4 ತಿಂಗಳಲ್ಲಿಉದ್ಘಾಟನೆಗೆ ಸೇತುವೆ ಸಿದ್ಧ

Contributed by: nkhvkkms@gmail.com|Vijaya Karnataka•
bridge ready for inauguration in 4 months
ವಿಕ ವಿಶೇಷ ನಾಯಕನಹಟ್ಟಿ ರಾಜ್ಯ ಹೆದ್ದಾರಿ 45ರಲ್ಲಿಮನಮೈನಹಟ್ಟಿ ಬಳಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ನಾಲ್ಕು ತಿಂಗಳಲ್ಲಿನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿಸೇತುವೆ ನಿರ್ಮಾಣ ಗೊಂಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಮನಮೈನಹಟ್ಟಿ ಗ್ರಾಮದ ಏಕಾಂತೇಶ್ವರ ಬಡಾವಣೆಯ ಜನರಿಗೆ ಮಳೆಗಾಲ ಬಂತೆಂದರೆ ಭಯ ಆರಂಭವಾಗುತ್ತಿತ್ತು. ಕಿರಿದಾದ ಸೇತುವೆಯಲ್ಲಿನೀರು ಸರಾಗವಾಗಿ ಸಾಗುತ್ತಿರಲಿಲ್ಲ. ದೊಡ್ಡ ಪ್ರಮಾಣದಲ್ಲಿಮಳೆಯಾದಾಗ, ನೀರು ಹಳ್ಳದ ಪಕ್ಕದಲ್ಲಿರುವ ಮನೆಗಳಿಗೆ ನುಗ್ಗುತ್ತಿತ್ತು. ಏಕಾಂತೇಶ್ವರ ಬಡಾವಣೆಯ 15ರಿಂದ 20 ಮನೆಗಳು ಹಳ್ಳದ ನೀರಿನಿಂದ ಆವೃತವಾಗುತ್ತಿದ್ದವು. ವರ್ಷದಲ್ಲಿಎರಡರಿಂದ ಮೂರು ಬಾರಿ ಬಡಾವಣೆಯ ಜನರು ಈ ತೊಂದರೆ ಅನುಭವಿಸುತ್ತಿದ್ದರು. 21.08.2024 ರಂದು ಸುರಿದ ಮಳೆಗೆ 25 ಮನೆಗಳಿಗೆ ನೀರು ನುಗ್ಗಿತ್ತು. ಅಪಾರ ಪ್ರಮಾಣ ನೀರು ಮನೆಯೊಳಗೆ ನುಗ್ಗಿದ್ದರಿಂದ ಆಹಾರ ಸಾಮಗ್ರಿಗಳು, ಬಳಕೆ ವಸ್ತುಗಳು ನೀರುಪಾಲಾಗಿದ್ದವು. ಎರಡು ದಿನಗಳ ಕಾಲ ಇಡೀ ಬಡಾವಣೆಯ ಜನರಿಗೆ ಏಕಾಂತೇಶ್ವರ ದೇವಾಲಯದಲ್ಲಿಊಟ, ವಸತಿ ಕಲ್ಪಿಸಲಾಗಿತ್ತು. ಹಳ್ಳ ದೊಡ್ಡ ಪ್ರಮಾಣದಲ್ಲಿಹರಿಯುತ್ತಿದ್ದರಿಂದ ಒಂದು ದಿನ ಪೂರ್ತಿ ರಾಜ್ಯ ಹೆದ್ದಾರಿ ಬಂದ್ ಆಗಿತ್ತು. ಹರಿದ ನೀರಿನ ರಭಸಕ್ಕೆ ಸಣ್ಣ ಪ್ರಮಾಣದ ಸೇತುವೆ ಕೊಚ್ಚಿ ಹೋಗಿತ್ತು. ಹೆದ್ದಾರಿ ವಾಹನಗಳಿಗೆ ಪರ್ಯಾಯ ಮಾರ್ಗ ಗುರುತಿಸಲಾಗಿತ್ತು. ಪ್ರತಿ ಮಳೆಗಾಲದಲ್ಲಿಜನರು ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದರು.