ನಾಳೆ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ

Contributed by: darapurohit@gmail.com|Vijaya Karnataka•
world press distributor day events and key participants
ನಾಳೆ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ

ಕಲಾದಗಿ: ಸ್ಥಳೀಯ ಕಾರ್ಯನಿರತ ಪತ್ರಕರ್ತರ ಬಳಗದಿಂದ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಸಭಾಭವನದಲ್ಲಿಸೆ.29ರಂದು ಬೆಳಗ್ಗೆ 11ಕ್ಕೆ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖಂಡ ಸಂಗಣ್ಣ ಮುಧೋಳ ಕಾರ್ಯಕ್ರಮ ಉದ್ಘಾಟಿಸುವರು. ಪತ್ರಕರ್ತ ದ.ರಾ.ಪುರೋಹಿತ ಅಧ್ಯಕ್ಷತೆವಹಿಸುವರು. ಬಿಜೆಪಿ ಮುಖಂಡ ಬಶೆಟ್ಟೆಪ್ಪ ಅಂಗಡಿ, ಎಪಿಎಂಸಿ ಮಾಜಿ ಅಧ್ಯಕ್ಷ ನಿಂಗಪ್ಪ ಅರಕೇರಿ, ಪ್ರಾಚಾರ್ಯೆ ಸರೋಜಿನಿ ಹೊಸಕೇರಿ, ಪಿಡಿಒ ರಾಜೇಂದ್ರ ಯಕ್ಸಂಬಿ, ಹಸನಹ್ಮದ್ ರೋಣ, ಸಿ.ಎಲ್ .ಹೂಗಾರ, ಮಲ್ಲಪ್ಪ ಜಮಖಂಡಿ, ದುಂಡಪ್ಪ ನಾಯ್ಕರ ಆಗಮಿಸುವರು. ಹಿರಿಯ ಪತ್ರಿಕಾ ವಿತರಕ ಬಸಪ್ಪ ಎಸ್ . ಪಾಣಿಶೆಟ್ಟರ ಅವರನ್ನು ಸತ್ಕರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.