ಯೋಗ ಪ್ರಶಸ್ತಿಗೆ ಅರ್ಜಿ ಆಹ್ವಾನ

Contributed by: iranna.goudar@timesofindia.com|Vijaya Karnataka•
call for applications for yoga awards honoring four yoga achievers
ವಿಕ ಸುದ್ದಿಲೋಕ ಬೆಂಗಳೂರು

ಬೆಂಗಳೂರಿನ ರೋಟರಿ ಗ್ಲೋಬಲ್ ಯೋಗ ಟ್ರಸ್ಟ್ , ತಾಲೂಕು ಮಟ್ಟದ ಯೋಗ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
ಪ್ರತಿ ತಾಲೂಕಿನ ನಾಲ್ವರು ಯೋಗ ಶಿಕ್ಷಕರು , ಯೋಗ ಚಿಕಿತ್ಸಕರು, ಯೋಗ ಸಲಹೆಗಾರರು, ಯೋಗ ಗುರುಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಸಾಧಕ ಪುರುಷರಿಗಾಗಿ ಯೋಗಶ್ರೀ, ಮಹಿಳೆಯರಿಗೆ ಯೋಗ ಜ್ಯೋತಿ, ಯೋಗ ರತ್ನ, ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಯೋಗ ಯೂನಿವರ್ಸಿಟಿ ಆಫ್ ದ ಅಮೆರಿಕಾಸ್ , ಸ್ವಾಮಿ ವಿವೇಕಾನಂದ ಯೋಗ ಸಂಶೋಧನೆ ಮತ್ತು ಸಮಗ್ರ ಆರೋಗ್ಯ ಟ್ರಸ್ಟ್ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸುವ ಕಾರ್ಯಕ್ರಮದಲ್ಲಿಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ. ಯೋಗಿ ದೇವರಾಜ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಯೋಗ ಸಾಧಕರು ಜು.20ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ- 97392 94975.