ತರಳಬಾಳು ಶಾಲೆಯಲ್ಲಿಅಕ್ಷರಾಭ್ಯಾಸ ಸಂಭ್ರಮ

Contributed by: sunilsirigere78@gmail.com|Vijaya Karnataka•
literacy celebration at taralabalu school
ತರಳಬಾಳು ಶಾಲೆಯಲ್ಲಿ ಅಕ್ಷರಾಭ್ಯಾಸ ಸಂಭ್ರಮ ಭರಮಸಾಗರ: ಸಮೀಪದ ಬಹದ್ದೂರ್ ಘಟ್ಟ ಗ್ರಾಮದ ಶ್ರೀತರಳಬಾಳು ನರ್ಸರಿ ಮತ್ತು ಪ್ರಾಥಮಿಕ ಶಾಲೆಯಲ್ಲಿಶುಕ್ರವಾರ ಮಕ್ಕಳು ಅಕ್ಷರಾಭ್ಯಾಸ ಮಾಡಿದರು. ಶಾಲೆಯ ಸಲಹಾ ಸಮಿತಿ ಉಪಾಧ್ಯಕ್ಷ ಎಚ್ .ಎಸ್ .ನಾಗರಾಜಪ್ಪ ಮಾತನಾಡಿ, ವಿದ್ಯೆಯೇ ಮಕ್ಕಳ ಅಮೂಲ್ಯ ಆಸ್ತಿ. ಜ್ಞಾನದ ಅಧಿದೇವತೆ ತಾಯಿ ಸರಸ್ವತಿಯ ಆಶೀರ್ವಾದ ದೊಂದಿಗೆ ಆರಂಭವಾಗುವ ಅಕ್ಷರಾಭ್ಯಾಸವು ಮಕ್ಕಳ ಶೈಕ್ಷಣಿಕ ಬದುಕಿನ ಮೊದಲ ಮೆಟ್ಟಿಲಾಗಿದೆ ಎಂದರು. ಕಲ್ಲಮ್ಮ ಪ್ರೌಢಶಾಲೆ ಕಾರ್ಯದರ್ಶಿ ಈ.ತಿಪ್ಪಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿಶಾಲೆ ಸಲಹಾ ಸಮಿತಿ ಅಧ್ಯಕ್ಷ ಕೆ.ಬಸವರಾಜಪ್ಪ, ಸದಸ್ಯರಾದ ಎಂ.ಎಲ್ . ನಾಗರಾಜ್ , ಜಿ.ಕೆ.ಶಿವಕುಮಾರ್ , ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.