ವಿಕ ಸುದ್ದಿಲೋಕ ಮೊಳಕಾಲ್ಮುರು ತಾಲೂಕಿನ ನಾಗಸಮುದ್ರ ಭೋವಿ ಕಾಲೋನಿಯಲ್ಲಿವಿಜಯನಗರ ಸಾಮ್ರಾಜ್ಯ(15-16ನೇ ಶತಮಾನ) ವೀರಗಲ್ಲುಹಾಗೂ ಮಾಸ್ತಿಗಲ್ಲುಗಳು ಈಚೆಗೆ ಪತ್ತೆಯಾಗಿವೆ. ಸ್ಮಾರಕವನ್ನು ಮೂರು ಚಿತ್ರಗಳಾಗಿ ರಚಿಸಲಾ ಗಿದೆ. ಕೆಳಪಟ್ಟಿಯಲ್ಲಿವೀರನೊಬ್ಬ ಬಲ ಭಾಗದಲ್ಲಿಕುದುರೆ ಮೇಲೆ ಕುಳಿತು ಬಲಗೈಯಲ್ಲಿಎಲೆ ಭರ್ಚಿಯಿಂದ ರೌದ್ರಾವತಾರದ ಹುಲಿ ಬಾಯಲ್ಲಿತಿವಿಯುವಂತಿದೆ. ವೀರ ಪರಿವಾರದ ವರು ಕೈಗಳಲ್ಲಿಸಣ್ಣದಾದ ಕತ್ತಿಗಳಿಂದ ಹುಲಿಯ ಹೊಟ್ಟೆಗೆ ತಿವಿಯುವಂತೆ ಚಿತ್ರಿಸಲಾಗಿದೆ. ಮಧ್ಯದ ಪಟ್ಟಿಯಲ್ಲಿವೀರನು ಪತ್ನಿಯರ ಜತೆಗೂಡಿ ನಾನಾ ಭಂಗಿಗಳಲ್ಲಿಕಾಣುವಂತೆ ಚಿತ್ರಿಸಲಾಗಿದೆ. ಮೂರನೇ ಪಟ್ಟಿಯಲ್ಲಿವೀರನು ಕೈ ಮುಗಿದು ಧ್ಯಾನಾಸಕ್ತನಾಗಿ ಕುಳಿತಿದ್ದು, ತಾಯಿಯು ಶಿವಲಿಂಗಕ್ಕೆ ಪೂಜೆ ಸಲ್ಲಿಸುವಂತೆ ರಚಿಸಿ, ಬಲಭಾಗದಲ್ಲಿನಂದಿಯು ಶಿವಲಿಂಗದ ಮುಂದೆ ಮೊಣಕಾಲೂರಿ ಕುಳಿತಿದೆ. ಎಡ ಮತ್ತು ಬಲಭಾಗದಲ್ಲಿಸೂರ್ಯ, ಚಂದ್ರರನ್ನು ರಚಿಸ ಲಾಗಿದೆ ಎನ್ನುತ್ತಾರೆ ಸಂಶೋಧಕರು.