ಜು.22ರೊಳಗೆ ಎಸ್ ಐಆರ್ ಪೂರ್ಣಗೊಳಿಸಿ ಪಕ್ಷದ ಬಿಎಲ್ ಒ-2

Contributed by: sulibeleprashanth@gmail.com|Vijaya Karnataka•
complete hir by july 22 congress led guidance
ಬಿಎಲ್ ಎಗಳಿಗೆ ಅಗತ್ಯ ಮಾರ್ಗದರ್ಶನ: ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಸಿ.ಆರ್ . ಗೌಡ

ವಿಕ ಸುದ್ದಿಲೋಕ ಹೊಸಕೋಟೆ ಗ್ರಾಮಾಂತರ
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯವನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಹೊಸಕೋಟೆ ವಿಧಾನಸಭಾಕ್ಷೇತ್ರದಲ್ಲಿಪಕ್ಷದ ಬಿಎಲ್ ಎ-2 ಕಾರ್ಯಕರ್ತರಿಗೆ ಅಗತ್ಯ ಮಾರ್ಗದರ್ಶನ ನೀಡಲಾಗಿದೆ ಎಂದು ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಸಿ.ಆರ್ . ಗೌಡ ಹೇಳಿದರು.

ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಬಿಎಲ್ ಎಗಳಿಗೆ ಯಡಗೊಂಡನಹಳ್ಳಿಯಲ್ಲಿಹಮ್ಮಿಕೊಂಡಿದ್ದ ಎಸ್ ಐಆರ್ ಕುರಿತ ಸಭೆಯಲ್ಲಿಮಾತನಾಡಿದ ಅವರು, ಸರಕಾರ ಕೈಗೊಂಡಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿದೆ. ಮತದಾರರ ಹೆಸರು, ವಿಳಾಸ ಹಾಗೂ ಆಧಾರ್ , ರೇಷನ್ ಕಾರ್ಡ್ , ಮತದಾರರ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ತಿದ್ದುಪಡಿ ಮಾಡುವ ಕಾರ್ಯ ನಡೆಯುತ್ತಿದೆ. ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈತಪ್ಪದಂತೆ ಬಿಎಲ್ ಒಗಳೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡಲು ಸೂಚಿಸಲಾಗಿದೆ. ಜುಲೈ 22ರೊಳಗೆ ಹೊಸಕೋಟೆ ತಾಲೂಕಿನಲ್ಲಿಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿಒಟ್ಟು 293 ಮತಗಟ್ಟೆಗಳಿದ್ದು, ಹೊಸಕೋಟೆ ಪಟ್ಟಣದಲ್ಲಿಸುಮಾರು 50 ಮತಗಟ್ಟೆಗಳು ಹಾಗೂ ಗ್ರಾಮೀಣ ಹೋಬಳಿಗಳಲ್ಲಿಉಳಿದ ಮತಗಟ್ಟೆಗಳಿವೆ. ಸರಕಾರ ನೇಮಿಸಿರುವ ಬಿಎಲ್ ಒಗಳೊಂದಿಗೆ ಪಕ್ಷದ ಬಿಎಲ್ ಎ-2 ಕಾರ್ಯಕರ್ತರು ಸೇರಿ ಫಾರಂಗಳನ್ನು ಭರ್ತಿ ಮಾಡಿಸುವುದು, ತಿದ್ದುಪಡಿಗಳನ್ನು ಪೂರ್ಣಗೊಳಿಸುವುದು ಹಾಗೂ ಮನೆಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಸಂಗ್ರಹಿಸುವ ಜವಾಬ್ದಾರಿ ವಹಿಸಬೇಕು. ಈಗಾಗಲೇ ಹೊಸಕೋಟೆ ಪಟ್ಟಣದ ಎಲ್ಲಾಬಿಎಲ್ ಎ-2 ಕಾರ್ಯಕರ್ತರ ಸಭೆ ನಡೆಸಿ, 2002 ಹಾಗೂ 2025ರ ಮತದಾರರ ಪಟ್ಟಿಗಳ ಹೋಲಿಕೆ, ಹೊಸ ಮತದಾರರ ಸೇರ್ಪಡೆ , ಹೆಸರು ತಿದ್ದುಪಡಿ ಮತ್ತು ಅಗತ್ಯ ಕ್ರಮಗಳ ಕುರಿತು ವಿವರವಾದ ತರಬೇತಿ ನೀಡಲಾಗಿದೆ. ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆ ಗಮನದಲ್ಲಿಟ್ಟುಕೊಂಡು ಮುಂದಿನ 30 ದಿನಗಳ ಕಾಲ ನಿರಂತರವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಸುವಂತೆ ಸೂಚಿಸಲಾಗಿದೆ ಎಂದರು.

ಈ ವೇಳೆ ಅನಗೊಂಡನಹಳ್ಳಿ ಹೋಬಳಿ ಕಾಂಗ್ರೆಸ್ ಮುಖಂಡ ಬೋಧನಹೊಸಹಳ್ಳಿ ಪ್ರಕಾಶ್ , ಬಮುಲ್ ನಿರ್ದೇಶಕ ಕೆಎಂಎಫ್ ಮಂಜುನಾಥ್ , ಜಿಲ್ಲಾಕಾಂಗ್ರೆಸ್ ಅಧ್ಯಕ್ಷೆ ಡಿಸಿ ಲಕ್ಷಿ ್ಮೕ, ಬಿಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಕೃಷ್ಣಮೂರ್ತಿ, ಬಾಬುರೆಡ್ಡಿ, ಸಮೇತನಹಳ್ಳಿ ಸೊಣ್ಣಪ್ಪ, ಯಡಗೊಂಡನಹಳ್ಳಿ ರಾಧಾಕೃಷ್ಣ, ನಡವತ್ತಿಕಾಂತ ರಾಜು, ಲತಾರೆಡ್ಡಿ ಇತರರು ಹಾಜರಿದ್ದರು.

ಚಿತ್ರ-11 ಹೆಚ್ ಎಸ್ ಕೆ ಜಿ 1: ಹೊಸಕೋಟೆ ತಾಲೂಕು ಯಡಗೊಂಡನಹಳ್ಳಿಯಲ್ಲಿಎಸ್ ಐಆರ್ ಕಾರ್ಯದ ಹಿನ್ನೆಲೆಯಲ್ಲಿಬಿಎಲ್ ಎಗಳ ಸಭೆಗೆ ಆಗಮಿಸಿದ್ದ ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಸಿ.ಆರ್ . ಗೌಡರನ್ನು ಅಭಿನಂದಿಸಲಾಯಿತು.