ಸರಕಾರಿ ಆಸ್ಪತ್ರೆ ಪಥ್ಯಾಹಾರದಲ್ಲಿಅಕ್ರಮ

Contributed by: skchoudhari121@gmail.com|Vijaya Karnataka•
millions of rupees corruption in government hospital meals in afzalpur
9ಎಎಫ್ ಝಡ್ 1 ಚಿತ್ರ:

ಅಫಜಲಪುರ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆ
ಚಿತ್ರ2: ಶಿವಕುಮಾರ ನಾಟೀಕಾರ

(ವಿಕ ವಿಶೇಷ ಲೋಗೋ)

ಪಥ್ಯಾಹಾರ ಪೂರೈಕೆಯಲ್ಲಿಲಕ್ಷಾಂತರ ರೂ. ದುರ್ಬಳಕೆ | ಬೋಗಸ್ ಬಿಲ್ ಸೃಷ್ಟಿಸಿದ ಅಧಿಕಾರಿಗಳು

ಸರಕಾರಿ ಆಸ್ಪತ್ರೆ ಪಥ್ಯಾಹಾರದಲ್ಲಿಅಕ್ರಮ

ಶಕೀಲ್ ಚೌಧರಿ, ಅಫಜಲಪುರ

sk್ಚhಟ್ಠdha್ಟಜಿ121ಃಜಞaಜ್ಝಿ.್ಚಟಞ

ಇಲ್ಲಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿರೋಗಿಗಳಿಗೆ ಪೌಷ್ಟಿಕಾಂಶ ಹೊಂದಿರುವ ಪಥ್ಯಾಹಾರ ವಿತರಣೆಯಲ್ಲಿಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

ಆಸ್ಪತ್ರೆಯಲ್ಲಿರೋಗಿಗಳಿಗೆ 15 ತಿಂಗಳುಗಳ ಕಾಲ ಪಥ್ಯಾಹಾರ ಪೂರೈಕೆಯಲ್ಲಿ77,71,938 ರೂ. ಹಣ ದುರ್ಬಳಕೆ ಆಗಿರುವುದು ದಾಖಲೆಗಳಿಂದ ಬಯಲಾಗಿದೆ. ಆಸ್ಪತ್ರೆಯ ಈಗಿನ ಆಡಳಿತ ವೈದ್ಯಾಧಿಕಾರಿ ಡಾ.ಅಭಯಕುಮಾರ ಅವರು, ಸೆಪ್ಟೆಂಬರ್ 2025ರಂದು ಆಸ್ಪತ್ರೆಯ ಜವಾಬ್ದಾರಿ ವಹಿಸಿಕೊಂಡು ಜನವರಿ 2024ರಿಂದ 2025ರೊಳಗಿನ ಆಸ್ಪತ್ರೆಯಲ್ಲಿದಾಖಲಾಗಿರುವ ರೋಗಿಗಳಿಗೆ ಬೆಳಗ್ಗೆ ಹಾಲು, ಬ್ರೆಡ್ , ಉಪಹಾರ, ಮಧ್ಯಾಹ್ನ ಊಟ, ಸಾಯಂಕಾಲ ಟೀ ಹಾಗೂ ರಾತ್ರಿ ಊಟ ನೀಡಲಾಗಿದೆ ಎಂದು ತರಾತುರಿಯಲ್ಲಿಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾರದಾ ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ದೇಶ ಅಭಿವೃದ್ಧಿ ಸಂಸ್ಥೆ ಎಂಬ ಮಳಿಗೆದಾರರೊಂದಿಗೆ ಶಾಮೀಲಾಗಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ.

ಒಂದೇ ಸಮಯದಲ್ಲಿಸಿದ್ಧಪಡಿಸಿದ ತಿಂಗಳವಾರು ರಸೀದಿಗಳ ಮೇಲೆ 18 ಮಾರ್ಚ್ 2026 ಎಂದು ಒಂದೆರಡು ವರ್ಷಗಳ ನಂತರದ ದಿನಾಂಕವನ್ನು ನಮೂದು ಮಾಡಿದ್ದಾರೆ. ಅಲ್ಲದೇ ರಸೀದಿಗಳ ಬಿಲ್ ಸಂಖ್ಯೆ (2940 ರಿಂದ 2950 ಹಾಗೂ 3701ರಿಂದ 3704) ಎಲ್ಲಬಿಲ್ಲುಗಳನ್ನು ಒಂದೇ ಸಮಯದಲ್ಲಿತಯಾರಿಸಲಾಗಿದೆ. ಇದರಿಂದ ನಿಸ್ಸಂಶಯವಾಗಿ ಭ್ರಷ್ಟಾಚಾರ ನಡೆದಿದೆ ಕಂಡು ಬರುತ್ತದೆ. ಹೀಗಾಗಿ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಾಕ್ಸ್ ***

ಭ್ರಷ್ಟಾಚಾರಕ್ಕೆ ಇಂಬು ನೀಡುವ ಅಂಶಗಳು

ಶಾರದಾ ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ದೇಶ ಅಭಿವೃದ್ಧಿ ಸಂಸ್ಥೆ ಮಳಿಗೆಯವರು, ಜನವರಿ 2024ರಿಂದ 2025ರವರೆಗೆ ಪಥ್ಯಾಹಾರ ಸರಬರಾಜು ಮಾಡಿದ್ದೇ ಆದಲ್ಲಿರಸೀದಿಗಳನ್ನು ಆಯಾ ತಿಂಗಳುಗಳಲ್ಲಿಯೇ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಿಗೆ ಏಕೆ ಸಲ್ಲಿಸಿಲ್ಲ?, ಎರಡು ವರ್ಷಗಳ ನಂತರ ಏಕೆ ಸಲ್ಲಿಸಲಾಯಿತು?, ಡಾ.ಅಭಯಕುಮಾರ ಅವರು ಚಾಲ್ತಿಯಲ್ಲಿರುವ ಆರ್ಥಿಕ ವರ್ಷವನ್ನು ಬಿಟ್ಟು ಅವರಿಗೆ ಸಂಬಂಧವಿರದ ಹಿಂದಿನ ಅವಧಿಯ ರಸೀದಿ ಬಿಲ್ಲುಗಳನ್ನು ಸಲ್ಲಿಸಲು ಮಳಿಗೆದಾರರಿಗೆ ಏಕೆ ಪತ್ರ ಬರೆದರು?, ಹಾಗೂ ಹಿಂದಿನ ಅವಧಿಯ ರಸೀದಿಗಳ ಮೇಲೆ ತಾವೇ ಖುದ್ದು ರುಜು ಮಾಡಿ ದೃಢೀಕರಿಸಿದ್ದು ನಿಯಮ ಬಾಹಿರವಲ್ಲವೇ?, ಇಷ್ಟು ದೊಡ್ಡ ಮೊತ್ತದ ಬಿಲ್ ಗಳನ್ನು ಪಾವತಿಸುವಾಗ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರಿಗೆ ಹಾಗೂ ಇತರೆ ಸದಸ್ಯರಿಗೆ ಯಾವುದೇ ಮಾಹಿತಿ ಏಕಿಲ್ಲ?, ನಿಯಮಾನುಸಾರ ಮಳಿಗೆಯ ಸ್ಥಳೀಯ ಘಟಕವು ಆ ಅವಧಿಯಲ್ಲಿಅಫಜಲಪುರ ಪುರಸಭೆಯಿಂದ ಕೇಟರಿಂಗ್ ಉದ್ದಿಮೆ ಪರವಾನಗಿ ಪತ್ರ ಪಡೆದಿರಬೇಕು. ಆದರೆ ಅಂತಹ ಯಾವುದೇ ಪರವಾನಗಿಯನ್ನು ಮಳಿಗೆದಾರರು ಪಡೆದಿರುವುದಿಲ್ಲಎನ್ನುವುದು ದೃಢಪಟ್ಟಿದೆ.

ಶಾರದಾ ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ದೇಶ ಅಭಿವೃದ್ಧಿ ಸಂಸ್ಥೆಯ ನಕಲಿ ಬಿಲ್ಲುಗಳಿಗೆ ಕೆ-2 ಮೂಲಕ ಹಣ ಸಂದಾಯ ಮಾಡಲಾಗಿದೆ. ನಿಜಾಂಶವೇನೆಂದರೆ ಮಳಿಗೆಯ ಸ್ಥಳೀಯ ಘಟಕವು ಅಫಜಲಪುರ ಕ್ಷೇತ್ರದಲ್ಲಿಎಲ್ಲಿಯೂ ಇಲ್ಲ, ಹೀಗಿದ್ದಾಗ ಮಳಿಗೆಯವರು ಆಸ್ಪತ್ರೆಯಲ್ಲಿಯಾವುದೇ ಪಥ್ಯಾಹಾರ ಹೇಗೆ ನೀಡಲು ಸಾಧ್ಯ ಎಂಬ ಪ್ರಶ್ನೆಗಳು ಎದುರಾಗಿವೆ.

ಕೋಟ್ ***

ಅಫಜಲಪುರ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿಪಥ್ಯಾಹಾರ ಸರಬರಾಜಿನ ಹೆಸರಿನಲ್ಲಿಲಕ್ಷಾಂತರ ರೂ. ಲೂಟಿ ಹೊಡೆದಿದ್ದಾರೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಶಾಸಕ ಎಂ.ವೈ.ಪಾಟೀಲ…, ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಗಮನಕ್ಕೆ ಇಲ್ಲದೇ ಈ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ.

-ಶಿವಕುಮಾರ ನಾಟೀಕಾರ, ರಾಜ್ಯಾಧ್ಯಕ್ಷ, ಜೆಡಿಎಸ್ ಹಿಂದುಳಿದ ವರ್ಗಗಳ ವಿಭಾಗ

ಕೋಟ್ ****

ಆರ್ ಟಿಐ ಮೂಲಕ ನಾವೇ ದಾಖಲಾತಿಗಳನ್ನು ಕೊಟ್ಟಿದ್ದೇವೆ. ನನ್ನ ಅವಧಿಯಲ್ಲಿಭ್ರಷ್ಟಾಚಾರ ನಡೆದಿದೆ ಅಥವಾ ಇಲ್ಲಎಂದು ತನಿಖೆ ನಂತರವೇ ಉತ್ತರ ಸಿಗಲಿದೆ. -ಡಾ.ಅಭಯಕುಮಾರ, ಆಡಳಿತ ವೈದ್ಯಾಧಿಕಾರಿ

ಬಾಕ್ಸ್

ಬಿಲ್ ವಿವರ

ಕ್ರ. ಸಂ. - ರಸೀದಿ ಸಂಖ್ಯೆ - ರೋಗಿಗಳ ಸಂಖ್ಯೆ - ಬಿಲ್ ಮೊತ್ತ (ರೂ)

1. 2920 - 1666 - 437325

2. 2941 - 2260 - 593250

3. 2942 - 2346 - 615823

4. 2943 - 1709 - 447667

5. 2944 - 2670 - 700875

6. 2945 - 2110 - 553876

7. 2946 - 1994 - 523425,

8. 2947 - 1413 - 370912

9. 2948 - 2256 - 592200

10. 2949 - 1888 - 495600

11. 2950 - 1318 - 345975

12. 3701 - 1279 - 335737

13. 3702 - 1561 - 409762

14. 3703 - 2600 - 682500

15. 3704 - 2541 - 667012

ಒಟ್ಟು 77,71,938