ಸಾಧಿಸಿತು.