ತಪ್ಪಿಲ್ಲದೆ ಅರ್ಜಿ ಭರ್ತಿ ಮಾಡಿ ಹೊಳಲ್ಕೆರೆ: ಮತದಾನ ಪ್ರತಿ ಪ್ರಜೆಯ ಹಕ್ಕು, ಮತ ಚಲಾಯಿಸಲು ಮತ ಪಟ್ಟಿಯಲ್ಲಿನಮ್ಮ ಹೆಸರು ಸೇರ್ಪಡೆ ಕಡ್ಡಾಯವಾಗಿದ್ದು, ಬಿಎಲ್ ಒಗಳು ಬಂದಾಗ ಅವರಿಗೆ ಸ್ಪಂದಿಸುವ ಹೊಣೆ ಪ್ರತಿಯೊಬ್ಬರ ಮೇಲಿದೆ ಎಂದು ತಹಸೀಲ್ದಾರ್ ಕೊರಲಗುಂದಿ ವಿಜಯಕುಮಾರ್ ತಿಳಿಸಿದರು. ಪಟ್ಟಣದಲ್ಲಿತಾಲೂಕು ಆಡಳಿತ, ತಾಪಂ, ಜಿಪಂ, ಸ್ವೀಪ್ ಸಮಿತಿ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿಮಂಗಳವಾರ ನಡೆದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿಮಾತನಾಡಿದರು. ತಾಪಂ ಇಒ ಶಿವಪ್ರಕಾಶ್ ಮಾತನಾಡಿ, ಅರ್ಜಿಗಳನ್ನು ಭರ್ತಿ ಮಾಡುವಾಗ ತಪ್ಪಿಲ್ಲದೇ, ಸರಿಯಾದ ರೀತಿಯಲ್ಲಿಭರ್ತಿ ಮಾಡಿ. ಹಾಗೆಯೇ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಈ ಮಾಹಿತಿ ತಿಳಿಸಬೇಕು ಎಂದರು. ತಾಪಂ, ಜಿಪಂ, ತಾಲೂಕು ಕಚೇರಿ ಹಾಗೂ ಎಂಎಂ ಪ್ರೌಢ ಶಾಲೆಯ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು. ಜು. 10. ಹೆಚ್ . ಎಲ್ . ಕೆ. 1 ಹೊಳಲ್ಕೆರೆ ಪಟ್ಟಣದಲ್ಲಿಎಸ್ ಐಆರ್ ಕುರಿತ ಜಾಗೃತಿ ಜಾಥಾಕ್ಕೆ ತಹಸೀಲ್ದಾರ್ ಕೊರಲಗುಂದಿ ವಿಜಯಕುಮಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಕಾಶ್ ಚಾಲನೆ ನೀಡಿದರು.