ಮಕ್ಕಳಿಗೆ ನೋಟ್ ಬುಕ್ ವಿತರಣೆ

Contributed by: chowlurmaheshgowda@gmail.com|Vijaya Karnataka•
distribution of notebooks to children in hosadurga amidst competition from private schools
ವಿಕ ಸುದ್ದಿಲೋಕ ಹೊಸದುರ್ಗ ಖಾಸಗಿ ಶಾಲೆಗಳ ಪೈಪೋಟಿ ನಡುವೆ ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಹೊಸದುರ್ಗ ತಾಲೂಕಿನ ಹಲವು ಸರಕಾರಿ ಶಾಲೆಗಳಲ್ಲಿಎಲ್ ಕೆಜಿ ತರಗತಿ ಆರಂಭಿಸಲಾಗಿದೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು. ತಾಲೂಕಿನ ಕೊಂಡಾಪುರ ಹಾಗೂ ಕೃಷ್ಣಾಪುರ ಸರಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿಎಲ್ ಕೆಜಿ ತರಗತಿ ಉದ್ಘಾಟಿಸಿ, ಮಾತನಾಡಿದರು. ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಸರಕಾರಿ ಶಾಲೆಗಳ ಮೇಲಿನ ಸಾರ್ವಜನಿಕರ ವಿಶ್ವಾಸ ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿಇಂತಹ ಪ್ರಯತ್ನಗಳು ಅಗತ್ಯವಾಗಿದ್ದು, ಶಿಕ್ಷಣದ ಬೆಳವಣಿಗೆಗೆ ಸಹಕರಿಸುತ್ತಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಜವಳಿ ಇಲಾಖೆಯ ನಿವೃತ್ತ ಜಿಲ್ಲಾಅಧಿಕಾರಿ ಪರಪ್ಪ ಅವರು, ನಿವೃತ್ತಿ ಜೀವನವನ್ನು ಸೇವಾ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದಾರೆ. ಈ ಶಾಲೆಗಳ ಎಲ್ ಕೆಜಿ ತರಗತಿ ನಿರ್ವಹಣೆಗೆ ಸಂಪೂರ್ಣ ಆರ್ಥಿಕ ನೆರವು ನೀಡುತ್ತಿದ್ದಾರೆ ಎಂದರು. ಪಿ.ಕೆ. ಪರಪ್ಪ ಪುತ್ರರು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಯಾಗಿ ಹಾಗೂ ಸೊಸೆ ಜಿಲ್ಲಾಧಿಕಾರಿಯಾಗಿ ಪಕ್ಕದ ತೆಲಂಗಾಣ ರಾಜ್ಯದಲ್ಲಿಉನ್ನತ ಹುದ್ದೆಗಳಲ್ಲಿಸೇವೆ ಸಲ್ಲಿಸುತ್ತಿದ್ದು, ತಮ್ಮ ಮಕ್ಕಳಂತೆ ಗ್ರಾಮೀಣ ಭಾಗದ ಎಲ್ಲಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಟ್ರಸ್ಟ್ ಮೂಲಕ ಶಿಕ್ಷಣ ಸೇವೆಯಲ್ಲಿತೊಡಗಿರುವುದು ಅನುಕರಣೀಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್ , ಇಸಿಒ ಶಶಿಧರ್ , ಟ್ರಸ್ಟ್ ಅಧ್ಯಕ್ಷ ಪಿ.ಕೆ. ಪರಪ್ಪ ಹಾಗೂ ವೇದಾವತಿ, ಎಂ. ಅಂಜನಪ್ಪ, ಎಸ್ ಡಿಎಂಸಿ ಅಧ್ಯಕ್ಷ ಕಾಂತರಾಜ್ , ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್ , ಗ್ರಾಪಂ ಮಾಜಿ ಸದಸ್ಯರಾದ ರಂಗನಾಥ್ , ಈಶ್ವರಪ್ಪ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿದ್ದರು.