*ಸಂತ್ರಸ್ತ ರೈತರಿಗೆ ಹೆಚ್ಚಿನ ಪರಿಹಾರ ದೊರಕಿಸಿದ ಲೋಕ್ ಅದಾಲತ್

Contributed by: raju.manjunath67@gmail.com|Vijaya Karnataka•
lok adalat significant achievement providing farmers 221 crores extra compensation 35 increase
2 ಕೋಟಿ 21 ಲಕ್ಷ ಹೆಚ್ಚಿನ ಪರಿಹಾರ ಮೊತ್ತಕ್ಕೆ 48 ಪ್ರಕರಣ ಇತ್ಯರ್ಥ | 118 ಹಿರಿಯ ನಾಗರಿಕರಿಗೆ ನೆಮ್ಮದಿ

ವಿಕ ಸುದ್ದಿಲೋಕ ರಾಮನಗರ
ವಿದ್ಯುತ್ ಪ್ರಸರಣ ಮಾರ್ಗದ (ಪವರ್ ಗ್ರಿಡ್ ) ಸಂತ್ರಸ್ತ ರೈತರಿಗೆ ಶೇ.35ರಷ್ಟು ಹೆಚ್ಚಿನ ಪರಿಹಾರವನ್ನು ವಿತರಿಸುವ ಒಪ್ಪಂದದೊಂದಿಗೆ ಲೋಕ್ ಅದಾಲತ್ ನಲ್ಲಿ48 ಪ್ರಕರಣಗಳನ್ನು ರೂ.2.21 ಕೋಟಿ ಮೊತ್ತಕ್ಕೆ ಇತ್ಯರ್ಥ ಪಡಿಸಲಾಗಿದೆ.

ಶನಿವಾರ ರಾಮನಗರದ ಜಿಲ್ಲಾನ್ಯಾಯಾಲಯದಲ್ಲಿನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿಈ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ವಿದ್ಯುತ್ ಮಾರ್ಗ ಎಳೆದಿದ್ದ ಪವರ್ ಗ್ರಿಡ್ ಎನ್ ಎಂ ಟ್ರಾನ್ಸಿತ್ರ್ಮಷನ್ ಲಿಮಿಟೆಡ್ ಮತ್ತು ಸಂತ್ರಸ್ತ ರೈತರು ಒಪ್ಪಿಗೆ ಸೂಚಿಸಿದ್ದರು. ಇದರಂತೆ ನ್ಯಾಯಾಧೀಶರು, ವಕೀಲರ ಸಮ್ಮುಖದಲ್ಲಿರೈತರು ಹಾಗೂ ಸಂಸ್ಥೆಯ ಪ್ರತಿನಿಧಿಗಳು ಒಂದು ನಿರ್ಣಯಕ್ಕೆ ಬಂದು ಪ್ರಕರಣವನ್ನು ಇತ್ಯರ್ಥ ಪಡಿಸಿಕೊಂಡರು.

2019ರಲ್ಲಿಜಿಲ್ಲಾನ್ಯಾಯಾಲಯ ವ್ಯಾಪ್ತಿಯ ನಾನಾ ಭಾಗದಲ್ಲಿಕೇಂದ್ರ ಸರಕಾರ ಸಹಭಾಗಿತ್ವದ ಸಂಸ್ಥೆಯಾದ ಪವರ್ ಗ್ರಿಡ್ ಎನ್ ಎಂ ಟ್ರಾನ್ಸಿತ್ರ್ಮಷನ್ ಲಿಮಿಟೆಡ್ ರೈತರ ಜಮೀನಿನಲ್ಲಿವಿದ್ಯುತ್ ಕಂಬ, ಗೋಪುರ ಹಾಗೂ ತಂತಿಗಳನ್ನು ಹಾಕಿ, ರೈತರಿಗೆ ಪರಿಹಾರ ನೀಡಿತ್ತು. ಲೈನ್ ಹಾದು ಹೋಗುವ ಜಮೀನಿನಲ್ಲಿಮರಗಳನ್ನು ಬೆಳೆಸುವಂತಿಲ್ಲ. ಮನೆಗಳನ್ನು ಕಟ್ಟಿಕೊಳ್ಳುವಂತಿಲ್ಲ. ಬ್ಯಾಂಕ್ ಲೋನ್ ಪಡೆಯುವುದು ಕಷ್ಟ, ಇದರಿಂದ ನಮಗೆ ಅನಾಕೂಲ ಆಗುತ್ತಿದೆ. ಆದರೆ ನಮಗೆ ಕಡಿಮೆ ಪರಿಹಾರ ಕೊಡಲಾಗಿದೆ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿ ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

48 ಪ್ರಕರಣಗಳ ಪೈಕಿ 35 ಮಂದಿ ಸಂತ್ರಸ್ತ ರೈತರು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಾಗಿದ್ದರು. ಇವರು ಕಳೆದ 6 ವರ್ಷದಿಂದ ಪರಿಹಾರಕ್ಕಾಗಿ ನ್ಯಾಯಾಲಯಕ್ಕೆ ಆಗಮಿಸುತ್ತಿದ್ದರು. ಶನಿವಾರ ನಡೆದ ಲೋಕ್ ಅದಾಲತ್ ನಲ್ಲಿಜಿಲ್ಲಾಪ್ರಧಾನ ಮತ್ತು ಸತ್ರ ನ್ಯಾಯಾಧೀಶರ ಜಿಲ್ಲಾಕಾನೂನು ಸೇವೆಗಳ ಅಧ್ಯಕ್ಷ ನ್ಯಾ. ಎಂ.ಎಚ್ . ಅಣ್ಣಯ್ಯನವರ ಅವರ ಸಮ್ಮುಖದಲ್ಲಿನಡೆದ ರಾಜಿ ಸಂಧಾನ ಯಶಸ್ವಿಯಾಗಿದ್ದು, ರೈತರು ಶೇ.35 ರಷ್ಟು ಹೆಚ್ಚಿನ ಪರಿಹಾರ ಪಡೆದರು. ಈ ಪೈಕಿ ಮಾಗಡಿ ತಾಲೂಕಿನ ಒಬ್ಬ ರೈತ 32 ಲಕ್ಷ ಹೆಚ್ಚುವರಿ ಪರಿಹಾರ ಪಡೆದರು.

ಈ ಕುರಿತು ಮಾತನಾಡಿದ ನ್ಯಾಯಮೂರ್ತಿ ಎಂ.ಎಚ್ . ಅಣ್ಣಯ್ಯನವರ ಅವರು, ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿಈ ಬಾರಿ ಹಿರಿಯ ನಾಗರಿಕ ಕಕ್ಷಿದಾರರ ಪ್ರಕರಣಗಳು, ಪವರ್ ಗ್ರಿಡ್ ಮಾರ್ಗದಲ್ಲಿಹೆಚ್ಚಿನ ಪರಿಹಾರ ಕೋರಿದ್ದ ರೈತರ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ಇತ್ಯರ್ಥ ಮಾಡಿದ್ದೇವೆ. ರೈತರಿಗೆ ಶೇ.35 ರಷ್ಟು ಹೆಚ್ಚಿನ ಪರಿಹಾರವನ್ನು ಒದಗಿಸಿದ್ದೇವೆ. ಲೋಕ್ ಅದಾಲತ್ ನಿಂದ ಸಮಯ, ಖರ್ಚು ಉಳಿತಾಯವಾಗಲಿದೆ. ಪ್ರಕರಣಗಳಿಂದ ಮುಕ್ತಿ ಪಡೆದು ನೆಮ್ಮದಿಯಿಂದ ಜೀವನ ಸಾಗಿಸಬಹುದು. ಸಾರ್ವಜನಿಕರು ಲೋಕ್ ಅದಾಲತ್ ಅನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆ.ಕೆಂಪಯ್ಯ ಅವರು ಮಾತನಾಡಿ, ಕಡಿಮೆ ವ್ಯಾಜ್ಯಗಳಿರುವ ಸಮಾಜ ಶಾಂತಿ, ಸುವ್ಯವಸ್ಥೆಯಿಂದ ಇರಲಿದೆ. ಮಹಾಭಾರತ ಕಾಲದಲ್ಲೂರಾಜಿ ಸಂಧಾನದ ಮೂಲಕ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆತಿದೆ. ಲೋಕ್ ಅದಾಲತ್ ನಿಂದ ಶೀಘ್ರವಾಗಿ ಪ್ರಕರಣಗಳಿಂದ ಮುಕ್ತ ಪಡೆಯಬಹುದು. ಅಲೆದಾಟವನ್ನು ತಪ್ಪಿಸಬಹುದು. ಇದಕ್ಕೆ ವಕೀಲರು ಸಹ ಸಹಕಾರ ನೀಡಬೇಕು ಎಂದರು.

ಜಿಲ್ಲೆಯ ನಾನಾ ಪೀಠಗಳಲ್ಲಿನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿಹಿರಿಯ ನಾಗರಿಕರು ನ್ಯಾಯಾಲಯಕ್ಕೆ ಅಲೆದಾಡುವನ್ನು ತಪ್ಪಿಸುವ ಉದ್ದೇಶದಿಂದ 118 ಹಿರಿಯ ನಾಗರಿಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ಆದ್ಯತೆ ಮೇರೆಗೆ ಇತ್ಯರ್ಥ ಮಾಡಲಾಗಿದೆ. ಈ ವೇಳೆ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ ಪಿ.ಆರ್ . ಸೇರಿದಂತೆ ವಕೀಲರು, ಕಕ್ಷಿದಾರರು ಇದ್ದರು.

ಫೋಟೊ:

11ಆರ್ ಎನ್ ಆರ್ ಎಂ3:

ರಾಮನಗರದ ಜಿಲ್ಲಾನ್ಯಾಯಾಲಯದಲ್ಲಿನಡೆದ ಲೋಕ್ ಅದಾಲತ್ ನಲ್ಲಿರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು.