ಡೀಸೆಲ್ ಬೆಲೆ ಇಳಿಕೆಗೆ ಆಗ್ರಹ

Contributed by: ravimgl.kumar13@gmail.com|Vijaya Karnataka•
high diesel prices protesting against heavy fees and safety regulations
ವಿಕ ಸುದ್ದಿಲೋಕ ಚಿತ್ರದುರ್ಗ ಹಳೆ ವಾಹನಗಳ ಫಿಟ್ನೆಸ್ ನವೀಕರಣ ಶುಲ್ಕ ಹೆಚ್ಚಿಸಿರುವುದು, ಸರಕು ಸಾಗಾಣಿಕೆ ವಾಹನಗಳಿಗೆ ವಿಎಲ್ ಟಿಡಿ ವಿತ್ ಪ್ಯಾನಿಕ್ ಬಟನ್ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಮತ್ತು ಡೀಸೆಲ್ ಬೆಲೆ ಇಳಿಸುವಂತೆ ಆಗ್ರಹಿಸಿ ಚಿತ್ರದುರ್ಗ ಜಿಲ್ಲಾಟ್ರಕ್ಕರ್ಸ್ ಅಸೋಸಿಯೇಷನ್ ನಿಂದ ಜಿಲ್ಲಾಡಳಿತದ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು. ಹಳೆ ಸರಕು ಸಾಗಾಣಿಕೆ ವಾಹನಗಳ ಫಿಟ್ನೆಸ್ ನವೀಕರಣ ಶುಲ್ಕ ಭಾರಿ ಪ್ರಮಾಣದಲ್ಲಿಹೆಚ್ಚಳವಾಗಿರುವುದರಿಂದ ಮಾಲೀಕರ ಮೇಲೆ ಆರ್ಥಿಕ ಹೊರೆ ಜಾಸ್ತಿಯಾಗಿದೆ. ಅಲ್ಲದೆ ಡೀಸೆಲ್ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಣ್ಣ ಹಾಗೂ ಮಧ್ಯಮ ವರ್ಗದ ಹಳೆಯ ಲಾರಿ ಮಾಲೀಕರು ಹೆಚ್ಚಿನ ಶುಲ್ಕ ಭರಿಸಲು ಆಗದೆ ಅತಂತ್ರರಾಗಿದ್ದಾರೆ. ಇದರಿಂದ ಸಾರಿಗೆ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಇದನ್ನೆ ನೆಚ್ಚಿಕೊಂಡಿರುವ ಸಾವಿರಾರು ಕುಟುಂಬಗಳ ದಿನನಿತ್ಯದ ಜೀವನಕ್ಕೂ ಸಂಕಷ್ಟ ಎದುರಾಗಿದೆ. ಹಾಗಾಗಿ ಹಳೆಯ ವಾಹನಗಳ ಫಿಟ್ನೆಸ್ ನವೀಕರಣ ಶುಲ್ಕದ ಹೆಚ್ಚಳವನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದರು. ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ವಿಎಲ್ ಟಿಡಿ. ವಿತ್ ಪ್ಯಾನಿಕ್ ಬಟನ್ ಕಡ್ಡಾಯಗೊಳಿಸಿದ್ದು, ಸರಕು ಸಾಗಾಣಿಕೆ ವಾಹನಗಳಲ್ಲಿಯಾವುದೇ ಬಗೆಯ ಪ್ರಯಾಣಿಕರಿಗೆ ಅವಕಾಶವಿಲ್ಲ. ಪಬ್ಲಿಕ್ ಸರ್ವಿಸ್ ವಾಹನಗಳಿಗೆ ಮಾತ್ರ ಸರ್ವೊಚ್ಚ ನ್ಯಾಯಾಲಯ ಕಡ್ಡಾಯಗೊಳಿಸಿ ಆದೇಶಿಸಿರುವುದರಿಂದ ಸರಕು ಸಾಗಾಣಿಕೆ ವಾಹನಗಳಿಗೆ ರಿಯಾಯಿತಿ ನೀಡಿ ಲಾರಿ ಮಾಲೀಕರಿಗೆ ಆಗುತ್ತಿರುವ ಆರ್ಥಿಕ ನಷ್ಟ ತಪ್ಪಿಸುವಂತೆ ಆಗ್ರಹಿಸಿದರು. ಸಂಘದ ಪದಾಧಿಕಾರಿಗಳಾದ ಮನ್ಸೂರ್ , ವಿಶ್ವ ನಾಥ್ , ಅಬ್ದುಲ್ ಸತ್ತಾರ್ , ರೆಹಮಾನ್ , ಸಂತೋಷ್ , ಶ್ರೀನಿವಾಸ್ , ವಸೀಂ, ಲೋಕೇಶ್ , ಸಾಧಿಕ್ , ಮತ್ತಿತರರಿದ್ದರು.